Untitled Document
Sign Up | Login    
ಕೇಶವಿನ್ಯಾಸಕಾರರ ಜತೆಗಿನ ಬಾಂಧವ್ಯವೇ ಹೆಚ್ಚಂತೆ ಈ ಮಹಿಳೆಯರಿಗೆ!

ಸಾಂದರ್ಭಿಕ ಚಿತ್ರ

ಹೌದು.. ಮಹಿಳೆಯರು ತಮ್ಮ ಜೀವನಸಂಗಾತಿ ಜತೆ ದೀರ್ಘಕಾಲ ಇರುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಆದರೆ, ಕೇಶವಿನ್ಯಾಸದ ವಿಷಯದಲ್ಲಿ ಒಬ್ಬರನ್ನೇ ಬಹುಕಾಲ ನೆಚ್ಚಿಕೊಂಡಿರುತ್ತಾರೆ ಎಂಬ ಅಂಶ ಹೊಸ ಸಮೀಕ್ಷೆಯೊಂದರಲ್ಲಿ ಬಹಿರಂಗವಾಗಿದೆ.
ನೆಟ್‌ವೋಚರ್‍ಕೋಡ್ಸ್‌ ಎಂಬ ಆನ್‌ಲೈನ್‌ ಶಾಪಿಂಗ್‌ ಸಂಸ್ಥೆ ಇಂಥದ್ದೊಂದು ಸಮೀಕ್ಷೆ ನಡೆಸಿದೆ. ಇದರ ಪ್ರಕಾರ, ಅಲ್ಲಿ ಮಹಿಳೆ ಒಬ್ಬರು ಸರಾಸರಿ 12.4 ವರ್ಷದಷ್ಟು ದೀರ್ಘಕಾಲ ಒಬ್ಬನೇ ಕೇಶವಿನ್ಯಾಸಕಾರನನ್ನೇ ತನ್ನ ಕೇಶವಿನ್ಯಾಸಕ್ಕೆ ನೆಚ್ಚಿಕೊಂಡಿದ್ದ ವಿಚಾರ ಬಹಿರಂಗವಾಗಿದೆ. ಈ ಅವಧಿ ಅಲ್ಲಿನ ಸರಾಸರಿ ದಾಂಪತ್ಯದ ಅವಧಿಗಿಂತ ಹೆಚ್ಚಿನದ್ದು ಎಂದು ಹೇಳಲಾಗುತ್ತಿದೆ. ಅಂದರೆ, ಪ್ರಸ್ತುತ ಬ್ರಿಟನ್‌ನಲ್ಲಿ ದಾಂಪತ್ಯ ಜೀವನದ ಸರಾಸರಿ ಗರಿಷ್ಠ ಅವಧಿ 11 ವರ್ಷ 6 ತಿಂಗಳು ಅಷ್ಟೇ..
ಇದು ಇಷ್ಟಕ್ಕೇ ಮುಗಿದಿಲ್ಲ. ಮಹಿಳೆಯರ ಜೀವನದಲ್ಲಿ ಅತಿ ಪ್ರಾಮುಖ್ಯ10 ಜನರ ಪಟ್ಟಿ ಮಾಡ ಹೇಳಿದರೆ, ಅದರಲ್ಲಿ ಅವರು ತಮ್ಮ ಕೇಶವಿನ್ಯಾಸಕಾರರ ಹೆಸರನ್ನು ನಮೂದಿಸುತ್ತಾರಂತೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಅಧ್ಯಯನ ನಡೆಸಿದಾಗ, ಮಹಿಳೆಯರು ತಮ್ಮ ಜೀವನದಲ್ಲಿ ಕೇಶವಿನ್ಯಾಸಕಾರರ ಜತೆಗೆ ಹೆಚ್ಚು ಆತ್ಮೀಯವಾಗಿರುವುದು ಕಂಡು ಬಂದಿದೆ. ಆದರೆ, ಒಬ್ಬ ಕೇಶವಿನ್ಯಾಸಕಾರನನ್ನು ಆಯ್ಕೆ ಮಾಡಲು ಪ್ರತಿ ಮಹಿಳೆ ಸರಾಸರಿ ಒಂದು ವರ್ಷ ತೆಗೆದುಕೊಳ್ಳುತ್ತಾರೆ ಎಂದು ನೆಟ್‌ವೋಚರ್‍ಕೋಡ್ಸ್‌ ಸಂಸ್ಥೆ ತಿಳಿಸಿದೆ.
ಇದು ಭಾರತೀಯ ಮಹಿಳೆಯರಿಗೆ ಅನ್ವಯವಾಗಲ್ಲ. ಯಾಕೆಂದರೆ ಈ ಸಮೀಕ್ಷೆ ನಡೆದಿರುವುದು ಬ್ರಿಟನ್‌ನಲ್ಲಿ. ಪಾಶ್ಚಾತ್ಯ ಜೀವನ ಶೈಲಿಯಲ್ಲಿ ದಾಂಪತ್ಯಜೀವನ ದೀರ್ಘಕಾಲ ಉಳಿಯಿತೆಂದರೆ ಅದೊಂದು ದಾಖಲೆಯೇ ಸರಿ. ಹೀಗಾಗಿ, ಇಂತಹ ವಿಷಯಗಳ ಸಮೀಕ್ಷೆ, ಪ್ರತಿಯೊಂದು ಬಾಂಧವ್ಯದ ಅವಧಿ ಎಲ್ಲವೂ ಅವರಿಗೆ ಅಧ್ಯಯನದ ಮತ್ತು ಅಚ್ಚರಿಯ ವಿಷಯ ಎಂದರೆ ತಪ್ಪಾಗಲಾರದು.

 

Author : ದಿವ್ಯಶ್ರೀ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited