Untitled Document
Sign Up | Login    
ಆರ್.ಟಿ.ಇ ಉಚಿತ ಸೀಟ್ ಗಾಗಿ ಸುಳ್ಳು ಪ್ರಮಾಣ ಪತ್ರ:ತನಿಖೆಗೆ ಮುಂದಾದ ಲೋಕಾಯುಕ್ತ

ಆರ್.ಟಿ.ಇ ಉಚಿತ ಸೀಟ್ ಗಾಗಿ ಸುಳ್ಳು ಪ್ರಮಾಣ ಪತ್ರ:ತನಿಖೆಗೆ ಮುಂದಾದ ಲೋಕಾಯುಕ್ತ

ಆರ್.ಟಿ.ಇ(ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ)ಯಡಿ ಮೀಸಲಾತಿ ಸೀಟು ಪಡೆಯುವ ನಿಟ್ಟಿನಲ್ಲಿ ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿದವರ ವಿರುದ್ಧ ಲೋಕಾಯುಕ್ತ ತನಿಖೆಗೆ ಮುಂದಾಗಿದೆ.

2013-14 ಶಿಕ್ಷಣ ಹಕ್ಕು ಕಾಯ್ದೆಯಡಿ ರಾಜ್ಯದಲ್ಲಿನ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿ ಹಾಗೂ ನರ್ಸರಿಗೆ 69,413 ಮಕ್ಕಳು ದಾಖಲಾಗಿದ್ದಾರೆ. ಪ್ರವೇಶದ ವೇಳೆ ಸುಳ್ಳು ಆದಾಯ ಪ್ರಮಾಣ ಪತ್ರ ನೀಡಲಾಗಿದೆ ಎಂಬ ಅರೋಪಗಳು ಕೇಳಿಬಂದಿದ್ದು, ಈ ಹಿನ್ನಲೆಯಲ್ಲಿ ಸತ್ಯಾಸತ್ಯತೆ ಪರಿಶೀಲಿಸಲು ನಿರ್ಧರಿಸಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಇಲಾಖೆಯ ಉಪನಿರ್ದೇಶಕರಿಗೆ ಪತ್ರ ಬರೆದು ಪ್ರವೇಶ ಸಂದರ್ಭದಲ್ಲಿ ಪೋಷಕರು ನೀಡುವ ಅದಾಯ ಪ್ರಮಾಣ ಪತ್ರಗಳ ನೈಜತೆ ಬಗ್ಗೆ ಪರಿಶೀಲಿಸಿ ಸುಳ್ಳು ಪ್ರಮಾಣ ಪತ್ರಗಳನ್ನು ರದ್ದು ಪಡಿಸಲು ಕೋರಿದೆ.

ಅಲ್ಲದೇ ಕಂದಾಯ ಇಲಾಕೆಯ ಅಧಿಕಾರಿಗಳು ಜಾತಿ ಆದಾಯ ಪ್ರಮಾಣ ಪತ್ರ ನೀಡುವಾಗ ಪೋಷಕರ ಪೂರ್ವಾಪರ ವಿಚಾರಿಸದೆ, ಸೂಕ್ತ ಪರಿಶೀಲನೆ ನಡೆಸದೇ ಹೆಚ್ಚು ಆದಾಯವಿದ್ದವರಿಗೂ ವಾರ್ಷಿಕ 3.5 ಲಕ್ಷದೊಳಗೆ ಆದಾಯ ಮಿತಿ ತೋರಿಸಿ ಪ್ರಮಾಣಪತ್ರ ನೀಡುತ್ತಿದ್ದಾರೆ. ಇದರಿಂದಾಗಿ ಸಾಕಷ್ಟು ಅರ್ಹ ಬಡ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ಖಾಸಗಿ ಶಾಲೆಯವರು ದೂರು ನೀಡಿದ್ದಾರೆ.

ಇದನ್ನಾಧರಿಸಿ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಶಿಕ್ಷಣ ಹಾಗೂ ಕಂದಾಯ ಇಲಾಖೆಗೆ ಪತ್ರ ಬರೆದಿರುವ ಲೋಕಾಯುಕ್ತ ಪೊಲೀಸರು ಪ್ರಕರಣ ಸಂಬಂಧ ಸೂಕ್ತ ಪರಿಶೀಲನೆ ನಡೆಸಿ 6 ವಾರಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ.
ಇದರಿಂದ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ ಅಕ್ರಮವಾಗಿ ಆರ್.ಟಿ.ಇ ಅಡಿ ಉಚಿತ ಸೀಟು ಪಡೆದಿರುವ ನಿರ್ಧಿಷ್ಟ ಪ್ರಕರಣಗಳ ಬಗ್ಗೆ ತಮ್ಮ ಬಲಿ ಇರುವ ಮಾಹಿತಿಯನ್ನು 4 ವಾರದೊಳಗೆ ಇಲಾಖೆಗೆ ಸಲ್ಲಿಸುವಮ್ತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಜಿಲ್ಲಾಡಳಿತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ವಾರ್ಷಿಕ 3.5 ಲಕ್ಷ ರೂ ಆದಾಯ ಮಿತಿಯೊಳಗಿನ ಕುಟುಂಬಗಳ ಮಕ್ಕಳು ಆರ್.ಟಿ.ಇ ಸೀಟು ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಆರ್.ಟಿ.ಇ ಉಚಿತ ಸೀಟು ಪಡೆಯುವ ಉದ್ದೇಶದಿಂದ ವಾರ್ಷಿಕ 3.5 ಲಕ್ಷ ರೂ ಗಳಿಗಿಂತ ಹೆಚ್ಚು ಆದಾಯ ಉಳ್ಳವರು ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿ ತಮ್ಮ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಸೀಟು ಪಡೆದಿದ್ದಾರೆ ಎಂದು ಖಾಸಗಿ ಶಾಲೆಗಳು ಆರೋಪಿಸಿವೆ.

ಬೆಂಗಳೂರು ನಗರದಲ್ಲಿಯೇ ಶೇ.40ಕ್ಕಿಂತ ಹೆಚ್ಚು ಪ್ರಕರಣಗಳು ಇವೆ ಎಂದು ಖಾಸಗಿ ಶಾಲೆಗಳ ಜಂಟಿ ಕ್ರಿಯಾ ಸಮಿತಿ ಹೇಳಿದೆ. ಈ ಹೇಳಿಕೆ ಆಧರಿಸಿ ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

 

Author : ಲೇಖಾ ಆರ್

More Articles From Education & Career

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited