Untitled Document
Sign Up | Login    
ಬೆಂಗಳೂರಿಗರಿಗೆ ನಿಮ್ಮ ಭಾಷೆ ಬರತ್ತಾದರೆ, ನೀವ್ಯಾಕೆ ಕನ್ನಡ ಮಾತನಾಡಬಾರದು?


ಬೆಂಗಳೂರು ಅಂದ್ರೆ ಕನ್ನಡಿಗರು ಅಲ್ಪಸಂಖ್ಯಾತರು, ಇತರೆ ಭಾಷಿಕರು ಬಹುಸಂಖ್ಯಾತರು ಎಂಬ ಮಟ್ಟಿಗೆ ಬೆಳೆದಿದೆ. ಇದು ಕನ್ನಡಿಗರನ್ನು ಕಾಡುವ ಕೊರಗೂ ಹೌದು. ಅನ್ಯಭಾಷಿಕರು ಅವರ ಭಾಷೆಯನ್ನು ಇಲ್ಲಿ ಮಾತನಾಡುತ್ತಾರೆ. ಕನ್ನಡದ ಬಗ್ಗೆ ಎಲ್ಲರಿಗೂ ಕೇವಲವಾದ ಭಾವನೆ. ಕನ್ನಡಿಗರೂ ಆಂಗ್ಲ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಮಕ್ಕಳಿಗೂ ಅದನ್ನೇ ಕಲಿಸುತ್ತಿರುವ ಈ ಸಂದಿಗ್ಧಾವಸ್ಥೆಯಲ್ಲಿ ಟೆಕ್ಕಿಗಳ ಬಳಗವೊಂದು ಸದ್ದಿಲ್ಲದೇ ಪರಭಾಷಿಕರಿಗೂ ಕನ್ನಡ ಕಲಿಸುವ ಕೈಂಕರ್ಯಕ್ಕೆ ಪಣತೊಟ್ಟಿದೆ.

ಇದಕ್ಕೆ ಪೂರಕವಾಗಿ, ಬೆಂಗಳೂರಿಗರು ನಿಮ್ಮ ಭಾಷೆ ಮಾತನಾಡುತ್ತಾರಾದರೆ ನೀವ್ಯಾಕೆ ಕನ್ನಡ ಮಾತನಾಡಬಾರದು ಎಂಬರ್ಥದ ತಲೆಬರೆಹ ಅವರ ಸಾಮಾಜಿಕ ಜಾಲತಾಣದ ಫ್ಯಾನ್ ಪೇಜ್‌ನಲ್ಲಿ ರಾರಾಜಿಸುತ್ತಿದೆ. ಈ ಫ್ಯಾನ್ ಪೇಜ್ ರೂವಾರಿಗಳು ಸದ್ದಿಲ್ಲದೇ ಕನ್ನಡ ಸೇವೆಯಲ್ಲಿ ತಮ್ಮ ತೊಡಗಿಸಿಕೊಂಡಿರುವ ಕೆಲವು ಟೆಕ್ಕಿಗಳು. ಕನ್ನಡ ಬರುತ್ತದಾ? ಎಂದು ಕೇಳಿ ಕೇಳಿ ಸುಸ್ತಾದ ಇವರು, ಕನ್ನಡೇತರರಿಗೆ ಕನ್ನಡ ಕಲಿಸಲು ಮುಂದಾಗಿದ್ದಾರೆ.

ಅನ್ಯಭಾಷಿಗರು ಕನಿಷ್ಠಪಕ್ಷ ಕನ್ನಡ ಮಾತನಾಡಲು ಕಲಿತರೆ ಸಾಕು ಎಂಬ ಆಶಯ ಇವರದು. ಹೀಗೆ ಈ ಆಶಯದಡಿ ರೂಪುಗೊಂಡಿದ್ದೇ “www.kannadabar­ uthe.com” “ww­ w.iknowk­ annada.com”
ಎಂಬ ಎರಡು ಜಾಲತಾಣಗಳು. ಇವುಗಳ ರೂವಾರಿ ಬೇರಾರೂ ಅಲ್ಲ, ೩೫ ವರ್ಷದ ರುದ್ರಪ್ರಸಾದ್ ನಂಜುಂಡಪ್ಪ. ವೃತ್ತಿಯಲ್ಲಿ ಐಟಿ ಉದ್ಯೋಗಿ. ತಾಯ್ನುಡಿಯ ಬಗ್ಗೆ ಇನ್ನಿಲ್ಲದ ಅಭಿಮಾನ. ಪ್ರಸಾದ್ ಮತ್ತು ರಾಜಾಜಿನಗರ ಸುತ್ತಮುತ್ತ ಇರುವ ಅವರ ಹತ್ತು ಗೆಳೆಯರು ಸೇರಿ ಈ ಸುಂದರ ಯೋಜನೆ ಅನುಷ್ಠಾನಕ್ಕೆ ತಂದವರು.

ವೆಬ್‌ತಾಣದ ಮೊದಲ ಪುಟದಲ್ಲೇ ಕನ್ನಡದ ಶಬ್ದಗಳು ಇಂಗ್ಲಿಷ್‌ನಲ್ಲಿದ್ದು, ಪಕ್ಕದಲ್ಲೇ ಕನ್ನಡದಲ್ಲಿ ಅವುಗಳ ಉಚ್ಚರಿಸುವುದು ಹೇಗೆ ಎಂಬುದನ್ನೂ ಧ್ವನಿ ಮೂಲಕ ಒದಗಿಸಲಾಗಿದೆ. ಇದು ಕನ್ನಡ ಕಲಿಕೆಗೆ ಬಹಳ ಸಹಕಾರಿಯಾಗಿದ್ದು, ಯಾರ ಸಹಾಯವೂ ಇಲ್ಲದೇ ಇಂಟರ್‌ನೆಟ್ ಮೂಲಕ ಕನ್ನಡ ಕಲಿಯಬಹುದಾಗಿದೆ.

2೦೦9ರಲ್ಲಿ ಇಂಥದ್ದೊಂದು ವೆಬ್‌ಸೈಟ್ ಯೋಜನೆ ರೂಪಿಸಿದ್ದು, ೨೦೧೨ರ ಮೇ ವೇಳೆಗೆ ಇದು ಪೂರ್ಣಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬಂತು.

ವೆಬ್‌ಸೈಟ್ ಕೂಡಾ ಬಹಳ ಆಕರ್ಷಕವಾಗಿದ್ದು, ಸರಳವಾಗಿದೆ. ಬಳಕೆದಾರ ಸ್ನೇಹಿ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಿದ್ದು, ನಿತ್ಯಜೀವನದಲ್ಲಿ ಸಂವಹನ ಮಾಡಲು ಬೇಕಾದ ಕನ್ನಡದ ಶಬ್ದಗಳು, ನುಡಿಗಟ್ಟುಗಳು, ಶುಭಹಾರೈಕೆ ಪದಗಳು ಇದರಲ್ಲಿವೆ. ವ್ಯಾಪಾರಿಗಳೊಂದಿಗಿನ ಸಂಭಾಷಣೆ, ಕ್ಯಾಬ್ ಡ್ರೈವರ್ ಜತೆಗಿನ ಮಾತುಕತೆ, ಮನೆಗೆಲಸದವರ ಜತೆಗೆ ಕನ್ನಡದ ಮಾತು ಇತ್ಯಾದಿ ವಿಷಯಗಳು ತಾಣದಲ್ಲಿವೆ. ಇನ್ನು ವ್ಯಾಕರಣದ ವಿಚಾರಕ್ಕೆ ಬಂದರೆ, ಅತ್ಯಂತ ಸರಳ ರೀತಿಯಲ್ಲಿ ಅದನ್ನು ಮನದಟ್ಟು ಮಾಡಿಕೊಡುವ ಪ್ರಯತ್ನ ಇಲ್ಲಿ ನಡೆಸಿದ್ದಾರೆ.

ಒಟ್ಟಿನಲ್ಲಿ ಕನ್ನಡದ ಬಗೆಗಿನ ಅಭಿಮಾನ ಕೇವಲ ರಾಜ್ಯೋತ್ಸವಕ್ಕೆ ಸೀಮಿತವಾಗದಂತೆ ಈ ಟೆಕ್ಕಿಗಳ ಗುಂಪು ನೋಡಿಕೊಂಡಿದೆ. ಪರಭಾಷಿಕರಿಗೂ ಕನ್ನಡ ಕಲಿಸುವ ಇವರ ಪ್ರಯತ್ನವನ್ನು ಶ್ಲಾಘಿಸಲೇಬೇಕು.

 

Author : ಚಂದ್ರಲೇಖಾ ರಾಕೇಶ್

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited