Untitled Document
Sign Up | Login    
ವೀರ್ಯಾಣು ರೊಬೊ ಜನನ!

photo courtesy Mailonline

ಇದೇನಿದ್ದರೂ ರೊಬೊ ಯುಗ. ಮನೆ ಸ್ವಚ್ಛಗೊಳಿಸುವುದರಿಂದ ಹಿಡಿದು ಕಾಫಿ ಟೀ ಸರ್ವ್‌ ಮಾಡುವ ತನಕ ಪ್ರತಿಯೊಂದಕ್ಕೂ ರೊಬೊಟ್‌ಗಳ ಬಳಕೆ ಆರಂಭವಾಗಿದೆ. ಜನ ಜೀವನದೊಳಗೆ ರೊಬೊಟ್‌ಗಳ ಅಸ್ತಿತ್ವ ಹೆಚ್ಚಾಗಲಾರಂಭಿಸಿವೆ. ಇದಕ್ಕೆ ಪೂರಕ ಎಂಬಂತೆ ಮನುಷ್ಯನ ಸಂತಾನೋತ್ಪತ್ತಿಯಲ್ಲೂ ರೊಬೊಗಳ ಬಳಕೆಯಾದರೆ?

ಹೌದು ಇಂಥದ್ದೊಂದು ಕಲ್ಪನೆಯನ್ನು ಜರ್ಮನಿಯ ವಿಜ್ಞಾನಿಗಳು ಸಾಕಾರಗೊಳಿಸಿದ್ದಾರೆ. ಇವುಗಳಿಗೆ ರೊಬೊ-ಸ್ಪರ್ಮ್‌ ಎಂದೂ ಹೆಸರಿಟ್ಟಿದ್ದಾರೆ. ಇಂತಹ ರೊಬೊಗಳನ್ನು ಸಾಮಾನ್ಯವಾಗಿ ಬಯೋಲಾಜಿಕಲ್‌ ರೊಬೊಟ್‌ಗಳು ಅಥವಾ ಜೈವಿಕ ರೊಬೊಟ್‌ಗಳು ಅಥವಾ ಬಯೊಬೊಟ್‌ಗಳು ಎಂದು ಕರೆಯಲಾಗುತ್ತದೆ. ಈ ರೊಬೊ ಸ್ಪರ್ಮ್‌ಗಳು ಅಥವಾ ರೊಬೊ ವೀರ್ಯಾಣುಗಳು ಜಗತ್ತಿನ ಗಮನ ಸೆಳೆದಿದ್ದು, ಈ ವಿಷಯದಲ್ಲಿ ಇನ್ನಷ್ಟು ಸಂಶೋಧನೆಗೆ ಅವಕಾಶ ಒದಗಿಸಿದೆ.

ಏನಿದು ವೀರ್ಯಾಣು ರೊಬೊ?
ಜೈವಿಕ ರೊಬೊಗಳು ಅಥವಾ ಬಯೊಬೊಟ್‌ಗಳನ್ನು ಸಾಮಾನ್ಯವಾಗಿ ಮನುಷ್ಯ ಶರೀರದೊಳಗೆ ಕೆಲವೊಂದು ಭಾಗಗಳಿಗೆ ಔಷಧಗಳನ್ನು ತಲುಪಿಸುವುದಕ್ಕೆ ಬಳಸಲಾಗುತ್ತದೆ. ಹಾಗೆಯೇ ಈ ವೀರ್ಯಾಣು ರೊಬೊಗಳನ್ನು ಅಂಡಾಣುವಿನ ಜತೆ ಸಂಯೋಗಗೊಳಿಸಲು ಬಳಸಲಾಗುತ್ತದೆ. ವೀರ್ಯಾಣು ರೊಬೊಗಳನ್ನು 50 ಮೈಕ್ರಾನ್‌ ಉದ್ದ, 5-8 ಮೈಕ್ರಾನ್‌ಗಳಷ್ಟು ವ್ಯಾಸ ಹೊಂದಿರುವ ಮ್ಯಾಗ್ನೆಟಿಕ್‌ ನ್ಯಾನೊಟ್ಯೂಬ್‌ಗಳನ್ನು ಸಂಶೋಧಕರು ರಚಿಸಿದ್ದು, ಇದರಲ್ಲಿ ಒಂದು ವೀರ್ಯಾಣುವಿನ ಕೋಶವನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ನ್ಯಾನೊಟ್ಯೂಬನ್ನು ರಿಮೋಟ್‌ ಕಂಟ್ರೋಲ್ ಮೂಲಕ ನಿಯಂತ್ರಿಸಲಾಗುತ್ತಿದ್ದು, ದಾರಿ ತಪ್ಪಿ ಮುಂದೆ ಹೋಗದಂತೆ ನೋಡಿಕೊಂಡು ನೇರವಾಗಿ ಫಲಿತ ಅಂಡಾಣುವಿನ ಜತೆ ಸಂಯೋಗ ಹೊಂದುವಂತೆ ಮಾಡಲಾಗುತ್ತದೆ. ಈ ಕಾರ್ಯವನ್ನು ವೀರ್ಯಾಣು ರೊಬೊಗಳು ಮಾಡುತ್ತವೆ.

ಸವಾಲುಗಳೇನು?

ವೀರ್ಯಾಣು ರೊಬೊಗಳನ್ನು ತಯಾರಿಸುವುದೇ ದೊಡ್ಡ ಸವಾಲು ಅಂತಾರೆ ಸಂಶೋಧಕರು. ವೀರ್ಯಾಣುವಿನ ತಲೆಗಿಂತ ಸ್ವಲ್ಪವೇ ದೊಡ್ಡ ಗಾತ್ರದ ಟ್ಯೂಬ್‌ ರಚಿಸುವುದು ಮತ್ತು ವೀರ್ಯಾಣುಗಳ ಚಲನೆಗೆ ಅನುಕೂಲವಾಗುವಂತೆ ಬಾಲಗಳ ಚಲನೆಗೆ ಅವಕಾಶ ಒದಗಿಸುವ ಟ್ಯೂಬ್‌ ಇದಾಗಿರಬೇಕಾಗುತ್ತದೆ. ವೀರ್ಯಾಣುವಿನ ತಲೆ ರೊಬೊ ಹೊರಗಿದ್ದರೆ, ಬಾಲ ಹಿಂಭಾಗದಲ್ಲಿ ಹೊರಗಿದ್ದು ಪ್ರೊಪೆಲ್ಲರ್‌ನಂತೆ ಚಲನೆಯ ಗತಿಯನ್ನು ನಿಯಂತ್ರಿಸುತ್ತದೆ ಎನ್ನುತ್ತಾರೆ ಸಂಶೋಧನಾ ಮುಖ್ಯಸ್ಥರಾದ ಪ್ರೊ.ಶಮಿಡ್‌. ಅಂದ ಹಾಗೆ ಈ ಸಂಶೋಧನಾ ಪ್ರಬಂಧ "Development of Sperm-Flagella Drive Micro-Bio-Robot" ಎಂಬ ಹೆಸರಿನಡಿ ಜರ್ನಲ್‌ ಅಡ್ವಾನ್ಸ್ಡ್‌ ಮಟೀರಿಯಲ್ಸ್‌ನಲ್ಲಿ ಪ್ರಕಟವಾಗಿದೆ.

 

Author : ಅವತಾರ್‌ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited