Untitled Document
Sign Up | Login    
ವಿದ್ಯುತ್ ಉತ್ಪಾದಿಸತ್ತೆ ಹೃದಯ!

ಪಿಝೋಇಲೆಕ್ಟ್ರಿಕ್ ಪವರ್ ಪ್ಲಾಂಟ್

ಹೌದು.. ಇದು ಹೃದಯದ ವಿಷಯ. ಹೃದಯ ಬಡಿತದ ಮೂಲಕ ವಿದ್ಯುತ್ ಉತ್ಪಾದನೆ ಸಾಧ್ಯಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಮುಂದೊಂದು ದಿನ ಮೊಬೈಲ್ ಚಾರ್ಜ್ ಮಾಡುವುದು ಮರೆತು ಹೋದರೂ, ಶರೀರದ ಅಂಗಾಂಗ ಚಲನೆ ಮೂಲಕವೇ ಅದನ್ನು ಚಾರ್ಜ್ ಮಾಡಬಹುದಂತೆ!

ಅಮೆರಿಕ ಮತ್ತು ಚೀನಾದ ಸಂಶೋಧಕರ ತಂಡ ಶರೀರದ ಅಂಗಾಂಗಳ ಚಲನೆ ಮತ್ತು ಅದರ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿತ್ತು. ಆಗ ಹೃದಯಕ್ಕೆ ಅಳವಡಿಸಿದ ಪೇಸ್ ಮೇಕರ್ ಕಾರ್ಯನಿರ್ವಹಿಸುವುದಕ್ಕಾಗಿ ಅಳವಡಿಸಿದ್ದ ಬ್ಯಾಟರಿ ಹೃದಯ ಬಡಿತದಿಂದಾಗಿ ಚಾರ್ಜ್ ಆಗುತ್ತಿದ್ದುದು ಈ ತಂಡದ ಗಮನಕ್ಕೆ ಬಂತು. ಇಂಥ ಸಾಧನವನ್ನು ಹೃದಯ ಮಾತ್ರವಲ್ಲದೆ, ಶ್ವಾಸಕೋಶ ಮತ್ತು ಇತರೆ ಚಲನಾತ್ಮಕ ಅಂಗಗಳಿಗೆ ಕಸಿ ಮಾಡಬಹುದು ಎಂದೂ ಹೇಳಲಾಗುತ್ತಿದೆ. ಬಯೋಕಾಂಪಿಟೇಬಲ್ ಪ್ಲಾಸ್ಟಿಕ್ ಬಳಸಿ ಮಾಡಿದ ಸಾಧನವನ್ನಷ್ಟೇ ಇಂತಹ ಕಸಿ ಪ್ರಕ್ರಿಯೆಗೆ ಬಳಸಬಹುದು. ಇಂಥ ಉಪಕರಣ ಅಥವಾ ಸಾಧನ ಅಂಗಾಂಗಳ ಚಲನೆಯನ್ನು ಇಂಧನ ಅಥವಾ ಎನರ್ಜಿಯಾಗಿ ಪರಿವರ್ತಿಸುತ್ತದೆ.
ಆರಂಭಿಕ ಹಂತದಲ್ಲಿ ಈ ತಂಡ ಹಸುವಿನ ಮೇಲೆ ಈ ಪ್ರಯೋಗ ನಡೆಸಿತ್ತು. ಆಗ ಎರಡು ಯುನಿಟ್ ನಷ್ಟು ವಿದ್ಯುತ್ ಉತ್ಪಾದನೆಯಾಗಿತ್ತು. ಬಳಿಕ ಇದನ್ನು ಮಾನವನ ಹೃದಯ ಶಸ್ತ್ರಚಿಕಿತ್ಸೆ ನಡೆಸಿದಾಗ ಪೇಸ್ ಮೇಕರ್ ಗೆ ಅಳವಡಿಸಿ ಯಶಸ್ವಿಯಾಯಿತು.

ಕಾರ್ಯನಿರ್ವಹಣೆ ಹೇಗೆ
ಸಣ್ಣ ಸ್ಟ್ರಿಪ್ ಮಾದರಿ ಇರುವ ಸಾಧನ ಹೃದಯ ಬಡಿತ, ಶ್ವಾಸಕೋಶದ ಚಲನೆಯನ್ನು ಎನರ್ಜಿಯನ್ನಾಗಿ ಪರಿವರ್ತಿಸುತ್ತದೆ. ಇದನ್ನು ಪಿಝೋಇಲೆಕ್ಟ್ರಿಕ್ ಪವರ್ ಪ್ಲಾಂಟ್ ಎನ್ನಲಾಗುತ್ತಿದ್ದು, ಇದರಲ್ಲಿ ಝಿರ್ಕೋನೇಟ್ ಟಿಟಾನೇಟ್ ನಾನೋರಿಬ್ಬನ್ ಗಳನ್ನು ಒಳಗೊಂಡಿದ್ದು, ಬಯೋಕಾಂಪಿಟೇಬಲ್ ಪ್ಲಾಸ್ಟಿಕ್ ಸ್ಟ್ರಿಪ್ ರೂಪದಲ್ಲಿ ಇರಿಸಲಾಗುತ್ತದೆ.

ಮುಂದೇನು? ಬಹುಶಃ ಈ ಪ್ರಯೋಗಗಳು ಯಶಸ್ವಿಯಾದರೆ ಮುಂದಿನ ಹಂತದಲ್ಲಿ ಶರೀರದಿಂದಲೇ ಉತ್ಪತ್ತಿಯಾಗುವ ವಿದ್ಯುತ್ತನ್ನು ಮೊಬೈಲ್ ಚಾರ್ಜ್ ಮಾಡುವುದಕ್ಕೆ, ಕೈಗಡಿಯಾರದ ಕೆಲಸ ನಿರ್ವಹಣೆಗೆ ಬಳಕೆಯಾದರೆ ಅಚ್ಚರಿಯೇನಿಲ್ಲ.

 

Author : ಬೆಂಗಳೂರು ವೇವ್ಸ್ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited