Untitled Document
Sign Up | Login    
ಈ ರೈಲು ನಿಲ್ಲೋದಿಲ್ವಂತೆ!

Train pod concept - Image courtesy - Chen Jianjun

ಕಲ್ಪನೆ ಎಂದರೆ ಕವಿಯ ನೆನಪಾಗೋದು ಸಹಜ. ಆದರೆ, ಭವಿಷ್ಯದ ರೈಲು ಸಂಚಾರದ ಈ ಕಲ್ಪನೆ ಎಲ್ಲರೂ ಅಚ್ಚರಿಯಿಂದ ಹುಬ್ಬೇರಿಸುವಂತಿದೆ. ಹೌದು.. ಈ ರೈಲು ಎಲ್ಲೂ ನಿಲ್ಲೋದೇ ಇಲ್ವಂತೆ. ಚಲಿಸುತ್ತಲೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು, ಇಳಿಸಿಕೊಳ್ಳುವುದು ಮಾಡುತ್ತದೆಯಂತೆ. ಚೀನಾದ ವಿನ್ಯಾಸಗಾರನ ಕೈಚಳಕ ಇದಾಗಿದ್ದು, ಇದಿನ್ನೂ ಪ್ರಸ್ತಾವನೆ ಹಂತದಲ್ಲಿದೆ.

ಈ ಕಲ್ಪನೆಯ ಕನಸು ಕಂಡಿದ್ದು ಚೀನಾದ ವಿನ್ಯಾಸಗಾರ ಚೆನ್‌ ಜಿಯಾಂಜುನ್‌. ಇದರ ಪ್ರಕಾರ, ರೈಲುಗಳು ನಿಲ್ದಾಣದಲ್ಲಿ ನಿಲ್ಲಬೇಕಾದ ಅವಶ್ಯಕತೆಯೇ ಇಲ್ಲ. ಒಂದೇ ವೇಗದಲ್ಲಿ ಹೋಗುತ್ತಿರಬಹುದು. ನಿಲ್ದಾಣಗಳಲ್ಲಿ ಬೋಗಿ ಮಾದರಿಯ ಪಾಡ್‌ಗಳನ್ನು ಇರಿಸಲಾಗುತ್ತದೆ. ಅವುಗಳು ವೇಗವಾಗಿ ಹೋಗುತ್ತಿರುವ ರೈಲಿನ ಮುಂಭಾಗಕ್ಕೆ ಅಂಟಿಕೊಳ್ಳುತ್ತವೆ. ಇದೇ ವೇಳೆ ಹಿಂದಿನ ನಿಲ್ದಾಣದಲ್ಲಿ ಅಂಟಿಕೊಂಡ ಪಾಡ್‌ ರೈಲಿನ ಹಿಂಭಾಗದಲ್ಲಾಗಿ ರೈಲ್ವೆ ನಿಲ್ದಾಣದಲ್ಲಿ ಉಳಿದಕೊಂಡು ಬಿಡುತ್ತದೆ. ವಿನ್ಯಾಸಗಾರ ಪ್ರಕಾರ ಬೀಜಿಂಗ್‌ನಿಂದ ಗುವಾಂಗ್‌ಜೂ ನಡುವಿನ ರೈಲ್ವೆ ಪ್ರಯಾಣದಲ್ಲಿ 30 ನಿಲ್ದಾಣಗಳಿವೆ. ಇಲ್ಲಿ, ಪ್ರತಿ ನಿಲ್ದಾಣದಲ್ಲಿ ರೈಲು ನಿಂತು ಹೊರಡುವುದರಿಂದ ಹಲವು ನಷ್ಟಗಳಿವೆ. ಪ್ರಯಾಣಿಕರನ್ನು ಇಳಿಸಿ ಹತ್ತಿಸಲು ಕನಿಷ್ಠ 5 ನಿಮಿಷ ಪ್ರತಿನಿಲ್ದಾಣದಲ್ಲಿ ನಿಲ್ಲಬೇಕು. ಇದರಿಂದ ಸಮಯ, ಇಂಧನ ಎಲ್ಲವೂ ನಷ್ಟ. ಹೀಗಾಗಿ ಈ ಹೊಸ ವ್ಯವಸ್ಥೆ ಅಳವಡಿಸಿದರೆ ಒಂದು ಸ್ಟೇಷನ್‌ನಿಂದ ಹೊರಟು ನಿಗದಿತ ಗುರಿಯ ಇನ್ನೊಂದು ಸ್ಟೇಷನ್‌ ತಲುಪುವ ಮಧ್ಯೆ ಎಲ್ಲರನ್ನೂ ಹತ್ತಿ ಇಳಿಸಲು ಅನುಕೂಲ.

ಈ ಇಮೇಜ್‌ ಗಮನಿಸಿದರೆ ಸಾಕು. ರೈಲ್ವೆ ಪಾಡ್‌ ಯಾವ ರೀತಿ ಕೆಲಸ ನಿರ್ವಹಿಸುತ್ತದೆ ಎಂಬುದು ಮನವರಿಕೆಯಾಗುತ್ತದೆ. ರೈಲು ನಿಲ್ಧಾಣ ಸಮೀಪಿಸುತ್ತಿರುವಂತೆ ಪ್ರಯಾಣಿಕರನ್ನು ತುಂಬಿದ ಪಾಡ್ ರೈಲಿನ ಮುಂಭಾಗಕ್ಕೆ ಅಂಟಿಕೊಳ್ಳುತ್ತದೆ. ಅದರಲ್ಲಿದ್ದ ಪ್ರಯಾಣಿಕರು ರೈಲು ಬೋಗಿಯೊಳಕ್ಕೆ ಇಳಿಯುತ್ತಾರೆ. ಇನ್ನೊಂದೆಡೆ ಇದೇ ನಿಲ್ದಾಣದಲ್ಲಿ ಇಳಿಯ ಬಯಸುವ ಪ್ರಯಾಣಿಕರು ಹಿಂಭಾಗದಲ್ಲಿರುವ ಪಾಡ್‌ಗೇರುತ್ತಾರೆ. ಆ ಪಾಡ್‌ ರೈಲು ನಿಲ್ದಾಣದಲ್ಲಿ ನಿಲುಗಡೆ ಕಾಣುತ್ತದೆ. ಹಾಗೆ ಅವರು ಅಲ್ಲಿ ನಿಲ್ದಾಣದಲ್ಲಿ ಇಳಿದು ಮುಂದೆ ಹೋಗುತ್ತಾರೆ. ಇದರಿಂದ ಪ್ರಯಾಣಿಕರಿಗೆ ಪ್ರಯಾಣದ ಸಮಯವೂ ಉಳಿತಾಯವಾಗುತ್ತದೆ. ಆದರೆ, ಈ ಕಾನ್ಸೆಪ್ಟ್‌ನಲ್ಲಿ ಅಂಗವಿಕಲರಿಗೆ ಮತ್ತು ವೃದ್ಧರಿಗೆ ಹೇಗೆ ಅನುಕೂಲ ಮಾಡಿಕೊಡುತ್ತದೆ ಎಂಬುದನ್ನು ವಿನ್ಯಾಸಕಾರ ವಿವರಿಸಿಲ್ಲ.

 

Author : ನೆಟ್‌ ಸಂಚಾರಿ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited