Untitled Document
Sign Up | Login    
ಗೋಕರ್ಣ ಮಹಾಬಲೇಶ್ವರನ ಹುಡುಕಾಟ ಬದಲಾಯ್ತು ಗೂಗಲ್ ಸರ್ಚ್ ವರ್ಡ್ !(5)

.

ಪೂರ್ವಾಚಾರ್ಯರ ಸಮಾಧಿ??: ಶ್ರೀಮಹಾಬಲೇಶ್ವರ ದೇವಾಲಯದ ಮುಂಭಾಗದ ದಕ್ಷಿಣ ಪಾಶ್ರ್ವದಲ್ಲಿ ಗುರುಲಿಂಗ ಎಂಬ ಸಾನ್ನಿಧ್ಯವಿದೆ. ಆದರೆ ಇದು ಈಶ್ವರ ದೇವಾಲಯ ಎಂದು ಹೇಳುವ ಯಾವ ಲಕ್ಷಣವೂ ಇಲ್ಲ.ಇಲ್ಲಿ ಶೈವಸಾನಿಧ್ಯದ ಯಾವ ಲಕ್ಷಣವೂ ಇಲ್ಲ ಎಂದು ತಾಂತ್ರಿಕ ಲಕ್ಷಣಜ್ಞರು ಹೇಳುತ್ತಾರೆ.ಇಲ್ಲೊಂದು ಸ್ತೂಪವನ್ನು ಕಟ್ಟಲಾಗಿದೆ.ಇದು ಬಹುಕಾಲದ ಹಿಂದಿನದ್ದು.ಇದನ್ನು ಪೂಜಿಸುವವರ ಮನೆಗೆ ಗುರ್ಲಿಂಗ ಎಂದೇ ಹೆಸರು.ಇದು ಶ್ರೀಮಠದ ಪೂರ್ವಪೀಠಾಧೀಶರದ್ದು ಎಂಬ ಊಹೆಯೂ ಇದೆ.ಶ್ರೀಮಠದ ಮೊದಲ ಪೀಠಾಧೀಶರಾದ ಶ್ರೀವಿದ್ಯಾನಂದಾಚಾರ್ಯರು ಅಶೋಕೆಯಲ್ಲೇ ಮುಕ್ತರಾದರು ಎನ್ನಲಾಗಿದೆ,ಆದರೆ ಅವರ ಸಮಾಧಿ ಈ ತನಕ ಪತ್ತೆಯಾಗಿಲ್ಲ.ಅವರ ನಂತರದ ಪೀಠಾಧೀಶರಾದ ಶ್ರೀಚಿದ್ಭೋಧಭಾರತೀಗಳ ಸಮಾಧಿಯು ಗೋಕರ್ಣ ಸಾಗರ ತೀರದಲ್ಲಿ ಪತ್ತೆಯಾಗಿದೆ.ಅಲ್ಲೀಗ ಶಿಲಾಮಯವಾದ ಕಟ್ಟಡವನ್ನು ನಿರ್ಮಿಸಲಾಗಿದೆ.

ಹಂತಹಂತವೂ ಅಡ್ಡಿ: ಗೋಕರ್ಣ ಕ್ಷೇತ್ರದ ಆಡಳಿತವನ್ನು ಶ್ರೀ ರಾಮಚಂದ್ರಾಪುರ ಮಠ ವಹಿಸಿದ ಬಳಿಕ ಎದುರಾದ ಅಡೆತಡೆಗಳು ಒಂದೆರಡಲ್ಲ. ಶ್ರೀಮಠವನ್ನೇ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪ್ರಯತ್ನವೊಂದು ಇತ್ತೀಚೆಗೆ ಬಹಿರಂಗವಾಗಿದೆ. ಮಠಗಳ ಇತಿಹಾಸದಲ್ಲೇ ಇಂಥದ್ದೊಂದು ಹೀನ ಬ್ಲಾಕ್‍ಮೇಲ್ ನಡೆದಿರಲಿಕ್ಕಿಲ್ಲ.ಇದಕ್ಕಾಗಿ ನಿಯುಕ್ತಿಗೊಂಡವರು ವೃತ್ತಿಪರ ದಂಧೆಕೋರರು.ಹೆಸರು ಚಂದನ್ ಮತ್ತು ಮಲ್ಲಿಕಾರ್ಜುನ ಪಾಟೀಲ್ ಎಂಬ ಇಬ್ಬರು. ಈ ಚಾಣಾಕ್ಷ ಡೀಲ್ಕೋರರನ್ನು ಈ ಕೆಲಸಕ್ಕೆ ಜೋಡಿಸಿದ್ದು ಗೋಕರ್ಣೋತ್ಸವ ಎಂಬ ಕಾರ್ಯಕ್ರಮ. ಹಿತರಕ್ಷಣಾ ವೇದಿಕೆಯ ವಿಕೃತಮನಸ್ಸುಗಳು ಈ ಉತ್ಸವದ ನೆಪದಲ್ಲಿ ಒಂದಾಗಿ ಮಾಡಿ ಇಬ್ಬರು ದಂಧೆಕೋರನ್ನು ಛೂಬಿಟ್ಟರು. ಅವರ ಮೂಲಕ ಶ್ರೀಮಠಕ್ಕೆ ಬೆದರಿಕೆ ಹಾಕಿಸಿ ಹಣವನ್ನು ಸುಲಿಗೆ ಮಾಡಿ, ಆ ಹಣದಿಂದ ಶ್ರೀಮಠದ ಮೇಲೆ ದಾಳಿ ನಡೆಸುವುದು ಈ ಕಾರಸ್ಥಾನದ ಉದ್ದೇಶವಾಗಿತ್ತು.

ಏನಿದು ಪಿಐಎಲ್ ಬ್ಲಾಕ್‍ಮೇಲ್: ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಹಾಕಿ ಬೆದರಿಕೆ ತಂತ್ರದಿಂದ ಹಣಗಳಿಸುವ ಮಹಾನ್ ದುರುದ್ದೇಶ ಚಂದನ್ ಹಾಗೂ ಗೋಕರ್ಣ ಹಿತರಕ್ಷಣಾ ಸಮಿತಿಯವರದ್ದಾಗಿತ್ತು. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿ.ಐ.ಎಲ್) ಹೂಡಿದವರು ಅಸ್ತ್ರ ಎಂಬ ಸರ್ಕಾರೇತರ ಸಂಸ್ಥೆಯ ಸ್ವಯಂಘೋಷಿತ ಕಾರ್ಯನಿರ್ವಾಹಕ ನಿರ್ದೇಶಕ ಚಂದನ್ ಎಮ್. ಸಿ. ಹಾಗೂ ಗೋಕರ್ಣ ಹಿತರಕ್ಷಣಾ ಸಮಿತಿ. ಒಟ್ಟು ಜೊತೆ ಸೇರಿ ಶ್ರೀರಾಮಚಂದ್ರಾಪುರಮಠದ ಪೂಜ್ಯ ಸ್ವಾಮೀಜೀ ಹಾಗೂ ಧರ್ಮಚಕ್ರ ಟ್ರಸ್ಟ್ ವಿರುದ್ದ ಮಾನ್ಯ ಉಚ್ಚನ್ಯಾಯಾಲಯದಲ್ಲಿ ದೂರು ದಾಖಲು ಮಾಡಿದ್ದರು.

ಈ ಹಂತದಲ್ಲಿ ಚಂದನ್ ಎಮ್.ಸಿ. ಹಾಗೂ ಗೋಕರ್ಣ ಹಿತರಕ್ಷಣಾ ಸಮಿತಿ, ಬ್ಲಾಕ್ ಮೇಲ್ ತಂತ್ರ ಬಳಸಿ ಹಣ ದೋಚಲು ಯೋಚಿಸಿತ್ತು.ಚಂದನ್ ಎಮ್.ಸಿ ಎಂಬವನಿಗೆ ಗೋಕರ್ಣ ಹಿತರಕ್ಷಣಾ ಸಮಿತಿಯ ಜೊತೆ ನಿಕಟ ಸಂಪರ್ಕ. ಶ್ರೀಮಠದ ವಿರುದ್ದ ಹಾಕಿದ ಎಲ್ಲ ಕೇಸುಗಳಲ್ಲಿ ಇವನದೇ ಪ್ರಮುಖ ನೆರವು. ತಾನೊಬ್ಬ ಆರ್‍ಟಿಐ ಕಾರ್ಯಕರ್ತ, ಭ್ರಷ್ಠಾಚಾರ ನಿರ್ಮೂಲನಾ ಕಾರ್ಯಕರ್ತ ಎಂದು ನಂಬಿಸಿ ವಂಚಿಸುವುದು ಇವನ ಕಾಯಕ. ಈತ ಬೇರೆ ಬೆಂಗಳೂರು ಕಮೀಶನರ್‍ರವರ ಭ್ರಷ್ಟಾಚಾರ ವಿರೋಧ ದಳದಲ್ಲಿ ಕೆಲಸಮಾಡುತ್ತಿದ್ದೆ ಎಂದೂ ಹೇಳಿಕೊಂಡು ತನ್ನ ದಂಧೆ ನಡೆಸುತ್ತಿದ್ದ.

ಹೀಗೆ ಈತ ಮಠದ ಸಂಪರ್ಕಕ್ಕೂ ಬಂದ. ಶ್ರೀಗಳನ್ನು ಆದಾಯ ತೆರಿಗೆ ಸಂಬಂಧದ ವಂಚನೆ ಪ್ರಕರಣದಲ್ಲಿ ಬಂಧಿಸುತ್ತೇನೆ ಎಂದಿದ್ದ. ಅಲ್ಲದೇ ಇನ್ನೂ ಹಲವು ಹೊಸ ಕೇಸು ದಾಖಲಿಸುವುದಾಗಿ ಬೆದರಿಕೆ ಒಡ್ಡಿದ್ದ. ಪ್ರಸ್ತುತ ಈ ಪಿ.ಐ.ಎಲ್‍ನ್ನು ಹಿಂದಕ್ಕೆ ಪಡೆಯಲು 10 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ, ಪೆÇೀಲೀಸರ ನಿರ್ದೇಶನದಂತೆ ಮಠದ ಪ್ರತಿನಿಧಿಗಳು ಅವನೊಡನೆ ಮಾತುಕತೆ ನಡೆಸಿದರು. 1.80 ಕೋಟಿಗೆ ಡೀಲ್ ಕುದುರಿಸಿದ ಈತ. ಅದರಲ್ಲಿ 10 ಲಕ್ಷ ರೂಪಾಯಿ ಮುಂಗಡ ಕೇಳಿದ್ದ. ಈ ಎಲ್ಲಾ ದುಡ್ಡಿನಲ್ಲಿ ಕೇಂದ್ರದ ಆದಾಯ ತೆರಿಗೆ ಅಧಿಕಾರಿಗಳಿಗೆ, ಸಿ.ಬಿ.ಐ. ಅಧಿಕಾರಿಗಳಿಗೆ, ವಕೀಲರಿಗೆ ಹಾಗೂ ಹಲವಾರು ರಾಜಕಾರಣಿಗಳಿಗೆ ಪಾಲುಕೊಡಬೇಕೆಂದು ಹೇಳಿಕೊಂಡಿದ್ದ.
ಈ ಎಲ್ಲಾ ಆತನ ಮಾತುಗಳಿಗೆ ಕಾರ್ಯಾಚರಣೆ ವೇಳೆ ಗೌಪ್ಯವಾಗಿ ಮಾಡಲಾದ ವೀಡಿಯೋ ದಾಖಲೆಗಳಿವೆ.
ಚಂದನ್ ಎಮ್.ಸಿ ಮೇಲೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಅತ್ಯಾಚಾರದ ಕೇಸ್ ಸೇರಿದಂತೆ ಹಲವು ಕ್ರಿಮಿನಲ್ ಕೇಸುಗಳಿವೆ.
ಈತನ ಕುತಂತ್ರ ಶ್ರೀರಾಮಚಂದ್ರಾಪುರಮಠದ ಎದುರು ಯಶಸ್ವಿಯಾಗಲಿಲ್ಲ. ಮಾತ್ರವಲ್ಲ ದೇಶದಲ್ಲಿಯೇ ಪಿ.ಐ.ಎಲ್ ಹಾಕಿ ಹಣ ವಸೂಲು ಮಾಡುತ್ತಿದ್ದ ಜಾಲ ಸಿಕ್ಕಿಬಿದ್ದ ಮೊದಲ ಕೇಸ್ ಇದಾಗಿದೆ.

ಅಡೆ ತಡೆ: ಶ್ರೀರಾಮಚಂದ್ರಾಪುರ ಮಠ ಗೋಕರ್ಣದ ಅಭಿವೃದ್ಧಿಗೆ ಮುಂದಾದಾಗಲೆಲ್ಲಾ ಈ ಕೂಟಸ್ಥಾನ ಅಡ್ಡಿಪಡಿಸುತ್ತಿದೆ.ಕಳೆದ 68 ತಿಂಗಳುಗಳಿಂದಲೂ ಇದು ನಡೆಯುತ್ತಾ ಬಂದಿದೆ. ಭಕ್ತರಿಗೆ ಕೈಕಾಲು ತೊಳೆಯಲು ನೀರಿನ ವ್ಯವಸ್ಥೆ, ಶುದ್ಧ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಮತ್ತು ದೇವಾಲಯದಲ್ಲಿ ಶುಚಿತ್ವ ಮತ್ತು ಶಿಸ್ತು ವ್ಯವಸ್ಥೆ ಮಾಡಿದೆ. ಪ್ರಸಾದ ಭೋಜನ ವ್ಯವಸ್ಥೆ ಮಾಡಲು ಹೊರಟಾಗ ಅನ್ನಛತ್ರದ ಕಟ್ಟಡದ ಬಗ್ಗೆ ಪಿ.ಐ.ಎಲ್. ಹಾಕಿಸಿ ಶ್ರೀಗಳ ಮೇಲೆ ನ್ಯಾಯಾಂಗ ನಿಂದನೆಯ ಕೇಸ್ ದಾಖಲಿಸಲಾಗಿತ್ತು. ಅನ್ನಛತ್ರದಲ್ಲಿ ಊಟದ ಅಶನಕ್ಕೂ ವಿಷವಿಕ್ಕುವ ಪ್ರಯತ್ನ ನಡೆದ ಹಿನ್ನೆಲೆಯಲ್ಲಿ ಅನ್ನದಾಸೋಹ ನಿತ್ಯವೂ ಸ್ಕಾನಿಂಗ್‍ನಲ್ಲಿ ನಡೆಯುತ್ತಿದೆ.
ಭಕ್ತರಿಗೆ ಶೌಚಾಲಯ ನಿರ್ಮಿಸಲು ಹೊರಟರೆ ಅದಕ್ಕೆ ತಡೆ ಒಡ್ಡಲಾಗಿದೆ. ಗೋಕರ್ಣದ ಮೂಲ ಆದಿ ಗೋಕರ್ಣದ ಪ್ರಾಕಾರ ಶಿಥಿಲಗೊಂಡಿದ್ದು ಇದು ಪುನರ್‍ನಿರ್ಮಿಸಲೇಬೇಕು, ಇಲ್ಲದಿದ್ದರೆ ಕುಸಿದು ಬೀಳಬಹುದು ಎಂದು ತಜ್ಞರ ವರದಿ ಹೇಳಿದೆ. ಹಾಗೇ ಆದಿಗೋಕರ್ಣದ ಪುನರುತ್ಥಾನಕ್ಕೆ ಶಿಲಾನ್ಯಾಸ ಮಾಡಿಸಲಾಯಿತು.ಅಷ್ಟರಲ್ಲಿ ಪೊಲೀಸ್ ದೂರು ದಾಖಲಿಸಿ, ಪ್ರಾಚ್ಯ ಇಲಾಖೆಯಿಂದ ತಡೆ ತಂದು ಕೆಲಸ ಮುಂದುವರಿಯದಂತೆ ಅಡ್ಡಿ ಪಡಿಸಲಾಯಿತು.

ಶ್ರೀಮಠದ ಮೂಲಸ್ಥಾನವಾದ ಅಶೋಕಾವನ (ಅಶೋಕೆ) ಗೋಕರ್ಣದಲ್ಲಿದೆ. ಇಲ್ಲಿಯೇ ಶ್ರೀಮಠವನ್ನು ಆದಿಶಂಕರಾಚಾರ್ಯರು ಸ್ಥಾಪಿಸಿದ್ದರು. ಈಗ ಅಶೋಕೆಯಲ್ಲಿ ಶ್ರೀಮಠ,ವಿದ್ಯಾಮಂದಿರ, ಮಲ್ಲಿಕಾರ್ಜುನ ದೇವಾಲಯ, ಭೋಜನಶಾಲೆ ನಿರ್ಮಾಣಕ್ಕೆ ಮುಂದಾಗುತ್ತಿದ್ದಂತೆ ಶ್ರೀಮಠದ ಕಟ್ಟಡಗಳ ಮೇಲೆ ಹಾಗೂ ಜಾಗಗಳ ಮೇಲೆ ಬೇರೆ ಬೇರೆ ಕೇಸುಗಳು ಹಾಕಿಸಿ ಕೋರ್ಟ್ ಅಲೆದಾಟ ಮಾಡುವಂತೆ ಮಾಡಲಾಗಿದೆ!

ಸಮುದ್ರದ ತಟದಲ್ಲಿ "ಆಂಜನೇಯ ಜನ್ಮಭೂಮಿ"ಯನ್ನು ಶೋಧಿಸಿದ ಶ್ರೀಗಳು ಅಲ್ಲಿ ಹನುಮನ ದೇವಸ್ಥಾನ, ಹನುಮಾನ್ ವನ ನಿರ್ಮಿಸಲು ಮುಂದಾದರು. ಈ ಕಾರ್ಯಪೂರ್ಣವಾದರೆ ದೇಶದಾದ್ಯಂತ ಹನುಮಂತನ ಭಕ್ತರು ಗೋಕರ್ಣಕ್ಕೆ ಬರುತ್ತಿದ್ದರು. ಇದರಿಂದ ಗೋಕರ್ಣದ ಜನರಿಗೇ ಉಪಯೋಗವಾಗುತ್ತಿತ್ತು ಗೋಕರ್ಣ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗುತ್ತಿತ್ತು.. ಇದಕ್ಕಾಗಿ ಸ್ಥಳ ಖರೀದಿಯೂ ಅಯಿತು. ಈ ಯೋಜನೆಗೂ ತಡೆಯಾಜ್ಞೆ ಮೂಲಕ ತಡೆ ಒಡ್ಡಲಾಯಿತು.

ಈ ರೀತಿ ಪ್ರತೀ ಹೆಜ್ಜೆಯಲ್ಲೂ ತೊಡರುಗಾಲಿಕ್ಕಿದ ಈ ತಂಡ ಈಗ 'ಶ್ರೀಮಠ ದೇವಸ್ಥಾನದ ಅಭಿವೃದ್ಧಿಯನ್ನೇ ಮಾಡಲಿಲ್ಲ. ಇಲ್ಲಿಯವರೆಗೆ ಏನಾದರು ಅಭಿವೃದ್ಧಿ ಮಾಡಿದ್ದರೆ ತೋರಿಸಿ' ಎಂದು ಹೊರಗಡೆ ಬೊಬ್ಬೆ ಹಾಕುತ್ತಿದೆ.

ಶೇಷಾನಂದ ವೃತ್ತಾಂತ: ಪೂಜಾಧಿಕಾರ ಹೊಂದಿದ ಅಡಿ ಕುಟುಂಬದವನು.ಸದ್ಯ ಗೋಕರ್ಣದಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದಾನೆ.ಪಕ್ಕದ ನೆಲೆಗುಣಿಯಲ್ಲಿ ಈತನ ತಂದೆ ದ್ವಾದಶಜ್ಯೋತಿರ್ಲಿಂಗ ದೇವಾಲಯವನ್ನು ಸ್ಥಾಪಿಸಿದ್ದಾರೆ.ಇತ್ತೀಚೆಗೆ ರಾಘವೇಶ್ವರಶ್ರೀಗಳ ಹೆಸರನಲ್ಲಿ ಸಭಾಭವನವನ್ನೂ ನಿರ್ಮಿಸಿದ್ದಾನೆ.ಆದರೆ ಯಾವಾಗ ಗೋಕರ್ಣದ ವಿರುದ್ಧ ಈತ ತಿರುಗಿ ಬಿದ್ದನೋ ಸಭಾಭವನದ ಹೆಸರನ್ನೇ ಬದಲಾಯಿಸಿದ. ಈತನ ವಿರುದ್ಧ ಶಿರಸಿ ಪೊಲೀಸ್‍ಠಾಣೆಯಲ್ಲಿ ಖೋಟಾನೋಟು ಚಲಾವಣೆಯ ಪ್ರಕರಣ ದಾಖಲಾಗಿದೆ. ಈತ ಶ್ರೀಮಠದ ವಿರುದ್ಧ ಬ್ಲಾಕ್‍ಮೇಲ್ ಪ್ರಕರಣದ ಆರೋಪಿಯೂ ಆಗಿದ್ದಾನೆ. ಸದ್ಯ ತಲೆಮರೆಸಿಕೊಂಡಿದ್ದಾನೆ.

ಇವಿಷ್ಟೂ ಸದ್ಯ ಗೋಕರ್ಣ ಕ್ಷೇತ್ರದ ಆಡಳಿತ ವ್ಯವಸ್ಥೆ ಸುತ್ತ ಇರುವ ವಿವಾದದ ಹಿನ್ನೆಲೆ ಮತ್ತು ಬದಲಾಗುತ್ತಿರುವ ಗೋಕರ್ಣದ ಚಿತ್ರಣ. ಬ್ಲ್ಯಾಕ್ ಮೇಲ್ ಪ್ರಕರಣ ಮತ್ತು ಇತರೆ ಕೆಲವು ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು ಶೀಘ್ರವೇ ಎಲ್ಲವೂ ತಿಳಿಯಾಗುವ ನಿರೀಕ್ಷೆ ಭಕ್ತಜನರದ್ದು.

 

Author : ಕೆ.ಅಮ್ಮಂಕಲ್ಲು 

More Articles From Religion & Spirituality

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited