Untitled Document
Sign Up | Login    
ಸಾವಯವ ಭಾಗ್ಯ - ರೈತರಿಗಾಗಿ ಹೊಸ ಯೋಜನೆಗಳ ಮಾಹಿತಿ


ಸಾವಯವ ಕೃಷಿಯು ಒಂದು ಸಮಗ್ರ ಉತ್ಪಾದನಾ ಕೃಷಿ ಪದ್ಧತಿಯಾಗಿದ್ದು, ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಮಣ್ಣನ ಫಲವತತೆ ಕಾಪಾಡಿಕೊಂಡು ಬರುವುದು ಹಾಗೂ ಪರಿಸರ ಸ್ನೇಹಿ ಜೈವಿಕ ವಿಧಾನಗಳಿಂದ ಕೀಟ ಮತ್ತು ರೋಗಗಳ ನಿರ್ವಹಣೆ ಕೈಗೊಂಡು ಗುಣಮಟ್ಟದ ಆಹಾರ ಉತ್ಪಾದನೆಯನ್ನು ಕೈಗೊಳ್ಳುವ ಒಂದು ಸುಸ್ಥಿರ ಬೇಸಾಯ ಪದ್ದತಿಯಾಗಿರುತ್ತದೆ.

ಸಾವಯವ ಕೃಷಿ ಉತ್ತೇಜನಕ್ಕಾಗಿ ಸರ್ಕಾರವು ಕೃಷಿ ಇಲಾಖೆ ಮೂಲಕ ಸಾವಯವ ಗ್ರಾಮ/ ಸ್ಥಳ ಯೋಜನೆಯನ್ನು 2004-05 ನೇ ಸಾಲಿನಿಂದ ಅನುಷ್ಠಾನಗೊಳಿಸುತ್ತಿದೆ. 2004-05 ನೇ ಸಾಲಿನಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಾರಂಭವಾದ ಕಾರ್ಯಕ್ರಮವನ್ನು 2006-07 ನೇ ಸಾಲಿನಿಂದ ತಾಲೂಕು ಮಟ್ಟಕ್ಕೆ ವಿಸ್ತರಿಸಲಾಯಿತು. ಸಾವಯವ ಗ್ರಾಮ/ ಸ್ಥಳ ಯೋಜನೆಯಡಿ ಗ್ರಾಮ ಅಥವಾ ಗ್ರಾಮಗಳ 100 ಹೆ. ಪ್ರದೇಶವನ್ನು ಆಯ್ಕೆಮಾಡಿ ಸಾವಯವ ಕೃಷಿ ಪದ್ಧತಿಯ ಅಳವಡಿಕೆಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿ ಸರ್ಕಾರೇತರ ಸಂಸ್ಥೆಗಳ ಮೂಲಕ ಸದರಿ ಯೋಜನೆಯಡಿ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯ ಯಶಸ್ಸನ್ನು ಮನಗಂಡು ರಾಜ್ಯ ಸರ್ಕಾರವು 2013-14 ನೇ ಸಾಲಿನಿಂದ ಸದರಿ ಯೋಜನೆಯನ್ನು ಹೋಬಳಿ ಮಟ್ಟಕ್ಕೆ ವಿಸ್ತರಿಸಿದ್ದು, ಹೋಬಳಿ ಮಟ್ಟದಲ್ಲಿ 100 ಹೆಕ್ಟೇರ್ ಪ್ರದೇಶವನ್ನು ಗುರ್ತಿಸಿ ಸರ್ಕಾರೇತರ ಸಂಸ್ಥೆಗಳ ಮುಖಾಂತರ ಸಾವಯವ ಭಾಗ್ಯ ಯೋಜನೆ ಎಂಬ ಹೆಸರಿನಲ್ಲಿ ಅನುಷ್ಠಾನಗೊಳಿಸುತ್ತಿದೆ.

ಈ ಯೋಜನೆಯ ಪ್ರಮುಖ ಅಂಶವೆಂದರೆ ಸಾವಯವ ಕೃಷಿ ಪದ್ಧತಿಯ ಅಳವಡಿಕೆಯ ಜೊತೆಗೆ ಯೋಜನಾ ಪ್ರದೇಶವನ್ನು ಪ್ರಮಾಣೀಕರಣಕ್ಕೆ ಒಳಪಡಿಸುವುದು ಹಾಗೂ ಮಾರುಕಟ್ಟೆಗೆ ಅವಕಾಶ ಕಲ್ಪಿಸುವುದು. ಸಾವಯವ ಉತ್ಪಾದಕರು, ಮಾರುಕಟ್ಟೆದಾರರು ಹಾಗೂ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶವನ್ನು ಹೊಂದಿದೆ.

ಉಡುಪಿಯಲ್ಲಿ ಸಾವಯವ ಭಾಗ್ಯ ಯೋಜನೆಯ ಗ್ರಾಮಗಳು:
ಉಡುಪಿ ಜಿಲ್ಲೆಯಲ್ಲಿ ಸಾವಯವ ಭಾಗ್ಯ ಯೋಜನೆಯನ್ನು (ಈಗಾಗಲೇ ಸಾವಯವ ಗ್ರಾಮ/ ಸ್ಥಳ ಯೋಜನೆ ಅನುಷ್ಠಾನದಲ್ಲಿರುವ 3 ಹೋಬಳಿಗಳನ್ನು ಹೊರತುಪಡಿಸಿ) 6 ಹೋಬಳಿಗಳಲ್ಲಿ ಅನುಷ್ಠಾನಗೊಳಿಸುತ್ತಿದೆ. ಉಡುಪಿ ತಾಲೂಕಿನ ಕಾಪು,ಕೋಟ ಹೋಬಳಿ, ಹಿರೇಬೆಟ್ಟು, ಕಟ್ಟಿಂಗೇರಿ, ಕಾಡೂರು ಗ್ರಾಮ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಸರ್ಕಾರೇತರ ಸಂಸ್ಥೆ ಸ್ಕೋಡ್ ವೆಸ್ ಸಂಸ್ಥೆ (ರಿ), ಶಿರಸಿ. ಕುಂದಾಪುರ ತಾಲೂಕಿನ ಬೈಂದೂರು, ಹೋಬಳಿ, ತಗ್ಗರ್ಸೆ-ಯಳಜಿತ್ ಗ್ರಾಮ, ಸಹ್ಯಾದ್ರಿ ಹಾರ್ಟಿಕಲ್ಚರ್ ಔಟ್ ಪುಟ್ ಡೆವಲಪ್ ಮೆಂಟ್ ,ಕಾರ್ಕಳ ತಾಲೂಕು, ಅಜೆಕಾರು ಹೋಬಳಿ, ಬೆಳಂಜೆ ಗ್ರಾಮ, ಅಸೊಶೀಯೇಷನ್, ನಿಟ್ಟೂರು, ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳಡಿ ಯೋಜನೆಯ ವ್ಯಾಪ್ತಿಯ ರೈತರು ಈ ಕೆಳಕಂಡ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಸಾವಯವ ಭಾಗ್ಯ ಯೋಜನೆಯಡಿ ರೈತರು ಪ್ರತಿ ಹೋಬಳಿಯ 100 ಹೆಕ್ಟೇರ್ ಪ್ರದೇಶವನ್ನು ಸಾವಯವ ಕೃಷಿಗೆ ಪರಿವರ್ತಿಸುವ ಕುರಿತಂತೆ ನಡೆಸಲಾಗುವ ತರಬೇತಿ ಕಾರ್ಯಕ್ರಮಗಳಲ್ಲಿ ಯೋಜನಾ ಪ್ರದೇಶದ ರೈತರೊಂದಿಗೆ ಯೋಜನಾ ಪ್ರದೇಶದ ಹೊರಗಿನ ರೈತರುಗಳು ಸಹ ಭಾಗವಹಿಸಲು ಅವಕಾಶವಿದೆ. ಸಾವಯವ ಭಾಗ್ಯ ಯೋಜನೆಯ ಅನುಷ್ಠಾನ ಪ್ರದೇಶಗಳಿಗೆ ರೈತರುಗಳು ಭೇಟಿ ನೀಡಿ ಸಾವಯವ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ರೈತರಿಗೆ ರಿಯಾಯಿತಿ ದರದಲ್ಲಿ ಹಸಿರಲೆ ಗೊಬ್ಬರ ಬೀಜಗಳು, ದೇಶೀಯ ಬಿತ್ತನೆ ಬೀಜ ಹಾಗೂ ಸಸಿಗಳು, ತೋಟಗಾರಿಕಾ ಬೆಳೆಗಳ ಸಸಿಗಳು ಹಾಗೂ ತರಕಾರಿ ಬೀಜಗಳು, ಸಾವಯವ ಗೊಬ್ಬರಗಳಾದ ಎರೆಹುಳು ಗೊಬ್ಬರ, ಅಗ್ರಿಗೋಲ್ಡ್, ಜೈವಿಕ ಗೊಬ್ಬರಗಳು, ಜೈವಿಕ ಪೀಡೆನಾಶಕಗಳು ಹಾಗೂ ಸಸ್ಯ ಮೂಲ ಕೀಟನಾಶಕಗಳನ್ನು ಪೂರೈಸಲಾಗುತ್ತಿದೆ. ಸಾವಯವ ಗೊಬ್ಬರ ಉತ್ಪಾದನೆಗೆ ಪೂರಕವಾಗುವ ಘಟಕಗಳಾದ ಸುಧಾರಿತ ಕಾಂಪೋಸ್ಟ್ ಘಟಕ, ಎರೆಹುಳು ಘಟಕ, ಬಯೋಡೈಜೇಸ್ಟರ್ ಘಟಕಗಳ ನಿರ್ಮಾಣಕ್ಕೆ ಸಹಾಯಧನ ನೋಡಲಾಗುತ್ತಿದೆ.ಇದರೊಂದಿಗೆ ಅಜೋಲಾ ತೊಟ್ಟಿ, ಗಂಜಲ ಸಂಗ್ರಹಣಾ ತೊಟ್ಟಿ, ದ್ರವರೂಪದ ಸಾವಯವ ಗೊಬ್ಬರ/ಪಂಚಗವ್ಯ/ ಜೀವಾಮೃತ ತಯಾರಿಕೆಗೆ ಸಿಮೆಂಟ್ ತೊಟ್ಟಿ ಹಾಗೂ ಸಸ್ಯಜನ್ಯ/ ಪ್ರಾಣಿಜನ್ಯ ಕೀಟನಾಶಕ. ಯೋಜನಾ ವ್ಯಾಪ್ತಿಯ ರೈತರಿಗೆ ಬಹುವಾರ್ಷಿಕ ಮೇವಿನ ಬೆಳೆ ಅಭಿವೃದ್ಧಿ, ಜೇನು ಸಾಕಾಣಿಕೆ ಪೆಟ್ಟಿಗೆ ಹಾಗೂ ಜೇನು ಕೊಯಿಲು ಯಂತ್ರಕ್ಕೆ ಸಹ ಸಹಾಯಧನ ನೀಡಲಾಗುತ್ತಿದೆ.

ಸಾವಯವ ಭಾಗ್ಯ ಯೋಜನೆಯಡಿ ಸಮುದಾಯ ಗ್ರಂಥಾಲಯ ರಚನೆ, ಯೋಜನೆ ವ್ಯಾಪ್ತಿಯ ರೈತರ ಗುಪುಗಳ ನೋಂದಣಿ, ನಾಟಿ ತಳಿಗಳ ಸಮುದಾಯ ಬೀಜ ಬ್ಯಾಂಕ್ಸ್ ಸ್ಥಾಪನೆ, 2 ಮತ್ತು 3 ಕ್ಯುಬಿಕ್ ಮೀಟರ್ ನ ದೀನಬಂಧು ಗೋಬರ್ ಗ್ಯಾಸ್ ಸ್ಥಾವರ ಸ್ಥಾಪನೆ, ದಾಖಲಾತಿಗಳ ನಿರ್ವಹಣೆ, ಅನುಭವ ಹಂಚಿಕೆಗೆ ಅನುದಾನ ಒದಗಿಸಲಾಗುತ್ತಿದೆ. ಕ್ಷೇತ್ರಗಳನ್ನು ಸಾವಯವ ಪ್ರಮಾಣೀಕರಣಕ್ಕೆ ನೋಂದಾಯಿಸಿಕೊಳ್ಳಲು ಕರ್ನಾಟಕ ಸಾವಯವ ಪ್ರಮಾಣದ ಸಂಸ್ಥೆ (KSOCA)ಯನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ; 9448990382.

ಹೆಚ್ಚಿನ ಮಾಹಿತಿಗಾಗಿ ಸಮೀಪದ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.

 

Author : ಲೇಖಾ ಆರ್ .

More Articles From Agriculture & Environment

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited