Untitled Document
Sign Up | Login    
ಭಾರತದ ಹೊಸ ಇತಿಹಾಸ ರಚನೆಗೆ ಆರ್.ಎಸ್.ಎಸ್ ನಿರ್ಧಾರ


ಭಾರತದ ಇತಿಹಾಸವನ್ನು ಹೊಸದಾಗಿ ರಚಿಸಲು ಆರ್.ಎಸ್.ಎಸ್ ನಿರ್ಧರಿಸಿದೆ. 2025ಕ್ಕೆ ಆರ್.ಎಸ್.ಎಸ್ ಸ್ಥಾಪನೆಯಾಗಿ 100 ವರ್ಷ ಸಂದಲಿರುವ ಹಿನ್ನಲೆಯಲ್ಲಿ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಪೂರ್ಣಾಂತರ್ಗತ ಇತಿಹಾಸ ಎಂಬ ಭಾರತದ ಸಮಗ್ರ ಇತಿಹಾಸದ ಪುಸ್ತಕವನ್ನು ಹೊರತರಲು ತೀರ್ಮಾನಿಸಿದೆ.

ಸರ್ಕಾರಿ ಗೆಜೆಟಿಯರ್ ಗಳಿಗಿಂತ ವಿಭಿನ್ನವಾಗಿರುವ ದೇಶದ ಪ್ರತಿ 670 ಜಿಲ್ಲೆಗಳ ಪ್ರತ್ಯೇಕ ಇತಿಹಾಸ ಪುಸ್ತಕಗಳು ಮತ್ತು ಭಾರತದ 600 ಬುಡಕಟ್ಟು ಜನಾಂಗಗಳ ಹೊತ್ತಿಗೆಯನ್ನು ಹೊರತರಲು ಉದ್ದೇಶಿಸಲಾಗಿದೆ.

ಈ ನಿಟ್ಟಿನಲ್ಲಿ ಆ.22ರಿಂದ 24ರವರೆಗೆ ಗುಜರಾತ್ ನ ಪಾಲಂಪುರದಲ್ಲಿ ಸುಮಾರು 100 ಆರ್.ಎಸ್.ಎಸ್ ನ ಶೈಕ್ಷಣಿಕ ಅಂಗಸಸ್ಥೆಯಾದ ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನೆ (ಎಬಿಐ ಎಸ್ ವೈ) ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಪೂರ್ಣಾಂತರ್ಗತ ಇತಿಹಾಸದ ರೂಪುರೇಷೆಗಳ ಬಗ್ಗೆ ನಿರ್ಧರಿಸಲಾಗುತ್ತದೆ.

ದೇಶದ ಇತಿಹಾಸದ ಅನೇಕ ಅಂಶಗಳು ಪುರಾಣಗಳಲ್ಲಿ ಅಡಗಿದ್ದು, ಪುರಾಣ ಆಧಾರಿತ ಇತಿಹಾಸ ಗ್ರಂಥ ಇದಾಗಲಿದೆ. 10 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಗುಜರಾತ್ ನಲ್ಲಿನ ಸಾಅವೇಶದ ಬಳಿಕ ಆಯಾ ರಾಜ್ಯಗಳಲ್ಲಿ ಪ್ರತ್ಯೇಕ ಸಭೆ ನಡೆಸಿ, ಅಲ್ಲಿ ಜಿಲ್ಲಾವಾರು ಇತಿಹಾಸ ತಜ್ನರನ್ನು ಗುರುತಿಸಿ ಇತಿಹಾಸ ರಚನೆ ಕಾರ್ಯ ಆರಂಭವಾಗಲಿದೆ ಎಂದು ಸಂಘ ಪ್ರಚಾರಕ ಬಾಲಮುಕುಂದ ಪಾಂಡೆ ತಿಳಿಸಿದ್ದಾರೆ.

18 ಪುರಾಣಗಳಿವೆ ಎಂಬ ಪ್ರತೀತಿ ಇದೆ. ಆದರೆ ನಿಜವಾಗಿ 106 ಪುರಾಣಗಳಿವೆ. ಸತ್ಯನಾರಾಯಣ ಕಠೆ ಇರುವ ಸ್ಕಂದಪುರಾಣ ದೊರೆತದ್ದು ಬಾಂಗ್ಲಾದೇಶದಲ್ಲಿ ಎಂದು ಅವರು ತಿಳಿಸಿದ್ದಾರೆ.

 

Author : ಬೆಂಗಳೂರ್ ವೇವ್ಸ್

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited