Untitled Document
Sign Up | Login    
ದೇಶದ ಬಡವರ ಸಂಖ್ಯೆ 27 ಕೋಟಿ: ರಾಜ್ಯಕ್ಕೆ 7ನೇ ಸ್ಥಾನ


ದೇಶದ 120 ಕೋಟಿ ಜನಸಂಖ್ಯೆಯಲ್ಲಿ 27 ಕೋಟಿ ಜನ ಬಡವರು. ಇದರಲ್ಲಿ 1.29 ಕೋಟಿ ಬಡವರು ಕರ್ನಾಟಕದಲ್ಲಿಯೆ ಇದ್ದಾರೆ ಎಂದರೆ ನೀವು ನಂಬ್ತೀರಾ....? ನಂಬ್ಲೆಬೇಕು. ಯಾಕೆಂದ್ರೆ, ಬಡವರ ಪಟ್ಟಿಯಲ್ಲಿ ನಮ್ಮ ರಾಜ್ಯಕ್ಕೆ 7ನೇ ಸ್ಥಾನ.

ಯೋಜನಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ದೇಶದಲ್ಲಿ 2004-05ರಲ್ಲಿ 40.47 ಕೋಟಿಯಷ್ಟು ಬಡವರಿದ್ದರು. ಈ ಸಂಖ್ಯೆ 6 ವರ್ಷಗಳಲ್ಲಿ ಅಂದರೆ 2011-12ನೇ ಸಾಲಿನಲ್ಲಿ 27 ಕೋಟಿಗೆ ಇಳಿಕೆಯಾಗಿದೆ.

ಉತ್ತರ ಪ್ರದೆಶದಲ್ಲಿ ಅತಿ ಹೆಚ್ಚು ಬಡವರಿದ್ದು, 5.98 ಕೋಟಿ ಜನರು ಬಡತನ ರೇಖೆಗಿಂತ ಕೆಳಗೆ ಜೀವನಸಾಗಿಸುವವರಾಗಿದ್ದಾರೆ. ಬಿಹಾರ 2ನೇ ಸ್ಥಾನದಲ್ಲಿದ್ದು, 3.58 ಕೋಟಿ ಜನರು ಬಡವರಿದ್ದಾರೆ. ಮಧ್ಯಪ್ರದೇಶ 3ನೇ ಸ್ಥಾನದಲ್ಲಿದ್ದು, 2.34 ಕೋಟಿ ಬಡವರಿದ್ದರೆ, ಮಹಾರಾಷ್ಟ್ರ 4ನೇ ಸ್ಥಾನದಲ್ಲಿದ್ದು 1.97 ಕೋಟಿ ಬಡವರಿದ್ದಾರೆ. ನಂತರದಲ್ಲಿ ಪಶ್ಚಿಮ ಬಂಗಾಳದಲ್ಲಿ 1.84 ಕೋಟಿ ಜನರು ಬಡತನ ರೇಖೆಗಿಂತ ಕೆಳಗಿನವರಿದ್ದಾರೆ.

ಕೇವಲ 2ಸಾವಿರ ಬಡವರನ್ನು ಹೊಂದಿರುವ ಲಕ್ಷದ್ವೀಪ ದೇಶದಲ್ಲಿಯೇ ಅತಿ ಕಡಿಮೆ ಬಡವರನ್ನು ಹೊಂದಿರುವ ರಾಜ್ಯ ಅಥವಾ ಕೆಂದ್ರಾಡಳಿತ ಪ್ರದೇಶವಾಗಿದೆ. ಇನ್ನು ಗೋವಾದಲ್ಲಿ 75 ಸಾವಿರ ಮತ್ತು ಅಂಡಮಾನ್ ನಿಕೋಬಾರ್ ನಲ್ಲಿ ಕೇವಲ 4 ಸಾವಿರ ಮಂದಿ ಬಡವರಿದ್ದಾರೆ. ಗುಜರಾತ್ ನಲ್ಲಿ 1.02 ಕೋಟಿ ಬಡವರು, ತಮಿಳುನಾಡಿನಲ್ಲಿ 82 ಲಕ್ಷ, ಆಂಧ್ರಪ್ರದೇಶದಲ್ಲಿ 78 ಲಕ್ಷ, ಕೇರಳದಲ್ಲಿ 23 ಲಕ್ಷ ಜನರು ಬಡವರಿದ್ದಾರೆ.

ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ 93 ಲಕ್ಷ ಬಡವರಿದ್ದರೆ ನಗರ ಪ್ರದೇಶದಲ್ಲಿರುವ ಬಡವರ ಸಂಖ್ಯೆ 36 ಲಕ್ಷ. ಗ್ರಾಮೀಣ ಪ್ರದೇಶಗಳ ಜನರ ಮಾಸಿಕ ಆದಾಯ 1395 ರೂ ಆಗಿದ್ದರೆ ನಗರ ಪ್ರದೇಶಗಳ ಜನರ ಆದಾಯ 2,898 ರೂ.

2005ರಲ್ಲಿ ತೆಂಡುಲ್ಕರ್ ಸಮಿತಿ ಬಡತನ ರೇಖೆ ಅಳೆಯಲು ಗ್ರಾಮೀಣ ಪ್ರದೇಶಗಳಿಗೆ 447ರೂ. ಮತ್ತು ನಗರ ಪ್ರದೇಶಗಳಲ್ಲಿ 579ರೂ ಮಿತಿಯನ್ನು ನಿಗದಿ ಮಾಡಿತ್ತು. ಬಳಿಕ 2011-12ನೇ ಸಾಲಿಗೆ ಯೋಜನಾ ಆಯೋಗ ಗ್ರಾಮೀಣ ಪ್ರದೇಶಗಳಲ್ಲಿ 816 ರೂ. ಮಾಸಿಕ ತಲಾದಾಯ ಹಾಗೂ ನಗರ ಪ್ರದೇಶಗಳಲ್ಲಿ 1000 ರೂ. ನಿಗದಿ ಮಾಡಿದೆ.

 

Author : ಲೇಖಾ ಆರ್ .

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited