Untitled Document
Sign Up | Login    
ಸಾಧು ಹೇಳಿದ ಚಿನ್ನದ ಕಥೆ: ಉತ್ಖನನಕ್ಕಾಗಿ ಮುಂದಾಗಿದೆ ಕೇಂದ್ರ ಸರ್ಕಾರ


ಕನಸಿನಲ್ಲಿ 1000 ಟನ್ ಚಿನ್ನವನ್ನು ಕಂಡಿದ್ದು, ಅದನ್ನು ಉತ್ಖನನ ಮಾಡಿ ದೇಶದ ಆರ್ಥಿಕ ಸಂಕಷ್ಟ ಸರಿಪಡಿಸಿಕೊಲ್ಳಿ ಎಂದು ಉತ್ತರ ಪ್ರದೇಶದ ಸಾಧುವೊಬ್ಬರು ನೀಡಿದ ಸಲಹೆ ಮೇರೆಗೆ ಕೇಂದ್ರ ಸರ್ಕಾರ ಈಗ ಸಂಪತ್ತು ಇರುವ ಸ್ಥಳದಲ್ಲಿ ಉತ್ಖನನ ಮಾಡಲು ಹೊರಟಿದೆ.

ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ ಶೋಭನ್ ಸರ್ಕಾರ್ ಎಂಬ ಸಾಧುವೊಬ್ಬರಿದ್ದಾರೆ. ಇವರಿಗೆ ಇತೀಚೆಗಷ್ಟೆ ಕನಸೊಂದು ಬಿದ್ದಿದೆ. 1857ರ ಸಿಪಾಯಿ ದಂಗೆಯ ಸಂಧರ್ಭದಲ್ಲಿ ಹುತಾತ್ಮರಾದ ರಾಜ ರಾವ್ ರಾಮ್ ಬುಕ್ಸ್ ಸಿಂಗ್ ಎಂಬುವವರು ಶೋಭನ್ ಸರ್ಕಾರ್ ಅವರ ಕನಸಿನಲ್ಲಿ ಬಂದು ಉನ್ನಾವ್ ಜಿಲ್ಲೆಯ ದೌಂಡಿಯಾ ಖೇಡಾದ ಕೋಟೆಯಲ್ಲಿ 1000 ಟನ್ ಚಿನ್ನವಿದೆ. ಅದನ್ನು ವಶಕ್ಕೆ ತೆಗೆದುಕೊಳ್ಳಿ ಎಂದು ಹೇಳಿದ್ದಾರಂತೆ.

ಈ ಕನಸಿನ ಕಥೆಯನ್ನು ಸಾಧು ಕೇಂದ್ರ ಸಚಿವರೊಬ್ಬರಿಗೆ ವಿವರಿಸಿ, ಅಲ್ಲಿದ್ದ ವಜ್ರ, ವೈಡೂರ್ಯ, ರತ್ನ ಮೊದಲಾದ ಸಂಪತ್ತನ್ನು ದೇಶಕ್ಕೆ ಉಪಯೋಗಿಸಿ, ಆರ್ಥಿಕ ಸಂಕಷ್ಟವನ್ನು ಸರಿಪಡಿಸಿಕೊಳ್ಳಿ ಎಂದು ವಿವರಿಸಿದ್ದಾರೆ. ಸಾಧು ಹೇಳಿದ ಮಾತು ಮೇಲ್ನೋಟಕ್ಕೆ ವಿಚಿತ್ರವಾಗಿ ಕಂಡಿದ್ದರಿಂದ ಗಣಿ ಸಚಿವಾಲಯ ಆ ಜಾಗದಲ್ಲಿ ಸರ್ವೆ ನಡೆಸಿ, ಪರಿಶೀಲಿಸಿದಾಗ ಅಲ್ಲಿ ಚಿನ್ನವಿರುವ ಸಾಧ್ಯತೆ ಕಂಡು ಬಂದಿದೆ. ಹೀಗಾಗಿ ಇದೇ ಅ.18ರಂದು ಕೇಂದ್ರ ಸರ್ಕಾರ ಚಿನ್ನಕ್ಕಾಗಿ ನೆಲ ಅಗೆಯಲು ಸಜ್ಜಾಗಿದೆ. ದೌಂಡಿಯಾ ಖೆಡಾದ ಕೋಟೆಯಲ್ಲಿ ನಡೆಯುವ ಉತ್ಖನನವನ್ನು ಟೀವಿಯಲ್ಲಿ ನ್ಹೇರ ಪ್ರಸಾರ ಮಾಡಲೂ ನಿರ್ಧರಿಸಲಾಗಿದೆ.

ಒಂದು ವೇಳೆ 1000 ಟನ್ ಚಿನ್ನ ಸಿಕ್ಕಿದರೆ ಈಗಿನ ಮಾರುಕಟ್ಟೆ ದರದಲ್ಲಿ ಅದರ ಮೌಲ್ಯ ಅಂದಾಜು 3 ಲಕ್ಷ ಕೋಟಿ ರೂ. ಅರ್ಥಾತ್ ಕರ್ನಾಟಕದ ವಾರ್ಷಿಕ ಬಜೆಟ್ ನ 3ಪಟ್ಟು.

ಸಾಧು ಶೋಭನ್ ಸರ್ಕಾರ್ ತಮ್ಮ ಕನಸಿನ ಕಥೆಯನ್ನು ಸ್ಥಳೀಯ ಆಡಳಿತ, ರಾಜ್ಯ ಸರ್ಕಾರಕ್ಕು ವಿವರಿಸಿದ್ದರು. ಆಡ್ರೆ ಯಾರೊಬ್ಬರೂ ಅದನ್ನು ನಂಬಿರಲಿಲ್ಲ. ಬಳಿಕ ಶೋಭನ್ ಸರ್ಕಾರ್ ಕೇಂದ್ರ ಸಚಿವ ಚರನ್ ದಾಸ್ ಮಹಾಂತ ಅವರನ್ನು ಭೇಟಿಯಾಗಿ ವಿಚಾರ ತಿಳಿಸಿದರು. ಸಚಿವರು ಸೆ.22 ಹಾಗೂ ಅ.7ರಂದು ನಿಧಿ ಇರುವ ಸ್ಥಳಕ್ಕೆ ಭೇಟಿ ನೀಡಿ, ಶೋಭನ್ ಸರ್ಕಾರ್ ಜೊತೆ ಮಾತುಕತೆ ನಡೆಸಿದರು.
ಶೋಭನ್ ಸರ್ಕಾರ್ ತಮ್ಮನ್ನು ಭೇಟಿಯಾಗಿ ನಿಧಿ ಇರುವ ವಿಚಾರ ತಿಳಿಸಿದರು. ಅದು ನನಗೆ ಅಚ್ಚರಿಯಾಯಿತು. ಈ ಬಗ್ಗೆ ಪ್ರಧಾನಿ, ಹಣಕಾಸು ಸಚಿವರು, ಗೃಹ ಸಚಿವರು, ಗಣಿ ಸಚಿವರಿಗೆ ಪತ್ರ ಬರೆದೆ. ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಭೂಗರ್ಭ ಸರ್ವೇಕ್ಷಣಾ ಇಲಾಖೆಯನ್ನು ಸಂಪರ್ಕಿಸಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೂ ವಿಷಯ ಮುಟ್ತಿಸಿದ್ದೇನೆ. ಅಲ್ಲದೇ ಅಗಣಿ ಸಚಿವಾಲಯ ನಡೆಸಿದ ಸರ್ವೆಯಲ್ಲಿ ಚಿನ್ನ ಸಂಗ್ರಹವಿರುವ ಬಗ್ಗೆ ದೃಢಪಟ್ಟಿದೆ ಎಂದು ಚರಣ್ ದಾಸ್ ತಿಳಿಸಿದ್ದಾರಂತೆ ಹೀಗಂತ ದೆಹಲಿ ಪತ್ರಿಕೆ ವರದಿ ಮಾಡಿದೆ.

ದೌಂಡಿಯಾ ಖೇಡಾದಲ್ಲಿನ ಕೋಟೆ ಈಗಾಗಲೇ ಪತ್ತೆಯಾಗಿದ್ದು, ಅದು ಗಂಗಾ ನದಿ ದಂಡೆಯಮೇಲಿದೆ. ಅ.18ರಂದ ಉತ್ಖನನ ಆರಂಭವಾಗಲಿದ್ದು, ಟೀವಿಯಲ್ಲಿ ನೇರ ಪ್ರಸಾರ ಮಾದಲಾಗುವುದು ಎಂದು ಪುರಾತತ್ವ ಇಲಾಖೆಯ ಇಂದು ಪ್ರಕಾಶ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಒಂದು ಕನಸನ್ನು ನಂಬಿ ದೇಶದ ಸರ್ಕಾರವೊಂದು ನಿಧಿ ಧಕ್ಕೆ ಮುಂದಾಗಿರುವುದು ಇದೇ ಮೊದಲು.

ಇನ್ನೊಂದು ವಿಚಾರ ಏನೆಂದರೆ ಸಾಧು ಶೋಭನ್ ಸರ್ಕಾರ್ ಗೆ ಈ ನಡುವೆ ಇಂತದ್ದೇ ಮತ್ತೊಂದು ಕನಸು ಬಿದ್ದಿದೆಯಂತೆ. ಅದರ ಪ್ರಕಾರ ಮತ್ತೊಂದು ದೇಗುಲದ ಬಳಿ 2500ಟನ್ ಚಿನ್ನದ ನಿಧಿ ಇದೆ ಎಂಬ ಮಾಹಿತಿ ಹೊರಬಿದ್ದಿದೆ. ಒಂದು ವೇಳೆ ಈ ಕನಸೂ ನಿಜವಾದರೆ ಬರೋಬ್ಬರಿ 7.50 ಲಕ್ಷ ಕೋಟಿ.ರೂ ದೊರೆಯಲಿದೆ.

ಸಾಧು ಕನಸಿನ ಪ್ರಕಾರ ಕಾನ್ಪುರದಿಂದ 80 ಕಿ.ಮೀ ದೂರದಲ್ಲಿರುವ ಫತೇಪುಅರ ಸಮೀಪದ ಅದಂಪುರದಲ್ಲಿ ಹಲವು ದೇಗುಲಗಳಿವೆ. ಈ ಪೈಕಿ ಗಂಗಾ ನದಿ ತಟದಲ್ಲಿರುವ ಒಂದು ದೇಗುಲದ ಬಳಿ 2500 ಟನ್ ಗಳಷ್ಟು ಚಿನ್ನ ಇದೆಯಂತೆ. ಇನ್ನು ಈ ಕನಸಿನ ಬಗ್ಗೆ ಸರ್ಕಾರ ಏನು ಮಾಡಲಿದೆ ಹಾಗೂ ಕನಸಿನ ಕಥೆ ನಿಜವಾಗಲಿದೆಯೇ ಎಂಬ ಕುತೂಹಲಕ್ಕೆ ಕೆಲದಿನಗಳಲ್ಲೇ ಉತ್ತರ ಸಿಗಲಿದೆ. ಅಲ್ಲಿಯವರೆಗೆ ಕಾದುನೋಡಿ....

 

Author : ಲೇಖಾ ಆರ್

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited