Untitled Document
Sign Up | Login    
ಸೋಲಾರ್ ಟಾಯ್ಲೆಟ್


ವಿಶ್ವದ ಮೊದಲ ಸೋಲಾರ್ ಟಾಯ್ಲೆಟ್ ನ್ನು ಅಮೆರಿಕ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಹೌದು.. ಏನಿದು ವಿಚಿತ್ರ ಅಂದ್ಕೊಂಡ್ರಾ.... ಮುಂದೆ ಓದಿ.... ಮನುಷ್ಯನ ಮಲವನ್ನು ಸೌರಶಕ್ತಿಯ ಸಹಾಯದಿಂದ ಇದ್ದಿಲು ರೂಪಕ್ಕೆ ಪರಿವರ್ತಿಸುವ ಸೋಲಾರ್ ಟಾಯ್ಲೆಟ್ ಇದಾಗಿದೆ.

ನೀರಿನ ಅಗತ್ಯವಿಲ್ಲದೇ ಈ ಟಾಯ್ಲೆಟ್ ಬಳಸಬಹುದಾಗಿದ್ದು, ಮಾ.20ರಿಂದ 22ರವರೆಗೆ ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳಲಿದೆ.

ವಿಶ್ವಪ್ರಸಿದ್ಧ ಸಾಫ್ಟ್ ವೇರ್ ಕಂಪನಿ ಮೈಕ್ರೋಸಾಫ್ಟ್ ನ ಸಂಸ್ಥಾಪಕ ಬಿಲ್ ಹಾಗೂ ಅವರ ಪತ್ನಿ ಮೆಲಿಂದಾ ಗೇಟ್ಸ್ ಪ್ರತಿಷ್ಠಾನದಡಿ ದೊರೆತ ಅನುದಾನ ಬಳಸಿಕೊಂಡು ಈ ಟಾಯ್ಲೆಟ್ ವಿನ್ಯಾಸಗೊಳಿಸಿ, ಅಭಿವೃದ್ಧಿ ಪಡಿಸಲಾಗಿದೆ. ನೈರ್ಮಲ್ಯೀಕರಣದಿಂದ ದೂರ ಉಳಿದಿರುವ 250 ಕೋಟಿ ಜನರಿಗೆ ಈ ಪರಿಸರಸ್ನೇಹಿ ಶೌಚಾಲಯದಿಂದ ಅನುಕೂಲವಾಗಲಿದೆ ಎನ್ನಲಾಗುತ್ತಿದೆ.

ಈ ವಿನೂತನ ಟಾಯ್ಲೆಟ್ ಸಂಶೋಧನಾ ಕಾರ್ಯಕ್ಕೆ 4.76 ಲಕ್ಷ ಕೊಟಿ ರೂ. ಹಣ ಮಿಸಲಿಡಲಾಗಿದ್ದು, 16 ತಂಡಗಳು ಈ ಹಣ ಬಳಸಿಕೊಂಡು ಈ ಸಂಶೋಧನೆ ನಡೆಸಿದ್ದು, ತಮ್ಮ ಮಾದರಿಯನ್ನು ದೆಹಲಿಯಲ್ಲಿ ಪ್ರದರ್ಶಿಸಲಿವೆ.

ಸೌರಶಕ್ತಿ ಬಳಸಿಕೊಂಡು ಮನುಷ್ಯನ ಮಲವನ್ನು ಅತ್ಯಧಿಕ ತಾಪಮಾನದಲ್ಲಿ ಸುಟ್ಟು ಜೈವಿಕ ಇದ್ದಿಲಾಗಿ ಈ ಟಾಯ್ಲೆಟ್ ಪರಿವರ್ತಿಸುತ್ತದೆ. ಈ ಜೈವಿಕ ಇದ್ದಿಲು ಭೂಮಿಯಲ್ಲಿನ ನೀರು ಹಾಗೂ ಪೌಷ್ಠಿಕಾಂಶಗಳನ್ನು ಶೇಖರಿಸಿಟ್ಟುಕೊಳ್ಳುವ ಸಾಮರ್ಥ್ಯಹೊಂದಿದೆ.

ಮಣ್ಣು ಶೇ.10ರಷ್ಟು ನೀರನ್ನು ತನ್ನಲ್ಲಿ ಹಿಡಿದುಕೊಂಡರೆ, ಜೈವಿಕ ಇದ್ದಿಲು ಶೇ.50ರಷ್ಟು ಹೆಚ್ಚು ನೀರನ್ನು ಶೇಖರಿಸಿಕೊಳ್ಳಲಿದೆ. ಅಲ್ಲದೇ ಪೌಷ್ಟಿಕಾಂಶಗಳು ಸಸ್ಯಗಳಿಗೆ ಸಿಗುವಂತೆ ಮಾಡಲಿದೆ. ಈ ರೀತಿ ತಯಾರಿಸುವ ಜೈವಿಕ ಇದ್ದಿಲು ಕೃಷಿಗೆ ಪ್ರಯೋಜನಕಾರಿ. ಇದರಿಂದ ಇಳುವರಿ ಹೆಚ್ಚುತ್ತದೆ ಎಂದು ಯೊಜನೆಯ ಮುಖ್ಯಸಂಶೋಧಕಿ ಕಾರ್ಲ್ ಲಿಂಡೆನ್ ಹೇಳುತ್ತಾರೆ.

 

Author : ಲೇಖಾ ಆರ್

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited