Untitled Document
Sign Up | Login    
ಕಾಂಗ್ರೆಸ್ ಗೆ ಪಟೇಲರ ಬಗ್ಗೆ ಗೌರವವಿದ್ದಿದ್ದರೆ ಇಂದು ನಡೆಯಬೇಕಿದ್ದ ಶಂಕುಸ್ಥಾಪನೆ ಎಂದೋ ನಡೆಯಬೇಕಿತ್ತು

ಗಾಂಧಿಜೀ ಅವರೊಂದಿಗೆ ಸರ್ದಾರ್ ವಲ್ಲಭ ಭಾಯ್ ಪಟೇಲ್

ಅ.31,2013, ಭಾರತದ ಮೊಟ್ಟ ಮೊದಲ ಗೃಹ ಮಂತ್ರಿ, ಸರ್ದಾರ್ ವಲ್ಲಭ ಭಾಯ್ ಪಟೇಲರ 138ನೇ ಜನ್ಮ ದಿನ. ಭಾರತಕ್ಕೆ ಬ್ರಿಟೀಷರಿಂದ ಸ್ವಾತಂತ್ರ್ಯ ಬಂದಿದ್ದರೂ ರಾಜ ಮನೆತನದ ಸರ್ವಾಧಿಕಾರದಿಂದ ಮುಕ್ತಿ ದೊರೆತಿರಲಿಲ್ಲ. ಸರ್ವಾಧಿಕಾರವನ್ನು ಕೊನೆಗೊಳಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಎಲ್ಲಾ ರಾಜ ಮನೆತನಗಳ ಮನವೊಲಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಹಾಗಂತ ಅವರೊಂದಿಗೆ ಯುದ್ಧ ಮಾಡಲೂ ಸಾಧ್ಯವಾಗದ ಸ್ಥಿತಿ.

ದೇಶವನ್ನು ಒಗ್ಗೂಡಿಸುವ ಮಹತ್ ಕಾರ್ಯಕ್ಕೆ ನೆಹರೂ ಅವರಂಥಹ ಕ್ಷಾತ್ರ ಗುಣಗಳನ್ನು ಹೊಂದದ ಯಡವಟ್ಟು ಸ್ವಭಾವದ ವ್ಯಕ್ತಿತ್ವವೂ ಅಥವಾ ಸ್ವಾತಂತ್ರ್ಯಗಳಿಸಲು ಸತ್ಯಾಗ್ರಹ ಕೈಗೊಳ್ಳುವ ಗಾಂಧಿಯಂಥ ಸ್ವಭಾವವೋ ಪರಿಹಾರವಾಗಿ ಕಾಣಲಿಲ್ಲ. ಬದಲಾಗಿ ಕಬ್ಬಿಣದಂತೆ ಕಠಿಣ ನಿರ್ಧಾರಗಳನ್ನು ತಳೆಯುವ ಓರ್ವ ಕುಷಾಗ್ರ ಮತಿ ನಾಯಕನ ಅಗತ್ಯವಿತ್ತು, ಅವರೇ ದೇಶ ಹೆಮ್ಮೆಯಿಂದ ಉಕ್ಕಿನ ಮನುಷ್ಯ(Iron Man of India)ಎಂದು ಗುರುತಿಸುವ ಸರ್ದಾರ್ ವಲ್ಲಭ ಭಾಯ್ ಪಟೇಲ್.

565 ಅರೆ-ಸ್ವತಂತ್ರ ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸುವ ಮಹತ್ಕಾರ್ಯಕ್ಕೆ ಪಟೇಲರೇ ಸೂಕ್ತ ವ್ಯಕ್ತಿ ಎಂದು ಕಾಂಗ್ರೆಸ್ ಪಕ್ಷದ, ಮೌಂಟ್ ಬ್ಯಾಟನ್ನರ ಹಾಗೂ ಹಿರಿಯ ಬ್ರಿಟಿಷ್ ಅಧಿಕಾರಿಗಳ ಒಮ್ಮತದ ಅಭಿಪ್ರಾಯವಾಗಿತ್ತು. “ರಾಜ್ಯಗಳ ಈ ಸಮಸ್ಯೆ ಎಷ್ಟು ಸಂಕೀರ್ಣವಾಗಿದೆಯೆಂದರೆ ನೀವೊಬ್ಬರೇ ಅದನ್ನು ಬಗೆಹರಿಸಲು ಸಮರ್ಥರು” ಎಂದು ನೆಹರೂಗೆ ಪ್ರಧಾನಿ ಪಟ್ಟ ಕೊಡಿಸಿದ್ದ ಗಾಂಧೀಜಿ ಸ್ವತಃ ಪಟೇಲರಿಗೆ ಹೇಳಿದ್ದರು. ಬಹುಶಃ ಗಾಂಧೀಜಿ ಅವರಿಗೂ ನೆಹರೂ ಎಂಬ ಎಡಬಿಡಂಗಿ ವ್ಯಕ್ತಿತ್ವದಿಂದ ಇಂಥಹ ಮಹತ್ಕಾರ್ಯ ನಡೆಯುವುದಿಲ್ಲ ಎಂದು ಗೊತ್ತಿತ್ತು ಅನಿಸುತ್ತದೆ. ದೇಶವನ್ನೇ ಒಗ್ಗೂಡಿಸಲಾಗದವರು ಮುನ್ನಡೆಸುವುದಾರರೂ ಹೇಗೆ ಅಥವಾ ದೇಶವನ್ನು ಒಗ್ಗೂಡಿಸುವಂತಹ ಧೀರ ವ್ಯಕ್ತಿತ್ವಕ್ಕೆ ಪ್ರಧಾನಿಯಾಗುವ ಅರ್ಹತೆ ಇದ್ದರೂ ಅದಕ್ಕೆ ಗಾಂಧೀಜಿ ಏಕೆ ಮುಳ್ಳಾದರು ಎಂದುಬು ಇಂದಿಗೂ ಎಂದಿಗೂ ಪ್ರಶ್ನಾರ್ಥಕವೇ.....

ಸರ್ದಾರ್ ಪಟೇಲ್
1947ರ ಮೇ 6ರಂದು ಪಟೇಲರು ರಾಜರುಗಳ ಜೊತೆ ವಿಲೀನದ ಮಾತುಕತೆ ಪ್ರಾರಂಭಿಸಿದರು. ಈ ಮಾತುಕತೆಯ ಉದ್ದೇಶ ಈ ರಾಜರು ಭವಿಷ್ಯದ ಭಾರತ ಸರ್ಕಾರದೊಂದಿಗೆ ಸಹಕಾರ ಕೊಡುವುದಕ್ಕೂ ಹಾಗೂ ಮುಂದೆ ಉಂಟಾಗಬಹುದಾದ ಘರ್ಷಣೆಗಳನ್ನು ಈಗಲೇ ಚಿವುಟಿ ಹಾಕುವುದಾಗಿತ್ತು. ಈ ಗುರುತರ ಕಾರ್ಯವನ್ನು ಯಶಸ್ವಿಯಾಗಿ ಕೈಗೂಡಿಸುವ ಮನಃ ಸ್ಥೈರ್ಯ, ಚಾಣಾಕ್ಷತನ ಹಾಗೂ ಅಚಲತೆ ಇದ್ದವರಾದ ಪಟೇಲರು, ರಾಷ್ಟ್ರಹಿತಕ್ಕಾಗಿ ಮುಂದೆ ನಿಂತು ಸರ್ಕಾರದ ನಿರ್ಧಾರಗಳನ್ನು ಜಾರಿಮಾಡುವುದಕ್ಕೆ ತಯಾರಿದ್ದರೂ, ಸಂಸ್ಥಾನಿಕರೊಂದಿಗೆ ಸಂಧಾನ ನಡೆಸಲು ಬೇಕಾದ ಅನುಭವವನ್ನೂ, ಮುತ್ಸದ್ದಿತನವನ್ನೂ ಪಡೆದುಕೋಡಿದ್ದರು. ಇಂದು ನಾವೆಲ್ಲ ಭಾರತವನ್ನು ಒಂದು ದೇಶವಾಗಿ ನೋಡುತ್ತಿದ್ದರೆ ಅದಕ್ಕೆ ಕಾರಣ ಸರ್ದಾರ್ ಪಟೇಲ್.....

ಆದರೆ.... ವಿರೋಧಿಗಳ ಕುತಂತ್ರದಿಂದ ಪ್ರಧಾನಿಯಾಗಬಹುದಾಗಿದ್ದ ಸುಭಾಷ್ ಚಂದ್ರ ಬೋಸರನ್ನು ಕಳೆದುಕೊಂಡೆವು..... ಪ್ರಧಾನಿಯಾದರೂ ಲಾಲ್ ಬಹದ್ದೂ ಶಾಸ್ತ್ರಿ ಅವರನ್ನು ಉಳಿಸಿಕೊಳ್ಳಲು ವಿಫಲರಾದೆವು......ವಸ್ತುಶಃ ಸರ್ದಾರ್ ಪಟೇಲ್‌ರವರೇ ಕಾಂಗ್ರೆಸ್ ಸದಸ್ಯರಿಂದ ಪ್ರಧಾನಿ ಹುದ್ದೆಗೆ ಬೆಂಬಲಿಸಲ್ಪಟ್ಟಿದ್ದರೂ ಗಾಂಧಿ ಗಿರಿಗೆ ಶರಣು ಹೊಡೆದು ನೆಹರೂ ಅವರನ್ನು ಪ್ರಧಾನಿ ಪಟ್ಟಕ್ಕೇರಿಸಲಾಯಿತು. ಉತ್ತಮ ನಾಯರನ್ನು ಕಳೆದುಕೊಳ್ಳುವುದು ಭಾರತಕ್ಕೆ ಬಂದೊದಗಿರುವ ಶಾಪವೇ ಇರಬೇಕು. ಅದರಲ್ಲಿಯೂ ಕಾಂಗ್ರೆಸ್ ನ ನಾಯಕರಿಗೆ ದಶಕಗಳಿಂದಲೂ ಶರಣಾಗುವ ವ್ಯಾಧಿಯ ಶಾಪ ಎಂದೇ ಹೇಳಬೇಕು.....

ರಾಷ್ಟ್ರೀಯತೆಯ ಸಂಕೇತವಾಗಿರುವ, ಇಡೀ ಭಾರತವನ್ನು ಪ್ರತಿನಿಧಿಸುವ ನಾಯಕನನ್ನು ದೇಶವನ್ನು ಲೂಟಿ ಮಾಡಲೆಂದೇ ಅವತರಿಸಿರುವ ಕಾಂಗ್ರೆಸ್ ನವರು ತಮ್ಮ ಪಕ್ಷಕ್ಕೆ ಮಾತ್ರ ಸೀಮಿತಗೊಳಿಸುತ್ತಿದ್ದಾರೆ ಎಂದರೆ ಅವರ ರೋಗಗ್ರಸ್ಥ ಮನಸ್ಥಿತಿ ಯಾವ ಮಟ್ಟದ್ದು ಎಂದು ಹೇಳಬೇಕಿಲ್ಲ. ದೇಶವನ್ನು ತಮ್ಮ ಪಿತ್ರಾರ್ಜಿತ ಆಸ್ತಿ ಎಂದು ಭಾವಿಸಿರುವ ಕಾಂಗ್ರೆಸ್ಸಿಗರ ಕೈಲಿ ಸುದೀರ್ಘ 9 ವರ್ಷದ ಅಧಿಕಾರವಿತ್ತು. ಆ ಸಂದರ್ಭದಲ್ಲಿ ಸರ್ದಾರ್ ಪಟೇಲ್ ಅವರ ಬಗ್ಗೆ ಇರದ ಅಭಿಮಾನ, ಭಕ್ತಿ, ನರೇಂದ್ರ ಮೋದಿ ಗುಜರಾತ್ ನಲ್ಲಿ ಪಟೇಲ್ ಅವರ ಜೀವನಗಾಥೆಯನ್ನು ಸಾರುವ ಸಂಗ್ರಹಾಲಯ ಉದ್ಘಾಟಿಸುವಾಗ ಇದ್ದಕಿದ್ದಂತೆಯೇ ಉಕ್ಕಿ ಹರಿಯುತ್ತದೆ.
ಇನ್ನು ನರೇಂದ್ರ ಮೋದಿ ವಿಶ್ವದಲ್ಲೇ ಅತಿ ಎತ್ತರವಾದ ಸರ್ದಾರ್ ಪುತ್ಥಳಿಗೆ ಶಂಕು ಸ್ಥಾನಪನೆ ಮಾಡುವಾಗ ಪಟೇಲ್ ರನ್ನು ಖಾನ್ ಗ್ರೆಸ್ ಕೋಟೆಯಲ್ಲೇ ಕಟ್ಟಿ ಹಾಕಿರುವ ನಾಯಕರು ಮೈಪರಚಿಕೊಂಡು ಮೋದಿಗೆ ಪ್ರಶ್ನೆಗಳ ಸುರಿಮಳೆಗೈಯ್ಯುತ್ತಾರೆ.

ಒಂದು ವೇಳೆ ಕಾಂಗ್ರೆಸ್ ನವರಿಗೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಬಗ್ಗೆ ನಿಜಕ್ಕೂ ಅಭಿಮಾನ, ಗೌರವ ಇದ್ದಿದ್ದರೆ ಇಂದು ನರೇಂದ್ರ ಮೋದಿ ಅವರು ಮಾಡುತ್ತಿರುವ ಮಹತ್ಕಾರ್ಯವನ್ನು ಎಂದೋ ಮಾಡಿರಬೇಕಿತ್ತು. ಪಾಪ ಲೂಟಿ ಮಾಡುವುದಕ್ಕೇ ಸಮಯದ ಅಭಾವ ಎದುರಿಸುತ್ತಿರುವ ನೆಹರೂ ಪೀಳಿಗೆಗೆ ಇಂಥಹ ಸತ್ಕಾರ್ಯಗಳ ಬಗ್ಗೆ ಹೇಗೆ ತಾನೆ ಗಮನ ಹರಿಸಲು ಸಾಧ್ಯ?

ಅದೇನೆ ಇರಲಿ ಅಂದು ಗುಜರಾತಿನ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್, ಸರ್ವಾಧಿಕಾರದಿಂದ ಭಾರತವನ್ನು ಒಗ್ಗೂಡಿಸಿ ಏಕತೆಯ ಶ್ರೇಷ್ಠ ಭಾರತ ನಿರ್ಮಿಸಿದರು. ಭಾರತವನ್ನು ಪಿತ್ರಾರ್ಜಿತ ಆಸ್ತಿಯೆಂದು ಭಾವಿಸಿ, ಅಲ್ಪಸಂಖ್ಯಾತರ ಓಲೈಕೆಯಲ್ಲಿ ದೇಶವನ್ನು ಒಡೆದು ವಂಶಾಡಳಿತ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ಸರ್ವಾಧಿಕಾರವನ್ನು ಇಂದು ಅದೇ ಗುಜರಾತಿನ ಮತ್ತೊಬ್ಬ ಉಕ್ಕಿನ ಮನುಷ್ಯ ಕೊನೆಗಾಣಿಸಿ ಅಲ್ಪಸಂಖ್ಯಾತರ ಓಲೈಕೆಯಿಂದ ಒಡೆದುಹೋಗುತ್ತಿರುವ ಭಾರತವನ್ನು ಒಗ್ಗೂಡಿಸಲಿ ಎಂದು ನಿರೀಕ್ಷಿಸೋಣ.....

ಒಂದೇ ಭಾರತ ಶ್ರೇಷ್ಠ ಭಾರತ......

 

Author : ಶ್ರೀನಿವಾಸ್ ರಾವ್

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited