Untitled Document
Sign Up | Login    
ಸೋಲಿಲ್ಲದ ಸರದಾರ:8ನೇ ಬಾರಿ ಗ್ರ್ಯಾನ್ ಸ್ಲಾಮ್ ಗೆದ್ದ ರಫೆಲ್ ನಡಾಲ್


’ಕಿಂಗ್ ಆಫ್ ಕ್ಲೇ’ ಸ್ಪೇನ್ ನ ರಫೆಲ್ ನಡಾಲ್ 8ನೇ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ದಾಖಲೆ ಮೆರೆದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಫಿಲಿಪ್ ಚಾಟ್ರಿಯರ್ ಕೋರ್ಟ್ ನಲ್ಲಿ ಜೂನ್ 9ರಂದು ನಡೆದ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್ ನಲ್ಲಿ ಡೆವಿಡ್ ಫೆರರ್ ಅವರನ್ನು ಮಣಿಸುವ ಮೂಲಕ ರಫೆಲ್ ನಡಾಲ್ ಸತತ ನಾಲ್ಕನೇ ವರ್ಷ ಚಾಂಪಿಯನ್ ಆಗಿದ್ದಾರೆ.

6-3,6-2, 6-3ರನೇರ ನೇರ ಸೆಟ್ ಗಳಿಂದ ತಮ್ಮ ದೇಶದವರೇ ಆದ ಡೆವಿಡ್ ಫೆರರ್ ಅವರನ್ನು ಮಣಿಸಿ, ಒಟ್ಟಾರೆ 12 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಅಲ್ಲದೇ 11 ಕೋಟಿ ರೂ ಬಹುಮಾನ ಪಡೆದಿದ್ದಾರೆ. ಈ ಮೂಲಕ ಅತಿ ಹೆಚ್ಚು ಗ್ರ್ಯಾನ್ ಸ್ಲಾಮ್ ಗೆದ್ದ ರಾಯ್ ಎಮರ್ಸನ್ ಅವರೊಂದಿಗೆ ನಡಾಲ್ 3ನೇ ಸ್ಥಾನ ಹಂಚಿಕೊಂಡಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ನಡಾಲ್ ನನ್ನ ಗೆಲುವಿಗೆ ಪ್ರಾರ್ಥಿಸಿ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ಈ ಸಾಧನೆ ಮತ್ತಷ್ಟು ಹುಮ್ಮಸ್ಸು ತುಂಬಿದೆ ಎಂದಿದ್ದಾರೆ. ಈ ಗೆಲುವಿನ ಮೂಲಕ ನಡಾಲ್ 60 ಪಂದ್ಯಗಳಲ್ಲಿ 59 ಪಂದ್ಯಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ.

ಎಡಗೈ ಆಟಗಾರ ರಫೆಲ್ ನಡಾಲ್ ಪ್ರಾಬಲ್ಯವನ್ನು ಮುರಿಯಲು ದಾಖಲೆ 17 ಗ್ರ್ಯಾನ್ ಸ್ಲಾಮ್ ಗಳ ವಿಜೇತ ಸ್ವಿಜರ್ ಲೆಂಡ್ ನ ರೋಜರ್ ಫೆಡರರ್, ವಿಶ್ವದ ಅಗ್ರಮಾನ್ಯ ಆಟಗಾರ ನೊವಾಕ್ ಜೊಕೊವಿಕ್ ಸೇರಿದಂತೆ ಯಾರಿಂದಲೂ ಸಾಧ್ಯವಾಗಿಲ್ಲ. ಫ್ರೆಂಚ್ ಓಪನ್ ಗೆ ಕಾಲಿಟ್ಟಾಗಿನಿಂದಲೂ ನದಾಲ್ ಪ್ರಭುತ್ವ ಸಾಧಿಸುತ್ತಾ ಬಂದಿದ್ದು, 2009ರಲ್ಲಿ ಸ್ವೀಡನ್ ನ ರಾಬಿನ್ ಸೋಡರ್ಲಿಂಗ್ ವಿರುದ್ಧ ನಾಲ್ಕನೆ ಸುತ್ತಿನ ಪಂದ್ಯದಲ್ಲಿ ಸೋಲುಂದಿದ್ದನ್ನು ಹೊರತು ಪಡಿಸಿದರೆ ಮತ್ತೆಂದೂ ಸೋಲನ್ನು ಕಂಡಿಲ್ಲ.

 

Author : ಲೇಖಾ ರಾಕೇಶ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited