Untitled Document
Sign Up | Login    
ಐಬಿಎಲ್ ಹರಾಜು: ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಭಾರತದ ಆಟಗಾರ್ತಿ ಸೈನಾ


ಲಂಡನ್ ಒಲಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಇಂಡಿಯನ್ ಬ್ಯಾಡ್ಮಿಟನ್ ಲೀಗ್ (ಐಬಿಎಲ್) ಟೂರ್ನಿಯ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸೈನಾ ನೆಹ್ವಾಲ್ ಗೆ 50 ಸಾವಿರ ಡಾಲರ್ ಮೂಲ ಧನ ನಿಗದಿಯಾಗಿತ್ತು. ಆದರೆ ನಿರಿಕ್ಷೆಯಂತೆ ಭಾರಿ ಬೇಡಿಕೆ ಪಡೆದ ಸೈನಾ ಟೂರ್ನಿಯ ಎರಡನೇ ಗರಿಷ್ಠ ಮೊತ್ತಕ್ಕೆ ಹರಾಜಾಗಿದ್ದಾರೆ.

ಐಬಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸೈನಾ 72 ಲಕ್ಷ ರೂ ಮೊತ್ತಕ್ಕೆ ಹೈದ್ರಾಬಾದ್ ಹಾಟ್ ಷಾಟ್ ಫ್ರಾಂಚೈಸ್ ಪಾಲಾಗಿದ್ದಾರೆ. ಲಂಡನ್ ಮೂಲದ ಬಾಬ್ ಹೆಟನ್ ಅವರು ಈ ಹರಾಜು ಪ್ರಕ್ರಿಯೆಯನ್ನು ನಡೆಸಿಕೊಟ್ಟಿದ್ದು, ಐಪಿಎಲ್ ಮಾದರಿಯಲ್ಲಿಯೇ ಬ್ಯಾಡ್ಮಿಂತನ್ ಲೀಗ್ ಆಗಸ್ಟ್ 14ರಿಂದ 31ರ ವರೆಗೆ ನಡೆಯಲಿದೆ.

ವಿಶ್ವದ ಅಗ್ರಮಾನ್ಯ ಆಟಗಾರ ಮಲೇಷ್ಯಾದ ಲೀ ಚೋಂಗ್ ವೇ ಭಾರತೀಯ ಬ್ಯಾದ್ಮಿಂಟನ್ ಲೀಗ್ ನ ದುಬಾರಿ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಇವರು ಅತ್ಯಧಿಕ 81 ಲಕ್ಷ ರೂ ಮೊತ್ತಕ್ಕೆ ಮುಂಬೈ ಫ್ರಾಂಚೈಸಿ ಪಾಲಾದರು.
ಕಾಮನ್ ವೆಲ್ತ್ ಕಂಚಿನ ಪದಕ ವಿಜೇತ ಪಾರುಪಳ್ಳಿ ಕಶ್ಯಪ್ ಬೆಂಗಳೂರಿನ ಬಾಂಗಾ ಬೀಟ್ಸ್ ತಂಡದ ಪಾಲಾಗಿದ್ದಾರೆ. 50 ಸಾವಿರ ಡಾಲರ್ ಮೂಲ ಧನ ಪಡೆದಿದ್ದ ಕಶ್ಯಪ್ 45 ಲಕ್ಷ ರೂ.ಗೆ ಬೆಂಗಳೂರು ಪಾಲಾಗಿದ್ದಾರೆ.

ಇನ್ನು ಜರ್ಮನಿಯ ಜೂಲಿಯನ್ ಶ್ವೆನೆಕ್ 53.46 ಲಕ್ಷರೂ ಪುಣೆ ಪಾಲಾದರೆ, ಭಾರತದ ಉದಯೋನ್ಮುಖ ಆಟಗಾರ್ತಿ ಪಿ.ವಿ ಸಿಂಧು 4,752,664 ರೂ ಮೊತ್ತಕ್ಕೆ ಲಖ್ನೊ ವಾರಿಯರ್ಸ್ ಪಾಲಾದರು. ಪ್ರಾಧಾನ್ಯ ಗಾರ್ಡೆ 27.32 ಲಕ್ಷ ರೂ ಗೆ ಹಿಅದ್ರಾಬಾದ್ ಪಾಲಾದರೆ, ಮನಿಷಾ.ಕೆ 26ಸಾವಿರ ಡಾಲರ್ ಗೆ ಲಖ್ನೊ ಪಾಲಾಗಿದ್ದಾರೆ. ವಿಯಟ್ನಾಂ ನ ಟಿನ್ ಮಿನ್ ನ್ಯುಗೆನ್ 44 ಸಾವಿರ ಡಾಲರ್ ಗೆ ಪುಣೆ ಪಾಲಾದರು.

ತವರು ಫ್ರಾಂಚೈಸಿಯಲ್ಲಿಯೇ ಸ್ಥಾನಪಡೆಯಬೇಕು ಎಂಬುದು ಸೈನಾ ನೆಹವಾಲ್ ಆಸೆಯಾಗಿತ್ತು. ಅದರಂತೆಯೇ ತವರಿನ ಹೈದ್ರಾಬಾದ್ ಹಾಟ್ ಷಾಟ್ ತಂಡದಲ್ಲೇ ಸ್ಥಾನ ಪಡೆದಿದ್ದಾರೆ.

ಈ ಬಗ್ಗೆ ಮಾತನಾಡಿದ ಸೈನಾ, ನನ್ನ ಆಸೆ ಈಡೇರಿದೆ. ನನ್ನ ಪಾಲಿಗೆ ಇದೊಂದು ಸಂತೋಷದ ಸುದ್ದಿಯಾಗಿದ್ದು, ಐಬಿಎಲ್ ನಲ್ಲಿ ಉತ್ತಮ ಪ್ರದರ್ಶನ ತೋರಿ ತಂಡದ ಗೆಲುವಿಗೆ ಕಾರಣವಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

Author : ಚಂದ್ರಲೇಖಾ ರಾಕೇಶ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited