Untitled Document
Sign Up | Login    
ಬೆಂಗಳೂರಿನಲ್ಲಿ 'ನಮ್ಮ ವೈ-ಫೈ'! ಉಚಿತ ಇಂಟರ್ನೆಟ್ ಕನಸು ನನಸು

ನಮ್ಮ ವೈ- ಫೈ ಲಾಗಿನ್ ಪುಟ

ನಮ್ಮ ಬೆಂಗಳೂರಿನ ಬಹುದಿನಗಳ ಕನಸೊಂದು ನನಸಾಗಿದೆ. ಆದರೆ ಎಂ.ಜಿ.ರಸ್ತೆ ಸೇರಿದಂತೆ ಕೆಲವೇ ಭಾಗಗಳ ವ್ಯಾಪ್ತಿಯಲ್ಲಿ ಕಂಡವರ ಕನಸು ಮಾತ್ರ ನನಸಾಗಿದೆ ! ಉಚಿತವಾಗಿ ಇಂಟರ್ನೆಟ್ ಕನೆಕ್ಟಿವಿಟಿ ಒದಗಿಸುವ ಕನಸದು. ಹೌದು.. ಇದು "ನಮ್ಮ ವೈ-ಫೈ''. ಇಂತಹ ಉಚಿತ ವೈ-ಫೈ ಸೇವೆ ದೇಶದಲ್ಲೇ ಮೊದಲನೆಯದಾಗಿರುವುದು ಕೂಡ ನಮ್ಮ ಹೆಮ್ಮೆಯೇ ಸರಿ.

ಬೆಂಗಳೂರಿನ "ನಮ್ಮ ಮೆಟ್ರೊ'' ಎಂಬ ಹೆಮ್ಮೆಯ ರೈಲ್ವೆ ಹೆಸರಿನಂತೆಯೇ ಇರುವ ಹೆಸರನ್ನು ಕೂಡಾ ಇದಕ್ಕೆ ನೀಡಲಾಗಿದೆ. ಆರಂಭಿಕ ಹಂತದಲ್ಲಿ ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಶಾಂತಿನಗರ, ಯಶವಂತಪುರ ಮತ್ತು ಕೋರಮಂಗಲದ ಟ್ರಾಫಿಕ್ ಅಂಡ್ ಟ್ರಾನ್ಸಮಿಟ್ ಮ್ಯಾನೇಜ್ಮೆಂಟ್ ಸೆಂಟರ್ (ಟಿಟಿಎಂಸಿ)ಗಳಲ್ಲಿ ಉಚಿತ ವೈ-ಫೈ ಸೇವೆ ಶೀಘ್ರವೇ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಸೇವೆ ಬಳಸುವುದು ಹೇಗೆ?
ಉಚಿತ ವೈ-ಫೈ ಸೇವೆ ಸಿಗುವ ಸ್ಥಳದಲ್ಲಿ ಬಳಕೆದಾರರು ತಮ್ಮ ಬ್ರೌಸರನ್ನು ಬಳಸಿಕೊಂಡು "ನಮ್ಮ ವೈ-ಫೈ"(http://wifi.dvois.com/PublicWiFiLogin.aspx) ಪುಟ ತೆರೆಯಬೇಕು. ಅಲ್ಲಿ ಮೊಬೈಲ್ ನಂಬರ್ ದಾಖಲಿಸಬೇಕು. ತಕ್ಷಣವೇ ಕೀ ವರ್ಡನ್ನು ನಮೂದಿಸಿದ ಮೊಬೈಲ್ ಸಂಖ್ಯೆಗೆ ಕಳುಹಿಸಿಕೊಡಲಾಗುತ್ತದೆ. ಆ ಕೀ ವರ್ಡನ್ನು ಅಲ್ಲಿ ನಮೂದಿಸಬೇಕು. ಆಗ ಉಚಿತ ವೈ-ಫೈ ಸಂಪರ್ಕ ಸಾಧಿಸುತ್ತದೆ. ಒಬ್ಬ ಗ್ರಾಹಕ 24 ಗಂಟೆ ಅವಧಿಯಲ್ಲಿ 30 ನಿಮಿಷ ಕಾಲ ಉಚಿತವಾಗಿ ಬ್ರೌಸ್ ಮಾಡಬಹುದಾಗಿದೆ. ಇಂಟರ್ನೆಟ್ ಸ್ಪೀಡ್ 512 ಕೆಬಿಪಿಎಸ್ ನಿರೀಕ್ಷಿಸಬಹುದು. ಆದರೆ ಎಲ್ಲ ವೆಬ್ ಸೈಟ್ ಜಾಲಾಡುವುದಕ್ಕೆ ಸಾಧ್ಯವಿಲ್ಲ. ಕೆಲವೊಂದು ನಿರ್ಬಂಧಗಳಿವೆ.

ಈ ಸಂಬಂಧ ಡಿ-ವೋಯಿಸ್ (D-VoiS) ಎಂಬ ಖಾಸಗಿ ಇಂಟರ್ನೆಟ್ ಸೇವಾ ಪೂರೈಕೆದಾರ ಕಂಪನಿ ಜತೆಗೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಈ ಸೇವೆ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಉತ್ತರ ಕರ್ನಾಟಕದ ಕೆಲವು ನಗರಗಳಿಗೆ ವಿಸ್ತರಿಸುವ ಚಿಂತನೆ ಕೂಡ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಇನ್ಫಾರ್ಮೇಷನ್ ಅಂಡ್ ಕಮ್ಯುನಿಕೇಷನ್ ಟೆಕ್ನಾಲಜಿ ಗ್ರೂಪ್ (ಕೆಐಜಿ 2020) ಉಚಿತ ವೈ-ಫೈ ನೀಡುವ ಕನಸಿನ ರೂವಾರಿ. ಈ ಗ್ರೂಪಿನ ನೇತೃತ್ವವಹಿಸಿರುವ ಟಿ.ವಿ.ಮೋಹನದಾಸ್ ಪೈ ಉಚಿತ ವೈ-ಫೈ ಸೇವೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅದನ್ನು ಪರಿಗಣಿಸಿದ ಸರ್ಕಾರ ತುರ್ತು ಕ್ರಮ ತೆಗೆದುಕೊಂಡು "ನಮ್ಮ ವೈ-ಫೈ" ಕನಸು ಅನುಷ್ಠಾನಗೊಳಿಸಿದ್ದು ವಿಶೇಷ.

 

Author : ಬೆಂಗಳೂರು ವೇವ್ಸ್ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited