Untitled Document
Sign Up | Login    
ಮಹಿಳೆಯರ ಮೂಗಿಗಿಂತ ಪುರುಷರ ಮೂಗಿನ ಗಾತ್ರವೇಕೆ ದೊಡ್ಡದು!

ಸಾಂದರ್ಭಿಕ ಚಿತ್ರ (courtesy - healthrender)

ಮನುಷ್ಯರ ಮೂಗು ಗಮನಿಸಿ.. ಎಲ್ಲಾ ಆಕಾರ ಮತ್ತು ಗಾತ್ರದ ಮೂಗಗಳನ್ನು ಕಾಣಬಹುದು. ಆದರೆ, ಪುರುಷರ ಮೂಗಿನ ಗಾತ್ರ ಮಹಿಳೆಯರ ಮೂಗಿನ ಗಾತ್ರಿಕ್ಕಿಂತ ಶೇಕಡ 10 ರಷ್ಟು ದೊಡ್ಡದು! ಈ ಅಚ್ಚರಿಯ ರಹಸ್ತ ವಿಜ್ಞಾನ ಜಗತ್ತಿನ ಕುತೂಹಲ ಕೆರಳಿಸಿದ್ದು, ಈ ಬಗ್ಗ ಅಧ್ಯಯನ ಬಹಳ ಕಾಲದಿಂದ ನಡೆಯುತ್ತಿದೆ. ನಿರಂತರ ಅಧ್ಯಯನ ಸಂಶೋಧನೆ ಬಳಿಕ ತಾವು ಅದರ ರಹಸ್ಯವನ್ನು ಬೇಧಿಸಿರುವುದಾಗಿ ಈಗ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಅಂದ ಹಾಗೆ ಈ ರಹಸ್ಯ ಬೇಧಿಸುವ ಅಧ್ಯಯನ ನಡೆಸಿದ್ದು ಅಮೆರಿಕದ ಲೋವಾದ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು. ಇವರ ಅಧ್ಯಯನ ಪ್ರಕಾರ, ಗಂಡು ಮತ್ತು ಹೆಣ್ಣು ಲಿಂಗಾಧರಿಸಿ ಆಯಾ ವ್ಯಕ್ತಿಗಳ ಶಾರೀರಿಕ ಅಗತ್ಯ ಮತ್ತು ಚಟುವಟಿಕೆಗೆ ತಕ್ಕಂತೆ ವಿಭಿನ್ನ ರೀತಿಯ ಮೂಗುಗಳ ರಚನೆಯಾಗುತ್ತದೆ.

ಸಾಮಾನ್ಯವಾಗಿ ಪುರುಷರ ಶರೀರ ಹೆಚ್ಚು ಬಲಯುತವಾಗಿದ್ದು, ಬಲಿಷ್ಠ ಮಾಂಸಖಂಡಗಳ ರಚನೆಯನ್ನೊಳಗೊಂಡಿದೆ. ಇಂತಹ ಮಾಂಸಖಂಡಗಳ ಜೀವಕೋಶಗಳ ಬೆಳವಣಿಗೆ ಮತ್ತು ಅವುಗಳ ನಿರ್ವಹಣೆಗೆ ಅಧಿಕ ಆಮ್ಲಜನಕ ಬೇಕು. ಸಾಮಾನ್ಯವಾಗಿ ೧೧ ವರ್ಷ ಆಗುವ ತನಕ ಗಂಡು ಮತ್ತು ಹೆಣ್ಮಕ್ಕಳ ಮೂಗಿನ ಗಾತ್ರದಲ್ಲೇನೂ ಹೆಚ್ಚು ವ್ಯತ್ಯಾಸ ಇರುವುದಿಲ್ಲ. ೧೧ ವರ್ಷ ಆಗುತ್ತಲೇ ಮೂಗಿನ ಗಾತ್ರ ವ್ಯತ್ಯಾಸ ಆರಂಭವಾಗುತ್ತದೆ. ಈ ಅವಧಿಯಲ್ಲಿ ಗಂಡು ಮಕ್ಕಳಲ್ಲಿ ಮಸಲ್ ಮಾಸ್ ಬೆಳವಣಿಗೆ ಮತ್ತು ಹೆಣ್ಮಕ್ಕಳಲ್ಲಿ ಫ್ಯಾಟ್ ಮಾಸ್ ಬೆಳವಣಿಗೆ ಪ್ರಾರಂಭವಾಗುತ್ತದೆ.

ಈ ಹಿಂದಿನ ಸಂಶೋಧನೆಯೊಂದರ ಪ್ರಕಾರ, ಪುರುಷರ ಶರೀರದ ಭಾರ ಹೆಚ್ಚಾಗಲು ಅದರಲ್ಲಿರುವ ಶೇಕಡ 95 ರಷ್ಟು ಕೊಬ್ಬು ರಹಿತ ಮಾಂಸವೇ ಕಾರಣ. ಮಹಿಳೆಯರಲ್ಲಿ ಇದರ ಪ್ರಮಾಣ ಶೇಕಡ 85ರಷ್ಟಿದೆ. ಆಧುನಿಕ ಮಾನವನಿಗೆ ಹೋಲಿಸಿದರೆ ನೆಂದರ್‌ತಲ್ಸ್ ಮಾನವರ ಮೂಗಿನ ಗಾತ್ರ ಬಹುದೊಡ್ಡದು. ಅವರಲ್ಲಿ ಹೆಚ್ಚು ಮಸಲ್ ಮಾಸ್‌ ಇರುವುದೇ ಇದಕ್ಕೆ ಕಾರಣ.
ಅಮೆರಿಕದ ಲೋವಾ ಯುನಿವರ್ಸಿಟಿಯ ಡಾ. ನತನ್‌ ಹೋಲ್ಟನ್‌ ಈ ಅಧ್ಯಯನದ ಮುಖ್ಯಸ್ಥರಾಗಿದ್ದು, ಈ ಅಧ್ಯಯನಕ್ಕಾಗಿ ಯುರೋಪಿನ 38 ಜನರ ಮೂಗುಗಳನ್ನು ಪರಿಶೀಲನೆಗೊಳಪಡಿಸಿದ್ದಾರೆ. ಅಧ್ಯಯನ ತಂಡ ನಿಗಿದತ ಅವಧಿಯಲ್ಲಿ ಕಾಲ ಕಾಲಕ್ಕೆ ಇವರ ಮೂಗುಗಳ ಒಳಭಾಗ ಮತ್ತು ಹೊರಭಾಗದ ಅಳತೆಗಳನ್ನು ತೆಗೆದು ದಾಖಲಿಸಿಕೊಂಡು ಬಂದಿತ್ತು. ಈ ಅಧ್ಯಯನದಲ್ಲಿ ಲಿಂಗ ತಾರತಮ್ಯವಿಲ್ಲದೇ ಶೈಶವಾವಸ್ಥೆಯಿಂದ ಬಾಲ್ಯದ ೧೧ ವರ್ಷದ ತನಕ ಮಕ್ಕಳ ಮೂಗಿನ ಅಳತೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಆ ಬಳಿಕ ಮೂಗಿನ ಬೆಳವಣಿಗೆ ಆರಂಭವಾಗಿದ್ದು, ಅದಕ್ಕೆ ಕಾರಣಗಳೇನು ಎಂಬುದನ್ನೂ ಅಧ್ಯಯನದ ಮೂಲಕ ಕಂಡುಕೊಂಡರು.

ಡಾ.ನತನ್ ಹೇಳುವ ಪ್ರಕಾರ, ಈ ಅಧ್ಯಯನ ಜೀವ ವಿಜ್ಞಾನಕ್ಕೆ ಸಂಬಂಧಿಸಿದ್ದಾರೂ ಇತಿಹಾಸದ ಅಧ್ಯಯನ ಜತೆಗೆ ತಳಕು ಹಾಕಿಕೊಂಡಿದೆ. ಹೀಗಾಗಿ ಇದೊಂದು ಮಹತ್ವದ ಸಂಶೋಧನೆಯಾಗಿದ್ದು, ಮಾನವ ಇತಿಹಾಸ ಮತ್ತು ಜೀವ ವಿಜ್ಞಾನದಲ್ಲೊಂದು ಹೊಸ ಮೈಲಿಗಲ್ಲು.

 

Author : ಅವತಾರ್ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited