Untitled Document
Sign Up | Login    
ವಿಶ್ವ ಚೆಸ್ ಲೋಕದ ನೂತನ ದೊರೆ ಮ್ಯಾಗ್ನಸ್ ಕಾರ್ಲ್ ಸನ್


ಮ್ಯಾಗ್ನೆಸ್ ಕಾರ್ಲ್ ಸನ್ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಭಾರತೀಯ ಚೆಸ್ ಲೋಕದಲ್ಲಿ ಹೊಸ ಭಾಷ್ಯ ಬರೆದ ವಿಶ್ವನಾಥನ್ ಆನಂದ್ ಅವರನ್ನೇ ಸೋಲಿಸುವ ಮೂಲಕ ನಾರ್ವೆಯ 22ವರ್ಷದ ಮ್ಯಾಗ್ನಸ್ ಕಾರ್ಲ್ ಸನ್ ನೂತನ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದರು.

ಈ ಮೂಲಕ ಆರನೇ ಭಾರಿ ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳಬೇಕೆಂಬ ವಿಶ್ವನಾಥನ್ ಆನಂದ್ ಅವರ ಆಸೆ ಭಗ್ನವಾಗಿದೆ. ಚೆನ್ನೈ ನಲ್ಲಿ ನಡೆದ ಆಟದಲ್ಲಿ ಆನಂದ್ ಹಾಗೂ ಕಾರ್ಲ್ ಸನ್ ನಡುವೆ ನಡೆದ 10ನೇ ಪಂದ್ಯ ಕೂಡ ಡ್ರಾಗೊಳ್ಳುವ ಮೂಲಕ ಕಾರ್ಲ್ ಸನ್ ವಿಶ್ವ ಚದುರಂಗ ದೊರೆಯಾದರು.

ಕಳೆದ 5, 6 ಮತ್ತು 9ನೇ ಪಂದ್ಯಗಳನ್ನೂ ಗೆದ್ದಿದ್ದ ಕಾರ್ಲ್ ಸನ್ 10ನೇ ಪಂದ್ಯದಲ್ಲಿ 65 ನಡೆಗಳ ಹೋರಾಟದಲ್ಲಿ ಡ್ರಾ ಸಾಧಿಸಿ ಫಿಡೆ ಚೆಸ್ ಲೋಕದ 16ನೇ ಚಾಂಪಿಯನ್ ಎನಿಸಿದರು. 12 ಪಂದ್ಯಗಳಲ್ಲಿ ಇನ್ನೆರಡು ಪಂದ್ಯ ಬಾಕಿ ಇರುವಾಗಲೇ ಮೊದಲಿಗರಾಗಿ 6.5 ಅಂಕ ಕಲೆಹಾಕಿದ್ದರಿಂದ ಲೈಟಿಂಗ್ ಕಿಡ್ ಖ್ಯಾತಿಯ ಕಾರ್ಲ್ ಸನ್ ಪ್ರಥಮ ವಿಶ್ವ ಚೆಸ್ ಚಾಂಪಿಯನ್ ಕಿರೀಟ ಗೆದ್ದರು. ಪಂದ್ಯದಲ್ಲಿ ವಿಶ್ವನಾಥನ್ ಆನಂದ್ 3.5 ಅಂಕ ಗಳಿಸಿದರು.

2000, 2007, 2008, 2010 ಹಾಗೂ 2012 ಸೇರಿದಂತೆ ಆನಂದ್ 5 ಬಾರಿ ಆನಂದ್ ವಿಶ್ವ ಚಾಂಪಿಯನ್ ಆಗಿದ್ದಾರೆ. ಅಲ್ಲದೇ 2007ರಿಂದ 2012ರವರೆಗೆ ಆನಂದ್ ಸತತವಾಗಿ ಚಾಂಪಿಯನ್ ಶಿಪ್ ಪಟ್ಟವನ್ನು ತಮ್ಮಲೇ ಉಳಿಸಿಕೊಂಡರು. 2009 ಹಾಗೂ 2011ರಲ್ಲಿ ಚಾಂಪಿಯನ್ ಶಿಪ್ ನಡೆದಿರಲಿಲ್ಲ.

ಮ್ಯಾಗ್ನಸ್ ಕಾರ್ಲ್ ಸನ್:

ತಮ್ಮ 7-8ವರ್ಷದಲ್ಲೇ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ ಬಾಲಕ ಕಾರ್ಲ್ ಸನ್, 19ನೇ ವಯಸಿನಲ್ಲಿ ವಿಶ್ವದ ನಂ.1ಚೆಸ್ ಪ್ಲೇಯರ್ ಆಗಿದ್ದರು. ಶಾಲೆಗೆ ಹೋಗದ ಈತ ಇಂದು ವಿಶ್ವ ಚದುರಂಗದ ದೊರೆ. ವಿಶ್ವವನ್ನು ಸುತ್ತುವುದು ಎಂದರೆ ಕಾರ್ಲ್ ಸನ್ ಗೆ ತುಂಬಾ ಇಷ್ಟ. ಈ ಕಾರಣಕ್ಕಾಗಿಯೇ ತನ್ನ ತಂದೆಯ ಕಾರನ್ನೇ ಮಾರಿದ್ದ ಭೂಪ. ಆದರೆ ಹೋದಲೆಲ್ಲ ತನ್ನ ಚೆಸ್ ಆಟದ ಬುದ್ಧಿವಂತೆಕೆ ಮೆರೆದ. ಅಪಾರವಾದ ಜ್ನಾಪಕ ಶಕ್ತಿ ಹೊಂದಿರುವ ಈತ , ತನ್ನ ಹಿಂದಿನ ಆಟದ ಒಂದೊಂದು ಭಾಗವನ್ನು ವಿವರಿಸುವ ಸಾಮರ್ಥ್ಯ ಹಾಗೂ ಎದುರಾಳಿ ಎಂಥದ್ದೇ ರೀತಿಯಲ್ಲಿ ಕಾಯಿ ಚಲಿಸಿದರೂ ಬುದ್ಧಿವಂತಿಕೆಯಿಂದ ಆಡಿ ಗೆಲ್ಲುವ ಸಾಮರ್ಥ್ಯ ಈತನದ್ದು.

ಪ್ರಭಲ ಎದುರಾಳಿಗಳನ್ನು ಸೋಲಿಸುವ ಮೂಲಕ ತನ್ನ 13ನೇ ವಯಸ್ಸಿನಲ್ಲಿ ಗ್ರಾಂಡ್ ಮಾಸ್ಟರ್ ಪಟ್ಟಕ್ಕೇರಿದ್ದ ಕಾರ್ಲ್ ಸನ್ ಚೆಸ್ ಇತಿಹಾಸದ ಗರಿಷ್ಠ ರೇಟಿಂಗ್ 2872 ಅಂಕಗಳನ್ನು ಗಳಿಸಿದ್ದರು. 2005ರಲ್ಲಿಯೇ ’ದಿ ಪ್ರಿನ್ಸ್ ಆಫ್ ಚೆಸ್’ ಎಂಬ ಹೆಸರಿನಲ್ಲಿ ಕಾರ್ಲ್ ಸನ್ ಕುರಿತ ಸಿನಿಮಾ ಕೂಡ ಬಿಡುಗಡೆಯಾಗಿತ್ತು. 2009ರಲ್ಲಿ ಇವರು ಬ್ಲಿಟ್ಜ್ ವಿಶ್ವಚಾಂಪಿಯನ್ ಶಿಪ್ ಗೆದ್ದಿದ್ದರು. ಇಂದು ಚೆಸ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿರುವುದು ಮಾತ್ರ ಶ್ಲಾಘನೀಯ.

 

Author : ಲೇಖಾ ಆರ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited