Untitled Document
Sign Up | Login    
2013ರಲ್ಲಿ ಹೊಸ ಭರವಸೆ ಹುಟ್ಟಿಸಿದ ಸಿನಿಮಾಗಳು

Top Kannada Movies

ಕನ್ನಡ ಚಿತ್ರರಂಗದ ಮಟ್ಟಿಗೆ 2013 ಆಶಾದಾಯಕ ವರ್ಷವಾಗಿತ್ತು. ರಿಮೇಕ್ ಗಾಳಿ ಜೋರಾಗಿತ್ತಾದರೂ, ಹೊಸಬರ ಕೆಲವು ಸಿನಿಮಾಗಳು ಸಾಕಷ್ಟು ಭರವಸೆ ಹುಟ್ಟಿಸಿವೆ. ಪ್ರಯೋಗಶೀಲ ಕಲಾತ್ಮಕ ಚಿತ್ರಗಳೂ ತೆರೆಕಂಡಿವೆ.

ಗಾಂಧಿನಗರದಲ್ಲಿ ಅರ್ಥಾತ್ ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ಬರೋಬ್ಬರಿ 300 ಕೋಟಿ ರೂಪಾಯಿಗೂ ಅಧಿಕ ಹೂಡಿಕೆ ಆಗಿದೆ. ಒಟ್ಟು 125 ಚಿತ್ರಗಳು ತೆರೆ ಕಂಡರೂ ಹೆಚ್ಚೂ ಕಡಿಮೆ ನೂರು ಚಿತ್ರಗಳು ಹೇಳಹೆಸರಿಲ್ಲದಂತೆ ಮಾಯವಾಗಿವೆ.

ಇವೆಲ್ಲದರ ನಡುವೆ ಚಾರ್ ಮಿನಾರ್, ಮೈನಾ, ಸಿಂಪಲ್ಲಾಗ್ ಒಂದು ಲವ್ ಸ್ಟೋರಿ, ಬುಲ್ ಬುಲ್ , ಗೂಗ್ಲಿ, ವಿಕ್ಟರಿ, ಲೂಸಿಯಾ ಶತದಿನ ಪ್ರದರ್ಶನ ಕಂಡರೆ, ವರದನಾಯಕ, ಅಟ್ಟಹಾಸ, ಪದೇಪದೇ, ಬಚ್ಚನ್, ಕಡ್ಡಿಪುಡಿ, ಮದರಂಗಿ, ಆಟೋರಾಜ, ಜಯಮ್ಮನ ಮಗ, ಬೃಂದಾವನ, ರಾಜಾಹುಲಿ 50 ದಿನದ ಪ್ರದರ್ಶನ ಕಂಡಿವೆ.

ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಚಿತ್ರದ ನಿರ್ದೇಶಕ ಸುನಿ, ಗೊಂಬೆಗಳ ಲವ್ ಚಿತ್ರದ ನಿರ್ದೇಶಕ ಸಂತೋಷ್, ಜಯಮ್ಮನ ಮಗ ಚಿತ್ರ ನಿರ್ದೇಶಕ ವಿಕಾಸ್, ವಿಕ್ಟರಿ ಚಿತ್ರ ನಿರ್ದೇಶಕ ನಂದಕಿಶೋರ್, ಜಟ್ಟ ಚಿತ್ರದ ನಿರ್ದೇಶಕ ಬಿ.ಎಂ.ಗಿರಿರಾಜ್, ಚಿತ್ರಮಂದಿರದಲ್ಲಿ ಚಿತ್ರದ ನಿರ್ದೇಶಕ ವೆಂಕಟಾಚಲ, ದ್ಯಾವ್ರೇ ಚಿತ್ರದ ನಿರ್ದೇಶಕ ಗಡ್ಡವಿಜಿ, ಕಳವು ಚಿತ್ರದ ನಿರ್ದೇಶಕ ರವಿ ಎಂ., 6-5=2 ಚಿತ್ರದ ನಿರ್ದೇಶಕ ಅಶೋಕ್, ಪದೇ ಪದೇ ಚಿತ್ರದ ನಿರ್ದೇಶಕ ನಾಗರಾಜ್ ಪೀಣ್ಯ ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಭರವಸೆ ಹುಟ್ಟಿಸಿದ ಹೊಸ ನಿರ್ದೇಶಕರು.

ಟಾಪ್ 5 ಸಿನಿಮಾಗಳು
1. ಸಿಂಪಲ್ಲಾಗ್ ಒಂದು ಲವ್ ಸ್ಟೋರಿ
2. ಚಾರ್ ಮಿನಾರ್
3. ಬುಲ್ ಬುಲ್
4. ಗೂಗ್ಲಿ
5. ರಾಜಾಹುಲಿ

 

Author : ಸಿನಿರಸಿಕ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited