Untitled Document
Sign Up | Login    
ಒರಾಯನ್ ಮಾಲ್‌ನಲ್ಲಿ ಫುಟ್ಬಾಲ್ ಹಬ್ಬ- 2014


ಹಾಲಿ ಚಾಂಪಿಯನ್ ಸ್ಪೇನ್ ಟೂರ್ನಿಯಿಂದಲೇ ಹೊರಬಿದ್ದಿದ್ದು, ಜರ್ಮನಿ ಹ್ಯಾಟ್ರಿಕ್ ಗೋಲು ಬಾರಿಸಿದ್ದು, ಪೋರ್ಚುಗಲ್‌ನ ಆಟಗಾರನಿಗೆ ರೆಫರಿ ರೆಡ್ ಕಾರ್ಡ್ ತೋರಿಸಿದ್ದು, ಯವುದೇ ಗೋಲಿಲ್ಲದೆ 2 ಪಂದ್ಯಗಳು ಡ್ರಾ ಆದದ್ದು ಸೇರಿದಂತೆ ಹತ್ತು ಹಲವು ಕುತೂಹಲಗಳೊಂದಿಗೆ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ- 2014 ಮುಂದುವರಿಯುತ್ತಿದೆ. ಇದಕ್ಕಿಂತ ಕುತೂಹಲಕಾರಿ ಅಂಶಗಳನ್ನು ಕಣ್ತುಂಬಿಕೊಳ್ಳಲು ಫುಟ್ಬಾಲ್ ಪ್ರೇಮಿಗಳು ಜುಲೈ 13 ರಂದು ನಡೆಯಲಿರುವ ಫೈನಲ್‌ವರೆಗೆ ಪ್ರತಿ ಪಂದ್ಯವನ್ನು ತುದಿಗಾಲ ಮೇಲೆ ನಿಂತು ನೋಡುತ್ತಿದ್ದಾರೆ.

ಆದರೆ, ದುರಾದೃಷ್ಟವಶಾತ್ ಭಾರತೀಯ ಪ್ರೇಕ್ಷಕರಿಗೆ ಹೆಚ್ಚು ಆನಂದ ಸಿಗದಂತಾಗಿದೆ. ಏಕೆಂದರೆ, ಬಹುತೇಕ ಪ್ರಮುಖ ಪಂದ್ಯಗಳು ಮಧ್ಯರಾತ್ರಿ(ಭಾರತೀಯ ಕಾಲಮಾನದಂತೆ) ನಡೆಯುತ್ತಿವೆ. ಆದರೆ, ಈಗ ಪ್ರಮುಖ ಪಂದ್ಯಗಳನ್ನು ನೋಡಲು ಸಾಧ್ಯವಾಗಲಿಲ್ಲ ಎಂಬ ಚಿಂತೆ ಮಾಡುವ ಅಗತ್ಯವಿಲ್ಲ. ಫಿಫಾ ವಿಶ್ವಕಪ್ ಬ್ರೆಜಿಲ್ ಇದೀಗ ಬ್ರಿಗೇಡ್ ಗೇಟ್‌ವೇಯಲ್ಲಿರುವ ಒರಾಯನ್ ಮಾಲ್‌ಗೆ ಲಗ್ಗೆ ಇಟ್ಟಿದೆ.

ಒರಾಯನ್ ಮಾಲ್‌ನಲ್ಲಿ ಫುಟ್ಬಾಲ್ ಜ್ವರ:

ಇಲ್ಲಿ 6 ಅಡಿ ಉದ್ದ 6 ಅಡಿ ಅಗಲದ ಫುಟ್ಬಾಲ್ - 2014 ಎಂದು ಬರೆದಿರುವ ಆಟದ ವಿವಿಧ ಬಣ್ಣಗಳನ್ನು ಒಳಗೊಂಡಿರುವ ಕಟೌಟ್ ಜನರನ್ನು ಮಾಲ್‌ನ ಒಳಗೆ ಸ್ವಾಗತಿಸುತ್ತದೆ. ಇದರ ಜೊತೆಗೆ ಒಂದು ಬೃಹತ್ ಗಾತ್ರದ ಫುಟ್ಬಾಲ್‌ನ ಕೂಡಾ ಇಡಲಾಗಿದೆ. ಟೂರ್ನಿಯಲ್ಲಿ ಪಾಲ್ಗೊಂಡಿರುವ ಎಲ್ಲಾ 32 ದೇಶಗಳ ರಾಷ್ಟ್ರಧ್ವಜಗಳು ಮಾಲ್‌ನ ಕಂಬಗಳಲ್ಲಿ ರಾರಾಜಿಸುತ್ತಿವೆ.

ಚಿನ್ನದ ಛಫಾ ವರ್ಲ್ಡ್ ಕಪ್ ಇತಿಹಾಸದಲ್ಲಿ ಅನೇಕ ಬಾರಿ ಕಳೆದು ಹೋಗಿರಬಹುದು. ಅಥವಾ ನೀವು ಅದನ್ನು ನೋಡದೆಯೂ ಇರಬಹುದು. ಈಗ ಒರಾಯನ್ ಮಾಲ್‌ನತ್ತ ಬಂದರೆ ಇಲ್ಲಿನ ಡೆಬೆನ್‌ಹ್ಯಾಮ್ಸ್ ಸ್ಟೋರ್ ಮುಂದುಗಡೆ ಇರುವ ೧೨ ಅಡಿಯ ಟ್ರೋಫಿಯನ್ನು ನೋಡಿ ಖುಷಿ ಪಡುವ ಅವಕಾಶ ನಿಮಗೆ ಸಿಗುತ್ತದೆ.

ನೀವು ಬೆಂಬಲಿಸುವ ತಂಡದ ಬಣ್ಣಗಳೊಂದಿಗೆ ಫೋಟೋ ತೆಗೆಸಿಕೊಳ್ಳಲು ನೀವು ಬಯಸಿದರೆ- ಫುಟ್ ಬಾಲ್ ಹಬ್ಬ 2014 ಭಾಗವಹಿಸುತ್ತಿರುವ ತಂಡಗಳು ಮತ್ತು ಜೆರ್ಸಿಗಳ ಬಣ್ಣಗಳೊಂದಿಗೆ ಅನೇಕ ಫೋಟೋ-ಆಪ್ ಅವಕಾಶಗಳಿವೆ. ಇಲ್ಲಿ ನೀವು ನಿಮ್ಮ ಫೋಟೋ ತೆಗೆಸಿಕೊಂಡು ಆನಂದ ಪಡಬಹುದು. ಬ್ರೆಜಿಲ್‌ಗೆ ಹೋಗದೆಯೇ ಫುಟ್ಬಾಲ್‌ನ ಮಜಾ ಅನುಭವಿಸುವ ಸಂದರ್ಭ ನಿಮಗೆ ಇಲ್ಲಿ ಸಿಗುತ್ತದೆ - ಫ್ಯಾನ್ ಚೀಯರಿಂಗ್ ಫೊಟೋ ಬೂತ್‌ಗೆ ಹೋಗಿ, ಫಿಫಾ ಫ್ಯಾನ್ ಮೆಮೊರಬಿಲ್ಲಾದಲ್ಲಿ ಎಷ್ಟು ಸಾಧ್ಯವೋ ಅಷ್ಟು ಛಾಯಾಚಿತ್ರಗಳನ್ನು ಕೂಡಾ ತೆಗೆಸಿಕೊಳ್ಳಬಹುದು.

ಕಸ್ಟಮೈಸೇಶನ್ ಸ್ಟೇಶನ್‌ಗಳನ್ನು ಈ ಮಾಲ್‌ನಾದ್ಯಂತ ರಚಿಸಲಾಗಿದೆ. ಅದರೊಳಗೆ ಹೆಜ್ಜೆ ಇಟ್ಟು ನೀವು ಬೆಂಬಲಿಸುವ ತಂಡದ ಬಣ್ಣಗಳನ್ನು ನಿಮ್ಮ ವ್ಯಕ್ತಿತ್ವಕ್ಕೆ ಹೊಂದುವಂತೆ ಪ್ರತಿಯೊಂದು ರೀತಿಯಲ್ಲಿ- ತಲೆಕೂದಲಿನಿಂದ ಹಿಡಿದು ಉಗುರಿನ ಬಣ್ಣದಿಂದ, ಬಟ್ಟೆಗಳು ಹಾಗೂ ಇನ್ನಷ್ಟು ಸಂಗತಿಗಳ ಮೂಲಕ ಸಿಂಗರಿಸಿಕೊಳ್ಳಬಹುದು.


ನಾವೆಲ್ಲಾ ಒಂದು!:

ಫಿಫಾ ವಿಶ್ವ ಕಪ್‌ನ ಹಾಡಿಗೆ ಜತೆಯಾಗಲು ನೀವು ಬಯಸಿದರೆ, ಆಟಕ್ಕೆ ಜತೆಯಾಗುವುದಕ್ಕಿಂತ ಉತ್ತಮವಾದ ಬೇರೆ ವಿಧಾನವಿಲ್ಲ. ಒರಾಯನ್ ಮಾಲ್‌ನ ಫುಟ್‌ಬಾಲ್ ಹಬ್ಬದಲ್ಲಿ, ಅದಕ್ಕಾಗಿ ನಿಮಗೆ ಅನೇಕ ವಿನೂತನವಾದ ದಾರಿಗಳಿವೆ. ಯಾವುದಾದರೊಂದು ವಾರಾಂತ್ಯದಲ್ಲಿ ಒಬ್ಬ ಕ್ಯಾಮರಾಮನ್ ಮಾಲ್‌ನಾದ್ಯಂತ ನಿಮ್ಮನ್ನು ಹಿಂಬಾಲಿಸುತ್ತಾ ನೀವು ಭಾಗವಹಿಸುವ ವಿವಿಧ ಫುಟ್‌ಬಾಲ್ ಆಧರಿತ ಚಟುವಟಿಕೆಗಳನ್ನು ಹಾಗೂ ನಿಮ್ಮ ಎಲ್ಲಾ ಉದ್ವೇಗ, ಖುಷಿಗಳ ಕ್ಷಣಗಳನ್ನು ನೇರವಾಗಿ ಸೆರೆಹಿಡಿಯುತ್ತಾನೆ ಈ ವೀಡಿಯೊಗಳು ನಿಮ್ಮ ನೆನಪಿನ ಭಾಗವಾಗುತ್ತವೆ ಮತ್ತು ವಿಶ್ವವೇ ಇದನ್ನು ನೋಡುವ ಸಲುವಾಗಿ ಆನ್‌ಲೈನ್‌ನಲ್ಲಿ ಕೂಡಾ ನೀವು ಇದನ್ನು ಶೇರ್ ಮಾಡಬಹುದು.

ನೆಟ್ಟೆಡ್ ಗೋಲ್‌ನ ಆಟವಾಡಿ ಇಲ್ಲಿ ಒಂದು ಗರಿಷ್ಠ ಸೆಟ್ ಗೆಲ್ಲುವವರು ಪುಮಾ ದಿಂದ ಬಹುಮಾನ ಗೆಲ್ಲಬಹುದು.
ಅಥವಾ ಗೆಳೆಯರ ಜತೆ ಮುಖಾಮುಖಿಯಾಗಲು ಬಯಸಿದರೆ ಕೇಜ್ ಫುಟ್‌ಬಾಲ್ ಅರೇನಾದೊಳಕ್ಕೆ ಹೋಗಿ, ಕಾರ್ಪೆಟ್‌ನ ಮೇಲೆ ಹಾಗೂ ಬೇಲಿಯೊಳಗಿರುವ ಫುಟ್‌ಬಾಲ್ ಮೈದಾನದಲ್ಲಿ ಆರು ಆಟಗಾರರು ಆಡಬಹುದಾಗಿದೆ.

ಇನ್ನೂ ಅನೇಕ ರೋಚಕ ಸಂಗತಿಗಳಿವೆ!
ಏಟ್ರಿಯಮ್‌ನಲ್ಲಿ, ಅನೇಕ ಫ್ರೀಸ್ಟೈಲ್ ಕ್ಲಿನಿಕ್‌ಗಳಲ್ಲಿ ಭಾಗಿಯಾಗಬಹುದು, ಅದು ವಾರಾಂತ್ಯಗಳಲ್ಲಿರುತ್ತದೆ. ತಜ್ಞರಿಂದ ಕೆಲವು ಫುಟ್‌ಬಾಲ್ ಕಲೆಗಳನ್ನು ಇಲ್ಲಿ ಕಲಿಯಬಹುದು. ನೀವು ಅಲ್ಲಿರುವಾಗ, ಕೆಲವು ಉತ್ತಮ ಟ್ರಿಕ್ ಶಾಟ್‌ಗಳನ್ನು ಹೊಡೆಯುವ ಮೂಲಕ ನಿಮ್ಮ ಗೆಳೆಯರ ಮನಸ್ಸಲ್ಲಿ ಛಾಪು ಮೂಡಿಸಬಹುದು.

ಕಲೆಕ್ಟಾಬಿಲ್ಲಾ ಕಿಯೋಸ್ಕ್‌ಗೆ ಹೋದರೆ ಕೆಲವು ನೈಜ ಹಸ್ತಾಕ್ಷರಗಳನ್ನು ಕೂಡಾ ಖರೀದಿಸಿ ಮಜಾ ಪಡೆಯಬಹುದು.

ಪೌಲ್ ಆಕ್ಟೊಪಸ್ ನೀವಲ್ಲದೇ ಇರಬಹುದು. ಆದರೆ ಆತನ ಭವಿಷ್ಯ ಹೇಳುವ ಸಾಮರ್ಥ್ಯವನ್ನು ಖಂಡಿತಾ ನೀವೂ ಹೊಂದಿರಬಹುದು. ಸುಮ್ಮನೆ ನಿಮ್ಮ ಭವಿಷ್ಯ ಹೇಳುವ ಒಂದು ಅರ್ಜಿಯನ್ನು ಭರ್ತಿ ಮಾಡಿ ಮತ್ತು ನಿಮ್ಮ ೧೦ ಭವಿಷ್ಯಗಳು ಸರಿಯಾದರೆ ಬಹುಮಾನ ದೊರೆಯುತ್ತದೆ.

ಈ ಫುಟ್ಬಾಲ್ ಸಮಯದಲ್ಲಿ ನಿಮಗೆ ಬ್ರೆಜಿಲ್‌ಗೆ ಹೋಗಲು ಮಜಾ ಮಾಡಲು ಸಾಧ್ಯವಾಗದಿದ್ದರೆ ಕಡೇಪಕ್ಷ ಒರಾಯನ್ ಮಾಲ್‌ಗೆ ಹೋಗಿ ಖುಷಿ ಪಡಿ



 

Author : ವೇಣು 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited