Untitled Document
Sign Up | Login    
ಶ್ರವಣ ಸಾಧನ ಮರೆತು ಬಂದ್ರಾ.. ಆಂಡ್ರಾಯ್ಡ್ ಫೋನಾಗತ್ತೆ ಇಯರ್ ಸ್ಪೈ!

ಇಯರ್ ಸ್ಪೈ ಆ್ಯಪ್

ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಎಂದರೆ ನೀವು ಏನು ಮರೆತರೂ ಆಂಡ್ರಾಯ್ಡ್ ಫೋನ್ ಒಂದು ಕೈಯಲ್ಲಿದ್ದರೆ ಸಾಕು... ಒಂದಷ್ಟು ಅಪ್ಲಿಕೇಶನ್ ಗಳು ಹಲವು ಕೊರತೆಗಳನ್ನು ನೀಗಿಸುತ್ತವೆ. ತುರ್ತು ಸಂದರ್ಭದಲ್ಲಿ ಆಂಡ್ರಾಯ್ಡ್ ಫೋನನ್ನೂ ನೀವು ಶ್ರವಣ ಸಾಧನವನ್ನಾಗಿ ಬಳಸಬಹುದು... ಹೇಗೆ ಎಂದು ಹುಬ್ಬೇರಿಬೇಡಿ.. ಈ ಲೇಖನ ಓದಿ..

ಅಕಸ್ಮಾತ್ ಶ್ರವಣ ಸಮಸ್ಯೆ ಅನುಭವಿಸುತ್ತಿರುವವರು ತಮ್ಮ ಹಿಯರಿಂಗ್ ಏಯ್ಡ್ ಅಥವಾ ಶ್ರವಣ ಸಾಧನ ಮನೆಯಲ್ಲಿ ಮರೆತು ಬಂದರು ಎಂದಿಟ್ಕೊಳ್ಳಿ. ಇಲ್ಲದೇ ಹೋದರೆ ಶ್ರವಣ ಸಾಧನ ಬ್ಯಾಟರಿ ಸಮಸ್ಯೆಯಿಂದ ಕೆಲಸ ಮಾಡದೇ ಇದ್ದಾಗ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ನಿಮ್ಮ ಕೈಯಲ್ಲೊಂದು ಆಂಡ್ರಾಯ್ಡ್ ಫೋನ್ ಇದ್ದರೆ ಸಾಕು.

ಫೋನ್ ಇದ್ದರಷ್ಟೇ ಸಾಲದು. ಅದಕ್ಕೆ ಇಯರ್ ಸ್ಪೈ ಎಂಬ ಒಂದು ಸರಳ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಇದು ಉಚಿತ ಅಪ್ಲಿಕೇಶನ್ ಆಗಿದ್ದು, ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಈ ಅಪ್ಲಿಕೇಶನ್ ಮೂಲತಃ ಅಂಪ್ಲಿಫೈಯರ್ ಆಗಿದ್ದು, ಫೋನ್ ತನ್ನ ಮೈಕ್ರೋ ಫೋನ್ ಮೂಲಕ ಗ್ರಹಿಸಿದ ಶಬ್ದದ ತರಂಗಾಂತರವನ್ನು ಹೆಚ್ಚಿಸಿ ಕೊಡುತ್ತದೆ. ಇದನ್ನು ಬ್ಲೂಟೂತ್ ಹೆಡ್ ಸೆಟ್ ಅಥವಾ ಹ್ಯಾಂಡ್ಸ್ ಫ್ರೀ (ಇಯರ್ ಫೋನ್) ಮೂಲಕ ಕೇಳಿಸಿಕೊಳ್ಳಬಹುದು, ಅಪ್ಲಿಕೇಶನ್ ನಲ್ಲಿ ಇರುವ ಸೆಟ್ಟಿಂಗ್ ನೋಡಿಕೊಂಡು ಅಗತ್ಯಕ್ಕೆ ತಕ್ಕಂತೆ ಅಂಪ್ಲಿಫೈಯರ್ ಸೆಟ್ ಮಾಡಿಕೊಳ್ಳಬಹುದು. ಇದರಲ್ಲಿ 5 ಬ್ಯಾಂಡ್ ಈಕ್ವಲೈಸರ್ ಕೂಡಾ ಇದೆ.

 

Author : ಗಣಪತಿ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited