Untitled Document
Sign Up | Login    
ಚಿಂಪಾಂಜಿಗಳಿಗೂ "ಮಾನವ ಹಕ್ಕು'' ಇದೆಯಂತೆ!

ಸಾಂದರ್ಭಿಕ ಚಿತ್ರ

ಅರೆ.. ಚಿಂಪಾಂಜಿಗಳೇನು ಮನುಷ್ಯರೇ? ಎಂದು ಹುಬ್ಬೇರಿಸಬೇಡಿ. ಮನುಷ್ಯನ ಪೂರ್ವಜರು ವಾನರರಾಗಿದ್ದರು ಎಂಬ ವಾದವೂ ಇದೆ. ಈ ಚಿಂಪಾಂಜಿಗಳಿವೆಯಲ್ಲ ಅವು ಮನುಷ್ಯರನ್ನೇ ಹೋಲುತ್ತವೆ ಎಂಬುದು ಇನ್ನೊಂದು ಸತ್ಯ. ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರವೂ ಚಿಂಪಾಂಜಿಗಳು ಮತ್ತು ಮನುಷ್ಯರ ನಡುವೆ ಬಹಳಷ್ಟು ಸಾಮ್ಯತೆಗಳಿದ್ದು, ಹತ್ತಿರದ ಸಂಬಂಧ ಹೊಂದಿವೆ. ಆದರೆ ಅಮೆರಿಕದ ಕೋರ್ಟ್‌ ಎದುರು ಬಂದರೆ ಚಿಂಪಾಂಜಿಗಳ ಮತ್ತು ಮನುಷ್ಯರು ನಡುವೆ ಹೆಚ್ಚೇನೂ ವ್ಯತ್ಯಾಸವಿಲ್ಲ. ಕಾನೂನಿ ಮುಂದೆ ಚಿಂಪಾಂಜಿಗಳು ಕೂಡಾ ಪ್ರಾಣಿಯೇ. ಆದಾಗ್ಯೂ, ಸರ್ಕಾರದ ಕಣ್ತಪ್ಪಿಸಿ ಇದನ್ನು ಮಾರಾಟ ಮತ್ತು ಖರೀದಿ ಮಾಡುವುದು ನಡೆದಿದೆ.

ಆಸಕ್ತಿದಾಯಕ ವಿಚಾರ ಅಂದ್ರೆ ಈಗ್ಗೆ ಎರಡು ದಿನಗಳ ಕೆಳಗೆ (ಡಿಸೆಂಬರ್‍2) ದ ನಾನ್‌ ಹ್ಯೂಮನ್‌ ರೈಟ್ಸ್‌ ಗ್ರೂಪ್‌ (ಮನುಷ್ಯೇತರರ ಹಕ್ಕುಗಳನ್ನು ಪ್ರತಿಪಾದಿಸುವ ಸಂಘಟನೆ) ನ್ಯೂಯಾರ್ಕ್ ಕೋರ್ಟ್‌‌ನಲ್ಲಿ ಒಂದು ದಾವೆ ಹೂಡಿತು. ಪ್ರಾಣಿಹಕ್ಕುಗಳ ವಕೀಲ ಸ್ಟೀವನ್ ವೈಸ್‌ ಈ ಪ್ರಕರಣದ ದೂರು ಅರ್ಜಿ ಸಿದ್ಧಪಡಿಸಿದ್ದು, ಟಾಮಿ ಎಂಬ ಚಿಂಪಾಂಜಿಯನ್ನುಅದರ ಮಾಲೀಕರು ಬಂಧಿಯನ್ನಾಗಿ ಇರಿಸಿದ್ದು, ಅದರ ಚಟುವಟಿಕೆಯನ್ನು ನಿಬಂರ್ಧಿಸಲಾಗಿದೆ. ಹೀಗಾಗಿ ಗ್ಲೋವರ್ಸ್ವಿಲ, ಫ್ಲಾದಲ್ಲಿ ಮಾಲೀಕರ ಬಂಧನದಲ್ಲಿರುವ ಟಾಮಿಯನ್ನು ಬಿಡುಗಡೆ ಮಾಡಿ, ಯಾವುದಾದರೂ ವನ್ಯಧಾಮಕ್ಕೆ ಸೇರಿಸಬೇಕು ಎಂದು ವಾದಿಸಿದರು. ಕೋರ್ಟ್ ಕೂಡಾ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಚಾರಣೆಗೆತ್ತಿಕೊಂಡಿದೆ. ಇದರಲ್ಲಿ ವಿಶೇಷ ಏನಪ್ಪಾ ಅಂದರೆ, ಸಾಮಾನ್ಯವಾಗಿ ಒಬ್ಬ ವ್ಯಕ್ತಿಯನ್ನು ಬೇರೆಯಾರಾದರೂ ಅನಧಿಕೃತವಾಗಿ ತಮ್ಮ ಒತ್ತೆಯಲ್ಲಿ ಇರಿಸಿದ್ದರೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ದಾಖಲಿಸುತ್ತಾರೆ. ಆದರೆ, ಈ ಪ್ರಕರಣದಲ್ಲಿ ಚಿಂಪಾಂಜಿಯ ಪರವಾಗಿ ಹೇಬಿಯಸ್‌ ಕಾರ್ಪಸ್‌ ದಾಖಲಿಸಿರುವುದು. ತಮ್ಮ ವಾದವನ್ನು ಪುಷ್ಟೀಕರಿಸಲು ಅವರು, 1772ರ ಪ್ರಸಿದ್ಧ ಇಂಗ್ಲಿಷ್ ಪ್ರಕರಣ- ಅಮೆರಿಕದ ಜೀತದಾಳು ಜೇಮ್ಸ್‌ ಸೋಮರ್‍ಸೆಟ್‌ ಎಂಬಾತ ಲಂಡನ್‌ನಲ್ಲಿರುವ ತನ್ನ ಮಾಲೀಕನ ಹಿಡಿತದಿಂದ ತಪ್ಪಿಸಿಕೊಂಡು ಹೋದಾಗ ಮತ್ತೆ ಆತನ್ನನ್ನು ಹಿಡಿದು ಜೀತಕ್ಕೆ ಒಪ್ಪಿಸಿದ ಪ್ರಕರಣ -ವನ್ನು ಉದಾಹರಣೆಯಾಗಿ ಕೊಟ್ಟಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣ ಇದಾಗಿದ್ದು, ಇದನ್ನೇ ಚಿಂಪಾಂಜಿ ಪ್ರಕರಣಕ್ಕೂ ಹೋಲಿಸಿರುವುದರಿಂದ ಚಿಂಪಾಂಜಿಗೂ ಮಾನವ ಹಕ್ಕುಗಳಿವೆಯೇ ಎಂಬ ಜಿಜ್ಞಾಸೆ ಮೂಡಿದೆ. ಅಂದ ಹಾಗೆ, ಚಿಂಪಾಂಜಿಯ ಪರವಾಗಿ ಮುಂದಿನ ವಾರ ಇನ್ನೊಂದು ದಾವೆಯನ್ನೂ ಹೂಡಲು ಇದೇ ಸಂಘಟನೆ ಚಿಂತನೆ ನಡೆಸಿದೆ.

 

Author : ನೆಟ್‌ ಸಂಚಾರಿ 

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited