Untitled Document
Sign Up | Login    
ಅಸ್ಸಾಂ ನಲ್ಲಿ ಬರಲಿದೆ ಚಹಾ ತೋಟದ ಸಮಯ


ಅತ್ತೆಗೊಂದು ಕಾಲ ಆದ್ರೆ ಸೊಸೆಗೊಂದು ಕಾಲ ಎಂಬ ಮಾತಿದೆ. ಈಗ ಈ ಗಾದೆ ಮಾತು ಒಂದು ರೀತಿಯಲ್ಲಿ ಅಸ್ಸಾಂ ಗೆ ಅನ್ವಯವಾಗಿಯೂ ಹೇಳಬಹುದೇನೋ. ರಾಷ್ಟ್ರಕ್ಕೆ ಒಂದು ಟೈಂ ಆದರೆ, ಅಸ್ಸಾಂ ರಾಜ್ಯಕ್ಕೆ ಒಂದು ಟೈಂ. ಅರೆರೇ ಏನಿದು ಅಂತೀರಾ....? ನಿಜ. ಅಸ್ಸಾಂ ಇಂಡಿಯನ್ ಸ್ಟಾಂಡರ್ಡ್ ಟೈಂ ಬಿಟ್ಟು, ಬ್ರಿಟೀಷರ ಕಾಲದ ’ಚಹಾ ತೋಟದ ಸಮಯ’ಕ್ಕೆ ವಾಪಸ್ಸಾಗಲು ನಿರ್ಧರಿಸಿದೆ.

66 ವರ್ಷಗಳಿಂದ ಭಾರತೀಯ ಕಾಲಮಾನ ಪದ್ಧತಿಯಾದ ಇಂಡಿಯನ್ ಸ್ಟಾಂಡರ್ಡ್ ಟೈಂ ಅನುಸರಿಸಿಕೊಂಡು ಬರುತ್ತಿದ್ದ ಅಸ್ಸಾಂ ರಾಜ್ಯ ಈಗ 150 ವರ್ಷಗಳ ಹಿಂದೆ ಬ್ರಿಟೀಷರು ಜಾರಿಗೆ ತಂದಿದ್ದ ಚಹಾ ತೋಟದ ಸಮಯಕ್ಕೆ ವಾಪಸ್ಸಾಗಲು ಮುಂದಾಗಿದೆ.

ಅಸ್ಸಾಂನಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತಮಾನ ಬೇಗ ಆಗುವುದರಿಂದ ಗಡಿಯಾರದ ಮುಳ್ಳನ್ನು 1ಗಂಟೆ ಮುಂದಕ್ಕೆ ತಿರುಗಿಸಲು ತೀರ್ಮಾನಿಸಿದೆ. ಇದರಿಂದಾಗಿ ಭಾರತದಲ್ಲಿ ಎರಡು ಟೈಂ ಜೋನ್ ಗಳು ಪ್ರಾರಂಭವಾಗಲಿದೆ.

ಈಶಾನ್ಯ ಭಾರತಕ್ಕೂ ಪೂರ್ವ ಭಾರತಕ್ಕೂ ಸರಿ ಸುಮಾರು ಒಂದು ತಾಸಿನ ಅಂತರವಿದೆ. ಆದರೆ ಇಡೀ ದೇಶಕ್ಕೆಲ್ಲಾ ಒಂದೇ ಸಮಯವಿರಲಿ ಎಂಬ ಕಾರಣಕ್ಕೆ ಭಾರತೀಯ ಕಾಲಮಾನವನ್ನೇ ಎಲ್ಲಾ ಭಾಗಗಳಲ್ಲೂ ಅಳವಡಿಸಿಕೊಳ್ಳಲಾಗುತ್ತಿದೆ. ಇದರ ಪರಿಣಾಮವಾಗಿಯೆ ಈಶಾನ್ಯ ಭಾರತದಲ್ಲಿ ಬೇಗನೆ ಸೂರ್ಯೋದಯವಾಗುತ್ತದೆ, ಬೇಗನೆ ಕತ್ತಲೂ ಆಗುತ್ತದೆ.

ಅಸ್ಸಾಂನಲ್ಲಿ ಮುಂಜಾನೆ 5ಗಂಟೆಗಾಗಲೇ ಬಿಸಿಲು ಬರುತ್ತದೆ. ಸಂಜೆ 5ಗಂಟೆಗೆಲ್ಲ ಕತ್ತಲು ಆವರಿಸುತ್ತದೆ. ಇದರಿಂದಾಗಿ ಕೆಲಸ ಕಾರ್ಯಗಳಿಗೆ, ನೌಕರರಿಗೆ ತೊಂದರೆಯಾಗುತ್ತದೆ. ಹೀಗಾಗಿ ಅಲ್ಲಿ 1ತಾಸು ಗಡಿಯರವನ್ನು ಮುಂದಿಡಲು ನಿರ್ಧರಿಸಲಾಗಿದೆ. ಉದಾಹರಣೆಗೆ ಈಗ ಮುಂಬೈನಲ್ಲಿ ಮುಂಜಾನೆ 5ಗಂಟೆಯಾದಾಗ ಅಸ್ಸಾಂ ನಲ್ಲಿ 6 ಗಂಟೆಯಾಗಿರುತ್ತದೆ.

ಸಮಯ ಬದಲಾವಣೆ ಕುರಿತಂತೆ ಅಸ್ಸಾಂ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ಈಗ ತಾನೇ ಸಮಯ ಬದಲಾವಣೆ ಮಾಡಿ, ಚಹಾ ತೋಟದ ಸಮಯಕ್ಕೆ ಹೊಂದಿಸಿಕೊಳ್ಳಲು ಮುಂದಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ಸ್ಪಷ್ಟಪಡಿಸಿದ್ದಾರೆ.

ಈಗಲೂ ಅಸ್ಸಾಂನ ಚಹಾ ತೋಟಗಳು, ತೈಲ ಉದ್ದಿಮೆಗಳಲ್ಲಿ ಚಹಾ ತೋಟದ ಸಮಯವನ್ನೇ ಬಳಸಲಾಗುತ್ತಿದೆ. ಇದರಿಂದ ಉತ್ಪಾದನೆ ಹೆಚ್ಚಲಿದ್ದು, ವಿದ್ಯುತ್ ಬಳಕೆ ಕೂಡ ತಗ್ಗಲಿದೆ.

 

Author : ಆರ್ ಸಿ ಬಿ .

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited