Untitled Document
Sign Up | Login    
'ನಮ್ ಟೀಂ' ಜೊತೆ ನಮ್ ಮಾತು - ರವಿಶಂಕರ್ 'ವಿನ್ಯಾಸ' ಲೋಕದ ಅನಾವರಣ

'ನಮ್ ಟೀಂ' ರವಿಶಂಕರ್

ಕನಸುಗಳ ಅಗಣಿತ ವಿನ್ಯಾಸದಲ್ಲೇ ಕಲಾವಿದರ ಬದುಕಿನ ಯಶಸ್ಸನ್ನು ಕಾಣುತ್ತಾನೆ. ಒಂದು ಸಿನಿಮಾ ಯಶಸ್ಸಿನ ಹಿಂದೆ ಒಬ್ಬ ಯಶಸ್ವೀ ವಿನ್ಯಾಸಕನ ಪಾತ್ರ ಮಹತ್ತರವಾದದ್ದು, ಪ್ರತಿ ಬಾರಿ ವಿನ್ಯಾಸ ಮಾಡುವಾಗಲೂ ವಿನ್ಯಾಸಕಾರನಲ್ಲಿ ಒಬ್ಬ ಅದ್ಭುತ ಕಲಾವಿದ ಜನ್ಮ ತಾಳುತ್ತಾನೆ. ವಿಭಿನ್ನ ಯೋಚನೆಗಳು ಮೈದಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ವಿಭಿನ್ನತೆಯಿಂದ ಕೂಡಿರುವ ಕನ್ನಡ ಚಿತ್ರಗಳ ವಿನ್ಯಾಸವನ್ನು ನೋಡಿದರೆ ಅಡಿಯಲ್ಲಿ ’ನಮ್ ಟೀಂ’ ಎನ್ನುವ ಹೆಸರಿರುತ್ತದೆ.

"ನಮ್ ಟೀಂ" ಅಂದರೆ ಒಂದು ತಂಡ ಎಂದು ಕೊಂಡಿರ..? ಕಂಡಿತಾ ಅಲ್ಲ. ಅದೊಂದು ಒನ್ ಮ್ಯಾನ್ ಆರ್ಮಿ. ದಟೀಸ್ ರವಿ ಶಂಕರ್.
ಬನ್ನಿ ಅವರ ಬಗ್ಗೆ ಒಂದು ಕಿರು ಪರಿಚಯ ಮಾಡಿಕೊಂಡು ಬರೋಣ. ಅದು ಅವರ ಮಾತುಗಳಲ್ಲೆ.

ಅದೇಕೆ ನಮ್ ಟೀಂ ಎಂದು ಹೆಸರು..? ಎಂದು ರವಿ ಅವರನ್ನು ಕೇಳಿದ್ದಕ್ಕೆ
ಇದು ಹಲವಾರು ಭಾವನೆಗಳ, ಐಡಿಯಾಗಳ ಒಟ್ಟು ಅಭಿವ್ಯಕ್ತಿಯಿಂದಾಗಿ ಒಂದು ಪೋಸ್ಟರ್ ಆಗುತ್ತದೆ. ಅದಕ್ಕೆ ಒಬ್ಬರೇ ಕಾರಣರಲ್ಲ. ನೋಡಿ ಆಸ್ವಾಧಿಸುವ ಜನರು ಇದರಲ್ಲಿ ಪಾಲುದಾರು. ಅದಕ್ಕಾಗಿ ನಮ್ ಟೀಂ ಎಂದು ಹೆಸರಿಟ್ಟು ಪ್ರಾಂಭಿಸಿದೆ ಎನ್ನುತ್ತಾರೆ.


ರವಿ ನಿಮ್ಮ ಹೆನ್ನೆಲೆ...?
ನನ್ನೂರು ಹಾಸನ, ಚಿಕ್ಕವನಿದ್ದಾಗಿನಿದಂಲೂ ಚಿತ್ರ ವಿನ್ಯಾಸದಲ್ಲಿ ಆಸಕ್ತಿ. ಆದರೆ ಓದಿದ್ದು ಡಿಪ್ಲಮೋ ಮ್ಯಕಾನಿಕಲ್ ಇಂಜಿನಿಯರಿಂಗ್. ಓದಿನ ನಂತರ ಎಲ್ಲರಂತೆ ನನಗೂ ಬೆಂಗಳೂರು ಕೆಲಸಕ್ಕೆ ಕೈ ಬೀಸಿ ಕರೆಯಿತು. ವಿಧಿಯ ಹೊಡೆತಕ್ಕೆ ಸಿಕ್ಕಿ ಬೆಂಗಳೂರಿಗೆ ಬಂದೆ. ಅದೇಕೋ ಬೆಂಗಳೂರು ನನ್ನನ್ನು ಆ ಕ್ಷಣಕ್ಕೆ ಸ್ವಿಕರಿಸಲಿಲ್ಲ. ಮತ್ತೆ ಹಾಸನಕ್ಕೆ ಹೋದೆ. ಅಲ್ಲಿ ಮನೆಯಲ್ಲಿ ಕೂತು ಚಿತ್ರಕಲೆ ಮತ್ತು ಸಿನಿಮಾ ಫಾಂಟ್ ಬರೆಯುವುದನ್ನು ಅಭ್ಯಾಸ ಮಾಡಿದೆ. ಮನೆಯ ಒತ್ತಡಕ್ಕೆ ಮತ್ತೆ ಬೆಂಗಳೂರಿನಲ್ಲಿ ಕೆಲಸಕ್ಕೆ ಗಿಟ್ಟಿಸಿಕೊಂಡೆ. ಒಂದೆರಡು ಕಂಪನಿ ನಂತರ ಸೆಟ್ರಾನ್ ಕಂಪನಿಯಲ್ಲಿ ನನಗೆ ಸೂಕ್ತವಾದ ಕೆಲಸ ಸಿಕ್ಕಿತು. ಅದನ್ನು ಮಾಡಿಕೊಂಡು ಮನೆ ಬಾಡಿಗೆ, ಸ್ವಂತ ಖರ್ಚನ್ನು ಮ್ಯಾನೇಜ್ ಮಾಡುತ್ತಿದೆ. ಸತತ ಮೂರು ವರ್ಷ ಅಲ್ಲಿ ದುಡಿದ್ದಿದ್ದರಲ್ಲಿ ಒಂದು ಪೈಸಾ ಉಳಿಸಲಾಗಲಿಲ್ಲ ಹಾಗು ಸಾಧನೆಯು ಆಗಲಿಲ್ಲ. ಆಗೆಲ್ಲ ಅನ್ನಿಸುತ್ತಿದ್ದದ್ದು ರವಿ ನೀನು ಮಾಡಬೇಕಾದ್ದು ಇದಲ್ಲ ಎಂದು. ಅದೇನೋ ಅನ್ನುತ್ತಾರಲ್ಲಾ ಹುಟ್ಟು ಗುಣ ಸುಟ್ಟರೂ ಹೋಗಲ್ಲ ಎನ್ನುವಂತೆ ಮತ್ತೆ ಮತ್ತೆ ಕಾಡಿದ್ದು ಸಿನಿಮಾ ಪೋಸ್ಟರ್ ಗಳು.

ಮುಂದೆ ಸಿನಿಮಾ ಫೋಸ್ಟರ್ ಕೆಲಸ ಪ್ರಾಂಭಿಸಿದಿರಾ..?
ಸಿನಿಮಾ ಕ್ಷೇತ್ರದಲ್ಲಿ ಅಷ್ಟು ಬೇಗ ನೆಲೆ ಸಿಕ್ಕರೆ ಬೆಲೆ ಇರೋಲ್ಲಾ.. ಮೂರನೇ ವರ್ಷದಿಂದ ಕೆಲಸಕ್ಕೆ ಹೋಗಿಕೊಂಡು, ರಾತ್ರಿ ಎಲ್ಲಾ ಸಿನಿಮಾ ಪೋಸ್ಟರ್ ಗಳಿಗೆ ಫಾಂಟ್ ಬರೆಯುತ್ತಿದೆ. ಸ್ವಂತ ಕಂಪ್ಯೂಟರ್ ಇದ್ದಿದ್ದರಿಂದ ಕೆಲವಾರು ಡಿಸೈನ್ ಗಳನ್ನು ಮಾಡುತ್ತಿದೆ. ಅವೆಲ್ಲವೂ ಬೇಸಿಕ್ ಕೂಡಾ ಆಗಿರಲಿಲ್ಲ. ಒಂದೊಂದು ದಿನ ರಜಾ ಹಾಕಿ ಮಾಡಿದ ಪೋಸ್ಟರ್ ಮತ್ತು ಫಾಂಟ್ ಗಳನ್ನು ತೆಗೆದುಕೊಂಡು ಹೋಗಿ ಪೊಡ್ಯೂಸರ್ ಮನೆ ಮುಂದು ದಿನಗಟ್ಟಲೆ ಕಾದು ತೋರಿಸುತ್ತಿದ್ದೆ. ಕೆಲವರು ನೋಡುತ್ತಿದ್ದರು ಮತ್ತೆ ಕೆಲವರು ಪೊಸ್ಟರನ್ನು ತೆಗೆಯಲು ಬಿಡದೆ ನೋಡುತ್ತೇವೆ ಎಂದು ಹೇಳಿ ಕಳುಹಿಸುತ್ತಿದ್ದರು. ಹಾಗೆ ನೋಡಿದ ಒಬ್ಬರು ನೋಡಿ ರವಿ ನೀವು ಹೀಗೆ ಮಾಡಿದ್ದೆಲ್ಲಾ ಡಿಸೈನ್ ಆಗುವುದಿಲ್ಲ ಅದಕ್ಕೆ ಬೇಸಿಕ್ ಶಿಕ್ಷಣ ಬೇಕು ಎಂದರು.

ಆಗ ದಾರಿಯಾಗಿದ್ದು ಬಸವೇಶ್ವರ ನಗರದ ಅರೇನಾ ಮಲ್ಟಿಮೀಡಿಯಾ. ಅಲ್ಲಿಂದ ಜೀವನದ ಮನ್ವಂತರ ಪ್ರಾರಂಭವಾಯಿತು. ಎಲ್ಲವನ್ನು ಹೊಸದಾಗಿ ಕಲಿಯುತ್ತಾ ಹೋದೆ. ಜೊತೆಯಲ್ಲಿ ಹೊಟ್ಟೆಪಾಡಿನ ಕೆಲಸವನ್ನು ಮಾಡಿಕೊಂಡು ಬ್ಯಾಲೆನ್ಸ್ ಮಾಡಿಕೊಂಡು ಮುಂದುವರೆದೆ. ದೇಶ ವಿದೇಶದ ವಿನ್ಯಾಸಗಳ ಬಗ್ಗೆ ಅಧ್ಯನಮಾಡಿದೆ. ಒಂದು ಪೋಸ್ಟರ್ ಗೆ ಏನೇನು ಅವಶ್ಯ ಎಂಬುದನ್ನು ಕಲಿಯುತ್ತಾ ಹೋದೆ. ಇಂದಿಗೂ ಕಲಿಯುತಿದ್ದೇನೆ.

ನಮ್ ಟೀಂ ಲೋಗೊ
ನೀವು ಮೊದಲು ಮಣಿಯವರ ಬಳಿ ಕೆಲಸಮಾಡುತ್ತಿದ್ದಿರಿ ಅಲ್ಲವೇ..?

ಕಂಡಿತಾ ಹೌದು. ಅವರೇ ನನ್ನ ಸಿನಿಮಾ ಪೋಸ್ಟರ್ ಗುರುಗಳು. ಡಿಪ್ಲಮೋ ಇನ್ ಡಿಸೈನಿಂಗ್ ಮುಗಿಸಿದ ಮೇಲೆ ಪೂರ್ಣಾವಧಿ ಸಿನಿಮಾ ಪೋಸ್ಟರ್ ಮಾಡುವ ನಿರ್ಧಾರ ಗಟ್ಟಿಯಾಯಿತು. ಸುಮಾರು 15 ಸಾವಿರದ ಕೆಲಸವನ್ನು ಬಿಟ್ಟು ಸ್ವಲ್ಪ ಸಂಭಳದ ಸಹಾಯಕ ಸಿನಿಮಾ ಪೋಸ್ಟರ್ ಹುದ್ದೆಗೆ ಹೋಗಲು ಮನಸ್ಸು ಹಿಂದೇಟಾಕಿತು. ಆದರೆ ಸಾಧನೆಯ ಉದ್ದೇಶ ನನ್ನನ್ನು ಹಿಂದೆ ಸರಿಯದಂತೆ ದೃಢವಾಗಿಸಿತು. ಆದರೆ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವಂತೆ ಸಾಧನೆಯ ಮೊದಲ ಹಂತಕ್ಕೆ ಪ್ರಸಿದ್ದಿ ಪಡೆದಿದ್ದ ಮಣಿ ಸರ್ ಅವರನ್ನು ಅರಸಿ ಹೋದೆ. ಅವರು ಯುವ ಮನಸ್ಸನ್ನು ಸೆಳೆದ ಡಿಸೈನರ್ ಆಗಿದ್ದರು. ಅಲ್ಲಿ ಹೋಗಿ ಕೆಲಸಮಾಡಲು ಪ್ರಾರಂಭಿಸಿದೆ. ಮೊದಲ ಪಾಠ ಶಾಲೆ ಎಂದೇ ಹೇಳಬೇಕು. ನನ್ನ ಕೆಲಸವನ್ನು ನೋಡದ ಅವರು ಕೆಲವಾರು ಸಿನಿಮಾ ಫಾಂಟ್ ಮಾಡುವಂತೆ ಹೇಳಿದರು. ಅದು ನನಗೆ ಇಷ್ಟವಾಗಿದ್ದರಿಂದ ಅಚ್ಚುಕಟ್ಟಾಗಿ ಮಾಡುತ್ತಾ ಹೋದೆ. ಬರುತ್ತಿದ್ದ 4 ಸಾವಿರ ಸಂಭಳದಲ್ಲಿ ಎಲ್ಲವನ್ನು ತೂಗಿಸಿಕೊಂಡು ಹೋಗುವುದು ಅಭ್ಯಾಸವಾಯಿತು. ನನ್ನ ಕೆಲಸ ಮಣಿ ಸರ್ ಗೆ ಮೆಚ್ಚಿಗೆಯಾಯಿತು.

ಮಣಿಯವರ ಒಟ್ಟಿಗೆ ನಿಮ್ಮ ಅನುಭವ..?
ಹ್ಯಾಟ್ಸಾಫ್.. ಮಣಿ ಸರ್.. ಕನ್ನಡ ಸಿನಿಮಾಗಳು ಏನನ್ನು ಕೇಳುತ್ತದೆ..? ಅದನ್ನು ಪತ್ರಿಕೆಗಳಿಗೆ ಹೇಗೆ ಕಳಿಸಬೇಕು..? ಬಿಸಿನೆಸ್ ಸ್ಟ್ಯಾಟಜಿ, ಯಾರೊಟ್ಟಿಗೆ ಹೇಗಿರಬೇಕು..? ಹೇಗೆ ತುಂಬಾ ಕೆಲಸವನ್ನು ಮ್ಯಾನೇಜ್ ಮಾಡಬೇಕು..? ಎಲ್ಲವನ್ನು ಕಲಿತಿದ್ದು ಅಲ್ಲಿಂದಲೆ. ಅದೆಲ್ಲವೂ ನಾನಾಗೇ ಸ್ವಂತ ಡಿಸೈನ್ ಕೆಲಸ ಪ್ರಾರಂಭಿಸಿದಾಗ ಅವೆಲ್ಲ ಸ್ವಂತ ಅನುಭವಕ್ಕೆ ಬಂತು.ಅವರು ನನಗೆ ತುಂಬಾ ಫ್ರೀಡಂ ಕೊಟ್ಟು ಕೆಲಸ ಮಾಡಿಸಿದ್ದಕ್ಕೆ ಡಿಸೈನರ್ ಆಗುವ ಕನಸು ಬೇಗ ಸಾಕಾರವಾಯಿತು.
ವಿನ್ಯಾಸಗಾರ ಆಗಬೇಕು ಎಂಬ ಕನಸು ಯಾವಗಲಿನಿಂದ ಇತ್ತು? ಸಿನಿಮಾಗೆ ವಿನ್ಯಾಸ ಮಾಡಬೇಕು ಅಂತ ಅನ್ನಿಸಿದ್ದು ಏಕೆ?:

7-8ನೇ ತರಗತಿಯಲ್ಲಿ ಓದುತ್ತಿದ್ದಾಗ ಉಪೇಂದ್ರ ಅವರ A ಸಿನಿಮಾ ವಿನ್ಯಾಸ ನೋಡಿದಾಗಿನಿಂದಲೂ ಸಿನಿಮಾಗೇ ವಿನ್ಯಾಸ ಮಾಡಬೇಕು ಎಂಬ ನಿರ್ಧಾರ ಅಚಲವಾಗಿ ಉಳಿಯಿತು. A ಸಿನಿಮಾ ವಿನ್ಯಾಸಕ್ಕೂ ಕಥೆಗೂ ಬಹಳ ವ್ಯತ್ಯಾಸವಿತ್ತು ಕುತೂಹಲದಿಂದ ಸಿನಿಮಾ ನೋಡಿ ಬಂದ ನಂತರ ಮುಕ್ಕಾಲು ಗಂಟೆ ಸಿನಿಮಾ ಪೋಸ್ಟರನ್ನೇ ನೋಡುತ್ತಾ ನಿಂತಿದ್ದೆ. A ಸಿನಿಮಾದ ವಿಭಿನ್ನ ವಿನ್ಯಾಸ ನನ್ನನ್ನು ಆಕರ್ಷಿಸಿತ್ತು. A ಚಿತ್ರದ ವಿನ್ಯಾಸವೇ ನನಗೆ ಸ್ಪೂರ್ತಿ.

ವಿನ್ಯಾಸಗಾರನಾಗಿ ನಿಮ್ಮ ಮೊಟ್ಟಮೊದಲನೇ ಸಿನಿಮಾ?
ಮೊಟ್ಟ ಮೊದಲನೇ ಸಿನಿಮಾ "ಬುದ್ದಿವಂತ" ಆದರೆ ಇದು ಎಷ್ಟೋ ಮಂದಿಗೆ ತಿಳಿದಿಲ್ಲ. ಕೆಲಸದಲ್ಲಿರಬೇಕಾದರೆ "ಬುದ್ಧಿವಂತ" ಪೋಸ್ಟರ್ ಗೆ ವಿನ್ಯಾಸ ಮಾಡಿದ್ದೆ. 1 ತಿಂಗಳು ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಿ ಬೆಳಗಿನ ಹೊತ್ತು ಡಿಸೈನ್ ಮಾಡುತ್ತಿದ್ದೆ. ದಿನಕ್ಕೆ 2 ಗಂಟೆ ಮಾತ್ರ ನಿದ್ದೆ. "ಬುದ್ಧಿವಂತ" ಗೆ ನಮ್ ಟೀಂನ ಒಂದೇ ಒಂದು ಜಾಹೀರಾತು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅದೇ ನಮ್ ಟೀಂ ಮೊಟ್ಟಮೊದಲ ವಿನ್ಯಾಸ.

ನಮ್ ಟೀಂ ವಿನ್ಯಾಸವನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡುಹೋದ ಸಿನಿಮಾ ಯಾವುದು?:
ಉಪೇಂದ್ರ ಅವರ "ಸೂಪರ್" ಸಿನಿಮಾ ಅದರ ಬಗ್ಗೆ ನಾನು ಹೇಳಲೇ ಬೇಕು. ನನಗೆ ಸೂಪರ್ ಸಿನಿಮಾ ವಿನ್ಯಾಸ ಮಾಡುವುದಕ್ಕೆ ಸಿಕ್ಕಿದ್ದೇ ಅಚಾನಕ್ಕಾಗಿ. ಉಪೇಂದರ ಅವರ ಸಿನಿಮಾ ಅನೌನ್ಸ್ ಆಗಿತ್ತು. ಆಗ ಅವರನ್ನು ಸಂಪರ್ಕಿಸಲು ಅವರ ಮನೆಗೆ ಹೋಗಿ ನನ್ನ ಕೆಲವಾರು ಸ್ಯಾಂಪ್ಸ್ ಕೊಟ್ಟು ಊರಿಗೆ ಹೊರಟ್ಟಿದೆ. ಆಗಲೇ "ನೀವು ಸೂಪರ್ ಫಿಲಂ ಗೆ ವಿನ್ಯಾಸ ಮಾಡಬೇಕು ಉಪೇಂದ್ರ ಅವರು ನಿಮ್ಮನ್ನ ಕರೆಯುತ್ತಿದ್ದಾರೆ" ಎಂದು ಕರೆ ಬಂದಿತ್ತು. ನನಗೆ ಪರಮಾಶ್ಚರ್ಯ! ಸಂಜೆಯಿಂದಲೇ ವಿನ್ಯಾಸದ ಕೆಲಸ ಆರಂಭಿಸಿದೆ. ಉಪೇಂದ್ರ ಅವರು 10 ವರ್ಷಗಳ ನಂತರ ನಿರ್ದೇಶಿಸುತ್ತಿದ್ದರಿಂದ ಸಾಕಷ್ಟು ನಿರೀಕ್ಷೆಗಳಿತ್ತು. ಚಿತ್ರಕ್ಕೆ ನಾನೇ ಚಿತ್ರ ವಿನ್ಯಾಸಕಾರನಾಗಿದ್ದರಿಂದ ಮೊದಲನೇ ಚಿತ್ರದಲ್ಲೇ ಬೆಳಕಿಗೆ ಬಂದೆ. ನಂತರ ಹೆಸರು ತಂದುಕೊಟ್ಟದ್ದು ಶರಣ್ ನಾಯಕರಾಗಿದ್ದ Rambo ಚಿತ್ರ

ನಿಮ್ಮ ಇತರ ಚಟುವಟಿಕೆ..?:
ಪುಸ್ತಕ,ಕಾದಂಬರಿಗಳನ್ನು ಹೆಚ್ಚು ಓದುತ್ತೇನೆ. ಎಸ್.ಎಲ್.ಭೈರಪ್ಪ, ಪೂರ್ಣ ಚಂದ್ರ ತೇಜಸ್ವಿ ನೆಚ್ಚಿನ ಬರಹಗಾರರು. ಕ್ರಿಕೆಟ್ ಆಡುವುದು. ಸಧ್ಯದ ಬಿಜಿ ಶೆಡ್ಯೂಲ್ ನಲ್ಲಿ ಓದಲು ಮತ್ತು ಕ್ರಿಕೆಟ್ ಗೆ ಸಮಯ ಸಿಗುತ್ತಿಲ್ಲ.

ಪರ ಭಾಷಾ ಚಿತ್ರ ರಂಗದಲ್ಲಿ ಡಿಸೈನ್ ಗಳನ್ನು ಕಂಪನಿಗಳು ಹ್ಯಾಂಡಲ್ ಮಾಡುತ್ತವೆ. ಆದರೆ ಕನ್ನಡ ಏಕೆ ವ್ಯಕ್ತಿಗತ?

ಕಾರ್ಪೊರೇಟ್ ಡಿಸೈನಿಂಗ್ ಬಗ್ಗೆ ನಮ್ ಟೀಂ ಅಭಿಪ್ರಾಯ ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ

 

Author : ನಟರಾಜ್ ಎಸ್. ಭಟ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited