Untitled Document
Sign Up | Login    
ಪರಿಸರ ಸಮಸ್ಯೆ ಪರಿಹರಿಸಿಯಾವೇ ಪ್ಲಾಸ್ಟಿಕ್ ಭಕ್ಷಕ ಸೂಕ್ಷ್ಮಾಣು ಜೀವಿಗಳು ?

ಚಿತ್ರಕೃಪೆ- ಎಎಪಿ

ನಮ್ಮ ಬೆಂಗಳೂರು, ನಮ್ಮ ಮೈಸೂರು, ನಮ್ಮ ಮಂಗಳೂರು ಹೀಗೆ ಯಾವುದೇ ಪಟ್ಟಣ ನೋಡಿದರೂ ಪ್ಲಾಸ್ಟಿಕ್ ತ್ಯಾಜ್ಯಗಳದ್ದೇ ಕಾರುಬಾರು. ಇದು ಭಾರತದ ಪರಿಸರ ಮಾಲಿನ್ಯಕಷ್ಟೇ ಕಾರಣವಲ್ಲ, ಜಗತ್ತಿನ ಬಹುದೊಡ್ಡ ಸಮಸ್ಯೆಯೂ ಹೌದು. ಇದರ ನಿವಾರಣೆಯೇ ಬಹುದೊಡ್ಡ ಸವಾಲು. ಪ್ಲಾಸ್ಟಿಕ್ ಕರಗಿಸಿ ರಸ್ತೆಗೆ, ಫ್ಲೈವುಡ್ ತಯಾರಿಕೆ ಹೀಗೆ ಹತ್ತು ಹಲವು ಮರುಬಳಕೆ ಪ್ರಯತ್ನಗಳು ನಡೆಯುತ್ತಿವೆ. ಆದರೂ ಪ್ಲಾಸ್ಟಿಕ್ ಬಳಕೆ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ಆತಂಕವೂ ಸಹಜ.

ಆದರೆ, ಇನ್ನು ಆ ಚಿಂತೆ ಬೇಡ. ಪ್ಲಾಸ್ಟಿಕ್ ತಿನ್ನುವ ಸೂಕ್ಷ್ಮಾಣು ಜೀವಿಗಳು ಸಮುದ್ರದಲ್ಲಿರುವುದನ್ನು `ದಿ ಯುನಿವರ್ಸಿಟಿ ಆಫ್ ವೆಸ್ಟರ್ನ್ ಆಸ್ಟ್ರೇಲಿಯಾ' ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಸಮುದ್ರದಲ್ಲೂ ಪ್ಲಾಸ್ಟಿಕ್ ತ್ಯಾಜ್ಯಗಳಿಗೇನೂ ಕೊರತೆಯಿಲ್ಲ. ಬಹುಕಾಲದಿಂದ ಸಮುದ್ರದಲ್ಲಿ ತೇಲುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿದ್ದರು. ಸೂಕ್ಷ್ಮದರ್ಶಕದ ಸಹಾಯದಿಂದ ಪ್ಲಾಸ್ಟಿಕ್ ತುಣುಕುಗಳನ್ನು ಪರೀಕ್ಷಿಸಿದಾಗ ಅವುಗಳಲ್ಲಿ 1000ಕ್ಕೂ ಹೆಚ್ಚು ವಿಧದ ಬ್ಯಾಕ್ಟಿರಿಯಾಗಳು ಪತ್ತೆಯಾಗಿವೆ. ಈ ಸೂಕ್ಷ್ಮಜೀವಿ(ಮರೈನ್ ಮಕ್ರೋಬ್)ಗಳು ಪ್ಲಾಸ್ಟಿಕ್ ವಸ್ತುಗಳನ್ನು ವಿಘಟನೆಗೊಳಿಸುತ್ತವೆ ಇಲ್ಲವೇ, ಅವುಗಳನ್ನು ಭಕ್ಷಿಸುತ್ತಿರುವುದು ಕಂಡುಬಂದಿದೆ. ಈ ಜೀವಿಗಳಿಂದಾಗಿ ಪ್ಲಾಸ್ಟಿಕ್ ವಸ್ತುಗಳು ಚೂರು ಚೂರಾಗಿ ತಳ ಸೇರುತ್ತಿವೆ. ಆ ಮೂಲಕ ಸಮುದ್ರದ ನೀರನ್ನು ಸ್ವಚ್ಛಗೊಳಿಸುತ್ತಿವೆ.

ಸಮುದ್ರ ತಳ ಸೇರಿದ್ದ ಪ್ಲಾಸ್ಟಿಕ್ ಚೂರುಗಳನ್ನೂ ವಿಜ್ಞಾನಿಗಳು ಸಂಗ್ರಹಿಸಿದ್ದು, ಇವು ಮೀನುಗಾರರು ಮತ್ತು ಇತರರು ಬಳಸಿದ ಆಹಾರ ಪೊಟ್ಟಣ ಹಾಗೂ ಮೀನುಗಾರಿಕಾ ಬಲೆಗಳ ಚೂರುಗಳು ಎಂಬುದನ್ನು ದೃಢೀಕರಿಸಿದ್ಧಾರೆ.

ಅಂದ ಹಾಗೆ, ಜಗತ್ತಿನ ವಿವಿಧ ದೇಶಗಳಲ್ಲಾಗಿ ಪ್ರತಿವರ್ಷ 250 ದಶಲಕ್ಷ ಟನ್ ಪ್ಲಾಸ್ಟಿಕ್ ಉತ್ಪಾದಿಸಲ್ಪಡುತ್ತಿದ್ದು, ಅದರಲ್ಲಿ 4.7ದಶಲಕ್ಷ ಟನ್ ಸಮುದ್ರದ ಒಡಲು ಸೇರುತ್ತಿದೆ ಎಂಬ ಅಂಶವೂ ಇತ್ತೀಚೆಗೆ ಬಹಿರಂಗವಾಗಿತ್ತು.

ಒಟ್ಟಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಮೇಲಿದ್ದ ಸೂಕ್ಷ್ಮಾಣು ಜೀವಿಗಳ ಕಾಲೊನಿ ಪತ್ತೆಯಿಂದಾಗಿ ಪ್ಲಾಸ್ಟಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾದ ಅಂಶವನ್ನು ಪತ್ತೆ ಹಚ್ಚಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ಸಂಶೋಧಕರು.

 

Author : ಅವತಾರ್ 

More Articles From Agriculture & Environment

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited