Untitled Document
Sign Up | Login    
ಪಿಯು ವಿದ್ಯಾರ್ಥಿಗಳಿಗಾಗಿ ಐ-ಟಾಪರ್ಸ್ ಇಂಟರಾಕ್ಟಿವ್ ಬಿಡುಗಡೆ


ಆಪ್ ಥಾಟ್ಸ್ ಸಾಫ್ಟ್ ವೇರ್ ಕಂಪನಿ ಪಿಯು ವಿದ್ಯಾರ್ಥಿಗಳಿಗಾಗಿ ವಿನೂತನವಾದ ’ಐ-ಟಾಪರ್ಸ್’ ಇಂಟರಾಕ್ಟಿವ್ ಟ್ಯಾಬ್ಲೆಟ್ ನ್ನು ಹೊರತಂದಿದೆ.

ಇದರಲ್ಲಿ ಇಂಟರ್ ಮೀಡಿಯೇಟ್ ವಿದ್ಯಾರ್ಥಿಗಳಿಗೆ(ಎಂಪಿಸಿ ಹಾಗೂಬಿಐಸಿಸಿ) ಕರ್ನಾಟಕದ ಪಠ್ಯಕ್ರಮದನ್ವಯ ಗಣಿತ, ಜೀವಶಾಸ್ತ್ರ, ರಾಸಾಯನಿಕಶಾಸ್ತ್ರದಲ್ಲಿ ಸಹಾಯವಾಗುವಂತೆ ಸಂಯೋಜಿಸಲಾಗಿದೆ.

ಆಪ್ ಥಾಟ್ಸ್ ಶೈಕ್ಷಣಿಕ ವ್ಯವಸ್ಥೆಗೆ ತಂತ್ರಜ್ನಾನದ ಚೌಕಟ್ಟನ್ನು ಒದಗಿಸುತ್ತದೆ. ಗ್ರಾಮೀಣ ಹಾಗೂ ನಗರದ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಪಡೆಯಲು ಸಹಾಯವಾಗುತ್ತದೆ. ಅಲ್ಲದೇ ಸಂಕೀರ್ಣ ವಿಷಯಗಳನ್ನು ಸರಳಗೊಳಿಸುತ್ತದೆ.

ಐ-ಟಾಪರ್ಸ್ ಹಲವಾರು ಇನ್ ಬಿಲ್ಫ್ ಅಪ್ಲಿಕೇಶನ್ ಸಹಿತ ಬರುತ್ತಿದೆ. ಸ್ವ-ಪರೀಕ್ಷೆಯ ಮೂಲಕ ಕಲಿಕೆಯ ಅನುಭವ ನೀಡುತ್ತದೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಪಠ್ಯಕ್ರಮಗಳು ಇದರಲ್ಲಿದೆ. ವಿದ್ಯಾರ್ಥಿಗಳಿಗೆ ಜೆಇಇ, ಇಎ ಎಂಸಿಇಟಿ ಮತ್ತು ಎನ್ ಇಇಟಿ ಪರೀಕ್ಷೆಗೆ ಸಿದ್ಧತೆ ನಡೆಸಲು ಸಹಕರಿಸುತ್ತದೆ.
ಐ-ಟಾಪರ್ಸ್ ವೈಶಿಷ್ಟ್ಯ:

ವಿಡಿಯೋ, ಐ-ಟಾಪರ್ ಸಿಲಬಸ್ ಒದಗಿಸುವ ಡ್ಯಾಶ್ ಬೋರ್ಡ್ ಅಪ್ಲಿಕೇಷನ್, ಮಾದರಿ ಪರೀಕ್ಷೆ, ಅಸೈನ್ ಮೆಂಟ್ಸ್, ಟಾಸ್ಕ್ ಸೇರಿದಂತೆ ಹಲವು ಅಪ್ಲಿಕೇಷನ್ ಹೊಂದಿರುವ ಟ್ಯಾಬ್ ನಲ್ಲಿ 24 ಜಿಬಿ ಇಂಟರ್ನಲ್ ಮೆಮೊರಿ, ಆಂಡ್ರ್ಯಾಯ್ಡ್ 4.0.3 ಐಸ್ ಕ್ರೀಂ ಸ್ಯಾಂಡ್ ವಿಚ್ ಸಾಫ್ಟ್ ವೇರ್, ಕ್ಯಾಮರಾ, ಸಿಮ್ ಸೌಲಭ್ಯಗಳಿವೆ.

ಇಂಟರ್ ನೆಟ್ ಸಂಪರ್ಕವಿಲ್ಲದಿದ್ದರೂ ಬಹುತೇಕ ವಿಷಯಗಳನ್ನು ವಿದ್ಯಾರ್ಥಿಗಳು ಕಲಿಯಬಹುದು. ಯೂಟ್ಯೂಬ್ ವಿಡಿಯೋ ಸೌಲಭ್ಯ ಒದಗಿಸಲಾಗುವುದು.

 

Author : ಚಂದ್ರಲೇಖಾ ರಾಕೇಶ್

More Articles From Education & Career

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited