Untitled Document
Sign Up | Login    
ರಾಜ್ಯದಲ್ಲಿ ನಡೆಯಲಿದೆ ಲಗೋರಿ ಲೀಗ್‌!


ಪಕ್ಕಾ ಗ್ರಾಮೀಣ ಕ್ರೀಡೆಯಾದ ಲಗೋರಿಯನ್ನೂ ಐಪಿಎಲ್‌ ಮಾದರಿಯಲ್ಲಿ ನಡೆಸಲು ವೇದಿಕೆ ಸಿದ್ಧವಾಗಿದೆ. ಭಾರತದಲ್ಲಿ ಐಪಿಎಲ್‌ ಮಾದರಿಯಲ್ಲಿ ಕಬಡ್ಡಿ ಲೀಗ್‌ ನಡೆದು ಭರ್ಜರಿ ಯಶಸ್ಸು ಕಂಡಾಗ ಕ್ರೀಡಾಭಿಮಾನಿಗಳು ಅಚ್ಚರಿ ಪಟ್ಟಿದ್ದರು. ಈಗ ಮತ್ತೆ ಅಚ್ಚರಿಪಡುವ ಸುದ್ದಿ ಇಲ್ಲಿದೆ. ಹೌದು, ಜ.27ರಿಂದ 30ರವರೆಗೆ ವಿಜಯಪುರದಲ್ಲಿ 'ಲಗೋರಿ ಲೀಗ್‌' ನಡೆಯಲಿದೆ. ಭಾರತೀಯ ಹವ್ಯಾಸಿ ಲಗೋರಿ ಒಕ್ಕೂಟ ಈ ಲಗೋರಿ ಲೀಗ್‌ ನಡೆಸುವ ಸಾಹಸಕ್ಕೆ ಕೈಹಾಕಿದೆ.

ಕರ್ನಾಟಕ ವಾರಿಯರ್‌ ಸೇರಿದಂತೆ ಒಟ್ಟು ಹತ್ತು ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಜ.10ರಿಂದ 15ರವರೆಗೆ ದಿಲ್ಲಿಯಲ್ಲಿ ಆಟಗಾರರ ಆಯ್ಕೆ ಆರಂಭವಾಗಲಿದೆ. ಕೂಟದಲ್ಲಿ ಪಾಕಿಸ್ಥಾನ‌, ಮಲೇಷ್ಯಾ, ನೈಜೀರಿಯಾ, ಉಗಾಂಡಾದ ವಿದೇಶಿ ಆಟಗಾರರೂ ಭಾಗವಹಿಸಲಿದ್ದಾರೆನ್ನುವುದು ವಿಶೇಷ.

ಈ ಲೀಗ್‌ನಲ್ಲಿ ಬೇರೆ ಬೇರೆ ದೇಶದ ಒಟ್ಟು 250 ಆಟಗಾರರು ಭಾಗವಹಿಸಲಿದ್ದಾರೆ. 50 ಕ್ರೀಡಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ವಿಜಯಪುರ ಪಂದ್ಯಾವಳಿಯ ಆತಿಥ್ಯವನ್ನು ಡಾ.ನಾಗೂರ ಶಿಕ್ಷಣ ಟ್ರಸ್ಟ್‌ ಸಮಿತಿ ವಹಿಸಿದೆ. ಟ್ರಸ್ಟ್‌ನಿಂದ ಕೂಟಕ್ಕೆ 2 ಲಕ್ಷ ರೂ. ನಗದು ನೀಡಲಾಗಿದೆ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಗೂರ ಶಿಕ್ಷಣ ಟ್ರಸ್ಟ್‌ ಮುಖ್ಯಸ್ಥ ಡಾ| ಬಾಬು ನಾಗೂರ ತಿಳಿಸಿದ್ದಾರೆ.

ಐಪಿಎಲ್‌ ಮಾದರಿಯಲ್ಲೇ ನಡೆಯಲಿರುವ ಲಗೋರಿ ಲೀಗ್‌ನಲ್ಲಿ ಭಾರತೀಯರು ಮಾತ್ರವಲ್ಲ, ವಿದೇಶಿ ಆಟಗಾರರೂ ಭಾಗವಹಿಸಲಿದ್ದಾರೆ! ಪಾಕಿಸ್ಥಾನ, ಅಫ್ಘಾನಿಸ್ಥಾನ, ಥಾಯ್ಲೆಂಡ್‌, ಭೂತಾನ್‌, ನೇಪಾಳ, ಶ್ರೀಲಂಕಾ, ಮಲೇಷ್ಯಾ, ಆಫ್ರಿಕಾ ರಾಷ್ಟ್ರಗಳಾದ ನೈಜೀರಿಯಾ, ಉಗಾಂಡಾ, ಜಿಂಬಾಬ್ವೆ, ಜೆಡ್ಡಾ ಸೇರಿದಂತೆ 12 ರಾಷ್ಟ್ರಗಳ ವಿದೇಶಿ ಬೇರೆ ತಂಡಗಳಲ್ಲಿ ಆಡಲಿದ್ದಾರೆ.

 

Author : . .

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited