Untitled Document
Sign Up | Login    
ನೆಟ್‌ಲೋಕದಲ್ಲಿ ಪ್ರಸಿದ್ಧರಾರು?

FB populars 13

ನಾವು ಇನ್ನೇನು ವರ್ಷದ ಕೊನೆಯ ಭಾಗದಲ್ಲಿದ್ದೇವೆ. 2013ಕ್ಕೆ ವಿದಾಯ ಹೇಳಿ 2014ನೇ ವರ್ಷವನ್ನು ಸ್ವಾಗತಿಸುವ ಸಂಭ್ರಮದಲ್ಲಿದ್ದೇವೆ. ನೆಟ್‌ಲೋಕದಲ್ಲಿ ಈಗಾಗಲೇ ಆ ಸಂಭ್ರಮ ಕಾಣತೊಡಗಿದೆ. ಫೇಸ್‌ಬುಕ್‌, ಗೂಗಲ್‌, ಟ್ವಿಟರ್‌ ಹೀಗೆ ಒಂದೊಂದೇ ಜಾಲತಾಣಗಳು 2013ರಲ್ಲಿ ಜನ ನೆಟ್‌ಲೋಕದಲ್ಲಿ ಜಾಲಾಡಿದ ಪ್ರಮುಖ ವಿಷಯಗಳು, ವ್ಯಕ್ತಿಗಳ, ಘಟನೆಗಳು ಯಾವುದೆಂಬ ಪಟ್ಟಿ ಬಿಡುಗಡೆ ಮಾಡತೊಡಗಿವೆ.

Google populars 13
ಮೊದಲು ಫೇಸ್‌ಬುಕ್‌ ಇಂಥದ್ದೊಂದು ಪಟ್ಟಿ ಬಿಡುಗಡೆ ಮಾಡಿತು. ಅದರಲ್ಲಿ ನಮೋ(ನರೇಂದ್ರ ಮೋದಿ) 65 ಲಕ್ಷ ಲೈಕ್‌ಗಳೊಂದಿಗೆ ಮುಂಚೂಣಿಯಲ್ಲಿದ್ದರೆ, ಸಚಿನ್‌, ಐಫೋನ್‌ 5ಎಸ್‌ ನಂತರದ ಸ್ಥಾನ ಪಡೆದಿದ್ದಾರೆ. ಆರ್‌ಬಿಐ ಗವರ್ನರ್‌ ನಾಲ್ಕನೇ ಸ್ಥಾನದಲ್ಲಿದ್ದು, ಭಾರತದ ಮಂಗಳಯಾನ ಯೋಜನೆ ಐದನೇ ಸ್ಥಾನದಲ್ಲಿತ್ತು. ಇನ್ನು ಪ್ರವಾಸಿ ತಾಣ ಮತ್ತು ಹೋಟೆಲ್‌ಗಳ ವಿಷಯಕ್ಕೆ ಬಂದರೆ, ಮುರ್ತಾಲ್‌ನ ಸುಖದೇವ್‌ ಡಾಬಾ ಬಗ್ಗೆ ಬಹಳ ಜನ ವಿಚಾರಿಸಿದ್ದು ಮುಂಚೂಣಿಯಲ್ಲಿದೆ. ಗೋಲ್ಡನ್‌ ಟೆಂಪಲ್‌, ನವದೆಹಲಿಯ ಬಂಗ್ಲಾ ಸಾಹಿಬ್‌ ಗುರುದ್ವಾರ, ಕನ್ನೌಟ್‌ ಪ್ಲೇಸ್‌, ಹೈದರಾಬಾದ್‌ನ ಐಮ್ಯಾಕ್ಸ್‌ ಮೂವಿ ಥಿಯೆಟರ್‌ ಪ್ರವಾಸಿಗಳ ಚರ್ಚೆಯ ವಿಷಯಗಳಾಗಿದ್ದವು.
twitter populars 13
ಪೇಸ್‌ಬುಕ್‌ಗಿಂತ ತಾನೇನು ಕಡಿಮೆ ಎಂಬತೆ ಸರ್ಚ್‌ ಎಂಜಿನ್‌ ಗೂಗಲ್‌ ಕೂಡಾ(Google Zeitgeist 2013) 2013ರಲ್ಲಿ ನೆಟ್ಟಿಗರು ಜಾಲಾಡಿದ ಪ್ರಮುಖ ವಿಷಯ, ವ್ಯಕ್ತಿಗಳ ಪಟ್ಟಿ ಬಿಡುಗಡೆ ಮಾಡಿತು. ಗೂಗಲ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಾಜಕೀಯ, ಸಿನಿಮಾ, ಬಿಸಿನೆಸ್‌, ಶಬ್ದ ಹೀಗೆ ವಿವಿಧ ಪಟ್ಟಿಗಳನ್ನೇ ಬಿಡುಗಡೆ ಮಾಡಿತು. ಇದರ ಪ್ರಕಾರ, ರಾಜಕೀಯ ವಿಭಾಗದಲ್ಲಿ ಮತ್ತೆ ನಮೋ ಮುಂಚೂಣಿಯಲ್ಲಿದ್ದು, ರಾಹುಲ್‌ ನಂತರದ ಸ್ಥಾನದಲ್ಲಿ ಕಂಡುಬಂದಿದ್ದಾರೆ. ಸೆಲೆಬ್ರಿಟಿಗಳ ಪೈಕಿ ಸನ್ನಿ ಲಿಯೋನ್‌, ಕತ್ರಿನಾ ಕೈಫ್‌, ಸಲ್ಮಾನ್‌ ಖಾನ್‌ ಮುಂಚೂಣಿಯಲ್ಲಿದ್ದಾರೆ. ಒಟ್ಟಾರೆ ಸರ್ಚಿಂಗ್‌ನಲ್ಲಿ ಐಆರ್‌ಸಿಟಿಸಿ, ಕ್ರಿಕ್‌ಇನ್ಫೋ, ಫ್ಲಿಪ್‌ಕಾರ್ಟ್ ಮುಂಚೂಣಿಯಲ್ಲಿರುವುದು ಕಂಡುಬಂದಿದೆ.
ಎರಡೂ ಸಂಸ್ಥೆಗಳ ಪಟ್ಟಿ ಹೊರಬಿದ್ದ ಬಳಿಕ ಟ್ವಿಟರ್‌ ಕೂಡಾ ಭಾರತದಲ್ಲಿ ಟ್ವಿಟರ್‌ ಬಳಕೆದಾರರ ಬಳಸಿದ ಆರು ಪ್ರಮುಖ ವಿಷಯಗಳ(ಇವೆಂಟ್‌, ರಾಜಕೀಯ, ಸುದ್ದಿ, ಕ್ರಿಕೆಟ್, ಬಾಲಿವುಡ್‌ ಮತ್ತು ಟಿವಿ) ಮುಂಚೂಣಿ ಸರ್ಚಿಂಗ್‌ ಶಬ್ದಗಳ ಪಟ್ಟಿ ಪ್ರಕಟಿಸಿದೆ. ಇದರ ಪ್ರಕಾರ, ರಾಜಕೀಯದಲ್ಲಿ ಯಥಾ ಪ್ರಕಾರ ಮೋದಿಯೇ ನಂಬರ್ 1, ರಾಹುಲ್‌ ನಂ2. ಒಟ್ಟಿನಲ್ಲಿ ಈ ಎಲ್ಲ ಪಟ್ಟಿಗಳು ಭಾರತದ ಪ್ರಸಿದ್ಧರಾರು ಎಂಬುದನ್ನು ಬಹಿರಂಗ ಪಡಿಸಿದೆ. ನಂ.1 ಪಟ್ಟದ ಪೈಪೋಟಿಗೆ ಇಳಿದವರಿಗೆ ಈ ಪಟ್ಟಿಗಳನ್ನು ನೋಡಿ ಈರ್ಷ್ಯೆ ಅಸಮಾಧಾನ ಉಂಟಾದಲ್ಲಿ ಅಚ್ಚರಿ ಪಡಬೇಕಾಗಿಲ್ಲ.

 

Author : ನೆಟ್ ಸಂಚಾರಿ 

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited