Untitled Document
Sign Up | Login    
ಮೋದಿ ಸರ್ಕಾರದ 30 ದಿನಗಳ ಹಿನ್ನೋಟ

.

ದೇಶವನ್ನು ಅಭಿವೃದ್ಧಿ ಪಥಕ್ಕೆ ಅರ್ಥಾತ್ ಬದಲಾವಣೆಗೆ ತರಲು 60 ತಿಂಗಳ ಅವಕಾಶ ಕೊಡಿ ಎಂದು ಲೋಕಸಭಾ ಚುನಾವಣಾ ಪೂರ್ವದಲ್ಲಿ ನರೇಂದ್ರ ಮೋದಿ ಹೇಳಿದ್ದರು. ಮೋದಿ ಸರ್ಕಾರದ ಬಗ್ಗೆ ಜನರಿಗೆ ಇನ್ನಿಲ್ಲದ ನಿರೀಕ್ಷೆ. ಮೇ 26ಕ್ಕೆ ನರೇಂದ್ರ ಮೋದಿ ಪ್ರಧಾನಿಗಾದಿಗೇರಿದ್ದು, ಇಂದಿಗೆ ತಿಂಗಳು ಪೂರ್ತಿಯಾಗಿ, ಮತ್ತೊಂದು ದಿನ ಆರಂಭವಾಗಿದೆ. ಈ ಸಂದರ್ಭದಲ್ಲಿ ಕಳೆದ ಮೂವತ್ತು ದಿನಗಳಲ್ಲಿ ಸರ್ಕಾರ ಪ್ರಮುಖ ಕಾರ್ಯಗಳ ದಿನವಹಿ ಅವಲೋಕನ ಇಲ್ಲಿದೆ.

ಮೇ 26 - ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನ - ಸಾರ್ಕ್ ರಾಷ್ಟ್ರಗಳ ನಾಯಕರು, ಮಾರಿಷಸ್ ಪ್ರತಿನಿಧಿ ಸೇರಿ 4000 ಅತಿಥಿಗಳು. ಕಾರ್ಯಕ್ರಮದ ಮೂಲಕ ಪ್ರಾದೇಶಿಕ ಬಾಂಧವ್ಯಕ್ಕೆ ಒತ್ತು ನೀಡುವ ಸಂದೇಶ ರವಾನೆ.

ಮೇ 27 - ಮೋದಿ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ- ಕಾಳಧನ ವಾಪಸ್ ತರುವ ನಿಟ್ಟಿನಲ್ಲಿ ವಿಶೇಷ ತನಿಖಾ ದಳ ರಚನೆಯ ನಿರ್ಧಾರ.

ಮೇ 28 - ಸಬಂಧಿಕರನ್ನು ಖಾಸಗಿ ಸಿಬ್ಬಂದಿಯಾಗಿ ನೇಮಕ ಮಾಡದಂತೆ ಪ್ರಧಾನಿ ಸಚಿವಾಲಯದಿಂದ ಸಚಿವರಿಗೆ ಸೂಚನೆ

ಮೇ 29 - ಮೂಲಭೂತ ಸೌಕರ್ಯವೃದ್ಧಿ, ಹೂಡಿಕೆ, ಯೋಜನೆಗಳ ಅನುಷ್ಠಾನಕ್ಕಾಗಿ ಆಡಳಿತವರ್ಗಕ್ಕೆ ಮುಕ್ತ ಅವಕಾಶ ಸೇರಿದಂತೆ 10 ಪ್ರಮುಖ ಆದ್ಯತೆಗಳನ್ನು ಗುರುತಿಸಿದ್ದು, 100 ದಿನಗಳ ಕಾರ್ಯ ಸೂಚಿಯನ್ನು ಸಿದ್ಧಪಡಿಸಲಾಯಿತು.

ಮೇ 30 - ಪಠ್ಯದಲ್ಲಿ ನನ್ನ ಪಾಠ ಬೇಡ ಎಂದ ಪ್ರಧಾನಮಂತ್ರಿ ನರೇಂದ್ರ ಮೋದಿ- ಗುಜರಾತ್, ಮಧ್ಯಪ್ರದೇಶ ಸರ್ಕಾರಗಳು ಶಾಲಾ ಪಠ್ಯದಲ್ಲಿ ನರೇಂದ್ರ ಮೋದಿ ಅವರ ಪ್ರೇರಣಾದಾಯಿ ಪಠ್ಯವನ್ನು ಅಳವಡಿಸಲು ಮುಂದಾಗಿದ್ದವು.

ಮೇ 31 - ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ರಚಿಸಲಾಗಿದ್ದ ಉನ್ನತಮಟ್ಟದ ಸಚಿವರ ಗುಂಪು (ಎಂಪವರ್ಡ್ ಗ್ರೂಪ್ ಆಫ್ ಮಿನಿಸ್ಟರ್ಸ್) ಮತ್ತು ಸಚಿವರ ಗುಂಪು(ಗ್ರೂಪ್ ಆಫ್ ಮಿನಿಸ್ಟರ್ಸ್)ಗಳನ್ನು ರದ್ದುಗೊಳಿಸಿದ ಪ್ರಧಾನಿ. ರೆಡ್ ಟೇಪಿಸಂ ಅರ್ಥಾತ್ ವಿಳಂಬ ನೀತಿಗೆ ವಿದಾಯ ಹೇಳಿದ ಮೋದಿ ಸರ್ಕಾರ್. ಪ್ರಮುಖ ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಸಚಿವಾಲಯಗಳಿಗೆ ಕಷ್ಟವಾದಲ್ಲಿ, ಪ್ರಧಾನಿ ಸಚಿವಾಲಯ ಮಧ್ಯಪ್ರವೇಶಿಸಲಿದೆ ಎಂಬ ಸಂದೇಶ ರವಾನಿಸಿತು.

ಜೂನ್ 1- ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ದೇಶದ ಆರ್ಥಿಕ ಪರಿಸ್ಥಿತಿ, ಹಣದುಬ್ಬರ ಮತ್ತು ಇತರೆ ಹಣಕಾಸು ವಿಚಾರ ಚರ್ಚೆಗೊಳಗಾಗಿತ್ತು.

ಜೂನ್ 2- ಎಲ್ಲ ಸಚಿವರನ್ನು ಮೊದಲ ಬಾರಿ ಭೇಟಿ ಮಾಡಿದ ಪ್ರಧಾನಿ ಮೋದಿ - ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ಒತ್ತು ನೀಡಬೇಕು ಎಂಬ ಸಂದೇಶ ರವಾನೆ. ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವಂತೆ ಸಲಹೆ.

ಜೂನ್ 3 - ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗೋಪಿನಾಥ ಮುಂಡೆ ದೆಹಲಿಯಲ್ಲಿ ನಡೆದ ಕಾರು ಅಪಘಾತಕ್ಕೆ ಬಲಿ. ರಸ್ತೆ ಸುರಕ್ಷತೆ ಬಗ್ಗೆ ಇನ್ನಷ್ಟು ಕಾಳಜಿ ವ್ಯಕ್ತವಾಯಿತು.

ಜೂನ್ 4 - ಅಮೆರಿಕಕ್ಕೆ ಬರಬೇಕೆಂಬ ಅಧ್ಯಕ್ಷ ಬರಾಕ್ ಒಬಾಮರ ಆಹ್ವಾನ ಸ್ವೀಕರಿಸಿದ ಮೋದಿ. ಸೆಪ್ಟೆಂಬರ್ ನಲ್ಲಿ ಮೋದಿ ಅಮೆರಿಕ ಪ್ರವಾಸ. ವಿಶ್ವಸಂಸ್ಥೆ ಸಾಮಾನ್ಯ ಸಭೆ ಉದ್ದೇಶಿಸಿ ಸೆ.30ರಂದು ಮೋದಿ ಮಾತನಾಡಲಿದ್ದಾರೆ. ಮೋದಿ ಅಮೆರಿಕ ಭೇಟಿಯ ದಿನವನ್ನು ಸೆ.26ಕ್ಕೆ ಹಿಂದೂಡುವಂತೆ ಭಾರತ ಕೇಳಿಕೊಂಡಿದೆ.

ಜೂನ್ 5 - ಪ್ರಧಾನಿ ಮೋದಿಯವರ ಮೊದಲ ವಿದೇಶ ಪ್ರವಾಸ ನೆರೆ ರಾಷ್ಟ್ರ ಭೂತಾನ್ ಗೆ ಎಂಬ ನಿರ್ಣಯ ಪ್ರಕಟ.

ಜೂನ್ 6- ಸರ್ಕಾರದ ಉನ್ನತ ಅಧಿಕಾರಿಗಳಿಗೆ 11 ಅಂಶಗಳ ಮಾಡಬೇಕಾದ ಆದ್ಯ ಕಾರ್ಯಗಳ ಪಟ್ಟಿ ರವಾನೆ.

ಜೂನ್ 7 - ಅಮೆರಿಕ ಮಾಧ್ಯಮಗಳ ಲೇಟೆಸ್ಟ್ ಸ್ಟೈಲ್ ಐಕಾನ್ ನರೇಂದ್ರ ಮೋದಿ.

ಜೂನ್ 8 - ಚೀನಾದ ಜತೆಗೆ ಸ್ಪರ್ಧಿಸುವುದಕ್ಕಾಗಿ ಕೌಶಲ್ಯ, ಕಾರ್ಯ ವರ್ಧನೆ, ಕ್ಷಿಪ್ರವಾಗಿ ಕೆಲಸ ಮುಗಿಸಬೇಕಾದ ಅಗತ್ಯ ಇದೆ ಎಂಬ ಸಂದೇಶ ರವಾನಿಸಿದ ಮೋದಿ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾರತ ಭೇಟಿ.

ಜೂನ್ 9 - ಸಂಸತ್ತಿನ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮೋದಿ ಸರ್ಕಾರದ ಧ್ಯೇಯೋದ್ದೇಶಗಳನ್ನು ತಮ್ಮ ಭಾಷಣದಲ್ಲಿ ಬಿಂಬಿಸಿದರು.

ಜೂನ್ 10 - ಆಧಾರ್ ಸೇರಿದಂತೆ ನಾಲ್ಕು ಕ್ಯಾಬಿನೆಟ್ ಸಮಿತಿಗಳನ್ನು ರದ್ದುಗೊಳಿಸಿದ ಪ್ರಧಾನಿ ಸಚಿವಾಲಯ. ಚೀನಾ ಪ್ರಧಾನಿಯ ಆಹ್ವಾನ ಸ್ವೀಕರಿಸಿದ ಮೋದಿ.

ಜೂನ್ 11- ಸಂಸತ್ತಿನಲ್ಲಿ ನರೇಂದ್ರ ಮೋದಿ ಮೊದಲ ಭಾಷಣ - ಅತ್ಯಾಚಾರ ಪ್ರಕರಣ, ಅಲ್ಪಸಂಖ್ಯಾತರ ಏಳಿಗೆ, ನಿರುದ್ಯೋಗ ಸೇರಿದಂತೆ ಹಲವು ವಿಚಾರಗಳ ಪ್ರಸ್ತಾಪ.

ಜೂನ್ 12 - ಸರ್ಕಾರದ ಜತೆಗೆ ಕೆಲಸ ನಿರ್ವಹಿಸುವ ಹಾಗೂ ದೇಶದೊಳಗೆ ಕೆಲಸ ಮಾಡುತ್ತಿರುವ ಎನ್ ಜಿಒಗಳ ವಿವರ ಕೇಳಿದ ಪಿಎಂಒ. - ಎರಡು ದಿನ ಹಿಂದೆ ಗುಪ್ತಚರ ದಳದಿಂದ ಎನ್ ಜಿಒಗಳ ಬಗ್ಗೆ ವಿಶೇಷ ವರದಿ ಸಲ್ಲಿಕೆ.

ಜೂನ್ 13 - ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಿಸಬೇಕಿದ್ದರೆ ಹಿಂಸಾಚಾರ ಮುಕ್ತ ವಾತಾವರಣ ನಿರ್ಮಿಸಬೇಕು ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಗೆ ಭಾರತದ ಪ್ರಧಾನಿ ಮೋದಿ ತಾಕೀತು. ಗಡಿ ಭಾಗದಲ್ಲಿ ದಾಳಿ ಹಿನ್ನೆಲೆ.

ಜೂನ್ 14 - ದೇಶದ ಆರ್ಥಿಕ ಸ್ಥಿತಿ ಸುಧಾರಿಸುವುದಕ್ಕಾಗಿ ಕಠಿಣ ಕ್ರಮಗಳನ್ನು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ತೆಗೆದುಕೊಳ್ಳಬೇಕಾದೀತು ಎಂಬ ಸಂದೇಶ ರವಾನಿಸಿದ ಪ್ರಧಾನಿ.

ಜೂನ್ 15- ಎರಡು ದಿನಗಳ ಭೇಟಿಗಾಗಿ ಭೂತಾನ್ ಗೆ ತೆರಳಿದ ಮೋದಿ - ಭಾರತ್ ಟು ಭೂತಾನ್ (ಬಿ2ಬಿ) ಸಂಬಂಧ ಸುಧಾರಿಸಲು ಕ್ರಮ.

ಜೂನ್ 16- ಬಜೆಟ್ ಅಧಿವೇಶನಕ್ಕೆ ಸಿದ್ಧತೆ ಆರಂಭ - ಭ್ರಷ್ಟಾಚಾರ ವಿರೋಧಿ ಮಸೂದೆ ವಿಳಂಬ ಸಾಧ್ಯತೆ ಎಂಬ ಸುಳಿವು.

ಜೂನ್ 17 - ಉತ್ತರಪ್ರದೇಶ ರಾಜ್ಯಪಾಲ ಬಿ.ಎಲ್.ಜೋಶಿ ರಾಜೀನಾಮೆ. ಇತರೆ ಏಳು ರಾಜ್ಯಗಳ ರಾಜ್ಯಪಾಲರಿಗೂ ರಾಜೀನಾಮೆ ನೀಡುವಂತೆ ಸಂದೇಶ ರವಾನೆ.

ಜೂನ್ 18 - ಭಾರತ - ರಷ್ಯಾ ನಡುವೆ ದ್ವಿಪಕ್ಷೀಯ ಮಾತುಕತೆ - ಎಫ್ ಟಿಎ ಸಾಧ್ಯತೆ ಪರಿಶೀಲನೆ ಅಧ್ಯಯನ ತಂಡ

ಜೂನ್ 19 - ಜಪಾನ್ ಭೇಟಿ ಮುಂದೂಡಿದ ಪ್ರಧಾನಿ ಮೋದಿ - ಬಜೆಟ್ ಅಧಿವೇಶನದ ಬಳಿಕ ಬರುವುದಾಗಿ ಜಪಾನ್ ಪ್ರಧಾನಿ ಶಿನ್ಝೋ ಅಬೆಗೆ ಪತ್ರ. - ವಿವಿಧ ಪ್ರಾಧಿಕಾರಿಗಳ ಅಧ್ಯಕ್ಷರಿಗೆ ಸ್ಥಾನ ತೆರವುಗೊಳಿಸುವಂತೆ ಸೂಚನೆ.

ಜೂನ್ 20 - ರೈಲ್ವೆ ಪ್ರಯಾಣದರ ಶೇಕಡ 14.2ರಷ್ಟು ಏರಿಕೆ ಮಾಡುವ ಮುನ್ಸೂಚನೆ ನೀಡಿದ ಕೇಂದ್ರ ಸರ್ಕಾರ. ಪ್ರಯಾಣದರ 14.2%, ಸರಕು ಸಾಗಣೆ ದರ 6.5% ಏರಿಕೆ ಜೂ.25ರಿಂದ ಎಂಬ ಹೇಳಿಕೆ. - ಸಾಮಾಜಿಕ ತಾಣಗಳಲ್ಲಿ ಹಾಗೂ ಅಧಿಕೃತ ಭಾಷೆಯಾಗಿ ಹಿಂದಿ ಬಳಸಲು ಸರ್ಕಾರದ ಸೂಚನೆ - ವಿಪಕ್ಷಗಳ ಪ್ರತಿರೋಧ.

ಜೂನ್ 21 - ಅಮೆರಿಕನ್ ಕಾಂಗ್ರೆಸ್ ಉದ್ದೇಶಿಸಿ ಮಾತನಾಡುವಂತೆ ಮೋದಿಗೆ ಆಹ್ವಾನ.

ಜೂನ್ 22 - ಮೋದಿಯವರ Gujarat International Finance Tec-City (GIFT) 2022ರ ವೇಳೆಗೆ 10 ಲಕ್ಷ ಉದ್ಯೋಗ ಸೃಷ್ಟಿಸುವ ನಿರೀಕ್ಷೆ.

ಜೂನ್ 23 - ಮೋದಿಯವರನ್ನು ಭೇಟಿ ಮಾಡಿದ ಸತ್ಯಮೇವ ಜಯತೆ ಕಾರ್ಯಕ್ರಮದ ಬಾಲಿವುಡ್ ನಟ ಅಮೀರ್ ಖಾನ್ - ಮಹಿಳಾ ಸುರಕ್ಷತೆ ಸೇರಿದಂತೆ ಹಲವು ವಿಚಾರ ಚರ್ಚೆ. - ಸ್ವಿಸ್‌ ಖಾತೆಗಳ ವಿವರ ನೀಡಲು ಒಪ್ಪಿದ ಸ್ವಿಸ್ ಬ್ಯಾಂಕ್‌ ಅಧಿಕಾರಿಗಳು.

ಜೂ.24 - ಸಕ್ಕರೆ ಮೇಲಿನ ಆಮದು ಸುಂಕ ಹೆಚ್ಚಿಸಿದ ಕೇಂದ್ರ ಸರ್ಕಾರ.- ಸೇನಾ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವ ನಿರ್ಣಯ ತೆಗೆದುಕೊಂಡ ಮೋದಿ ಸರ್ಕಾರ.

ಜೂ.25 - ಪ್ರತಿ ತಿಂಗಳು ಹತ್ತು ರೂ.ಗಳಂತೆ ಎಲ್‌ಪಿಜಿ ದರ ಏರಿಕೆ ಹಾಗೂ ಇತರೆ ಇಂಧನಗಳ ಬೆಲೆ ಏರಿಕೆ ಮುನ್ಸೂಚನೆ ನೀಡಿದ ಸರ್ಕಾರ. - ದೇಶಾದ್ಯಂತ ತೀವ್ರ ವಿರೋಧ - ಮುಂಬೈ ಸೇರಿದಂತೆ ಕೆಲವು ಉಪನಗರಗಳ ರೈಲ್ವೆ ಸೇವೆಯ ಪ್ರಯಾಣದರ ಏರಿಕೆ ಕಡಿತಗೊಳಿಸಲು ಚಿಂತನೆ

 

Author : ರಾಜಾ ಗುರು 

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited