Untitled Document
Sign Up | Login    
ಈರುಳ್ಳಿ ಬೆಳೆಯಲ್ಲಿ ಥ್ರಿಪ್ಸ್ ಮತ್ತು ನೇರಳೆ ಮಚ್ಚೆ ರೋಗದ ನಿರ್ವಹಣೆ


ಥ್ರಿಪ್ಸ್: ಈ ಹುಳುಗಳು ಎಲೆಗಳ ತಳಭಾಗದ ಹತ್ತಿರ ಒಟ್ಟಾಗಿದ್ದು, ಆಗಾಗ ಎಲೆಗಳ ಮೇಲೆ ಮತ್ತು ಎಲೆಗಳ ತಳಭಾಗದಲ್ಲಿ ಹರಿದಾಡಿ ರಸ ಹೀರುವುದರಿಂದ ಪ್ರಾರಂಭದಲ್ಲಿ ಎಲೆಗಳ ಮೇಲೆಲ್ಲಾ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ನಂತರ ತೀವ್ರವಾದಂತೆ ಮಚ್ಚೆಗಳು ಕೂಡಿಕೊಂಡು ದೊಡ್ಡ ಗಾತ್ರದ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ.

ಹತೋಟಿ ಕ್ರಮಗಳು: ಮಾಗಿ ಹುಳುಮೆ ಮಾಡುವುದು. ಥ್ರಿಪ್ಸ್ ಕಡಿಮೆ ಪ್ರಮಾಣದಲ್ಲಿದ್ದರೆ ಶೇ.5 ರ ಬೇವಿನ ಕಷಾಯವನ್ನು 10-15 ದಿನಗಳ ಅಂತರದಲ್ಲಿ ಸಿಂಪರಣೆ ಮಾಡಬೇಕು. ನಂತರ ನಿಯಂತ್ರಣಕ್ಕೆ ಒಂದು ಲೀಟರ್ ನೀರಿಗೆ 3 ಗ್ರಾಂ ಸೆಕ್ಟಿನ್ ಅಥವಾ 1 ಗ್ರಾಂ ಅಕ್ರೋಬ್ಯಾಟ್ ಜೊತೆಗೆ ಮ್ಯಾಂಕೋಜೆಬ್ ಅನ್ನು ಬೆರೆಸಿ ಸಿಂಪರಣೆ ಮಾಡಬೇಕು.

ಬಾಧೆ ತೀವ್ರವಿದ್ದಲ್ಲಿ 0.3 ಮಿ.ಲೀ.ಇಮಿಡಾಕ್ಲೋಪ್ರಿಡ್ ಅಥವಾ 2 ಮಿ.ಲೀ.ಪೈಪ್ರೋನಿಲ್ ಅಥವಾ ಅಸಿಫೇಟ್ 1.5 ಗ್ರಾಂ ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.

ನೇರಳೆ ಮಚ್ಚೆ ರೋಗ: ಹೆಚ್ಚಿನ ಆರ್ಧ್ರತೆ (ಶೇ.80-90) ಮತ್ತು 28-30 ಡಿಗ್ರಿ ಸೆಲಿಸಿಯಸ್ ಉಷ್ಣತೆಯಿದ್ದಾಗ, ಈ ಮಚ್ಚೆ ರೋಗ ಮೊದಲು ಹಳೇ ತೊಪ್ಪಲಿನ ಮೇಲೆ ಕಾಣಿಸುತ್ತದೆ. ಉದ್ದನೆಯ ಬಿಳಿ ಮತ್ತು ನೇರಳೆ ಬಣ್ಣದ ಮಚ್ಚೆಗಳು ಒಂದಕ್ಕೊಂದು ಕೂಡಿಕೊಂಡು, ಈ ಮಚ್ಚೆಗಳ ಮೇಲೆ ಕಪ್ಪು ಶಿಲೀಂದ್ರದ ಬೆಳವಣಿಗೆಯಾಗಿ ಎಲೆಗಳು ಒಣಗುತ್ತವೆ.

ಹತೋಟಿ ಕ್ರಮಗಳು: ಮಾಗಿ ಹುಳುಮೆ ಮಾಡುವುದು ಮತ್ತು ಬೆಳೆ ಪರಿರ್ವತನೆ ಮಾಡುವುದು.

ಗೆಡ್ಡೆ ಬರುವ ಸಮಯದಲ್ಲಿ ಒಂದು ಲೀಟರ್ ನೀರಿಗೆ 2 ಗ್ರಾಂ ಮ್ಯಾಂಕೋಜೆಬ್ ಅಥವಾ ಥೈರಾಂ 2 ಮಿ.ಲೀ. ಅಥವಾ ಕ್ಲೋರೊಥಲೋನಿಲ್ 2 ಗ್ರಾಂ ಅನ್ನು ಬೆರೆಸಿ ಸಿಂಪರಣೆ ಮಾಡಬೇಕು. ನಂತರ ನಿಯಂತ್ರಣಕ್ಕಾಗಿ ಒಂದು ಲೀಟರ್ ನೀರಿಗೆ 3 ಗ್ರಾಂ ಸೆಕ್ಟಿನ್ ಅಥವಾ 1 ಗ್ರಾಂ ಅಕ್ರೋಬ್ಯಾಟ್ ಜೊತೆಗೆ ಮ್ಯಾಂಕೋಜೆಬ್ ಅಥವಾ 2 ಗ್ರಾಂ ಪ್ರೋಫಿನೆಬ್(ಅನ್‌ಟ್ರಾಕೋಲ್) ಅನ್ನು ಬೆರೆಸಿ ಸಿಂಪರಣೆ ಮಾಡಬೇಕು. ಈ ಬಗ್ಗೆ ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.

 

Author : .. .

More Articles From Agriculture & Environment

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited