Untitled Document
Sign Up | Login    
70 ಬಿ.ಇಡಿ ಕಾಲೇಜುಗಳ ಮಾನ್ಯತೆ ರದ್ದು: ಕೌನ್ಸಿಲ್ ನಿರ್ಧಾರಕ್ಕೆ ಸಿಂಡಿಕೆಟ್ ಸಭೆ ಒಪ್ಪಿಗೆ


ಮೂಲ ಸೌಕರ್ಯ ಸೇರಿದಂತೆ ವಿವಿಧ ಸೌಲಭ್ಯಗಳ ಕೊರತೆಯಿರುವ 70 ಬಿ.ಇಡಿ ಕಾಲೇಜುಗಳ ಮಾನ್ಯತೆಯನ್ನು ಹಿಂಪಡೆಯಲು ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಕುಲಪತಿ ತಿಮ್ಮೇಗೌಡ ಅಧ್ಯಕ್ಷತೆಯಲ್ಲಿ ನಡೆದ ಅಕಾಡೆಮಿಕ್ ಕೌನ್ಸಿಲ್ ಸಭೆಯ ನಿರ್ಣಯಕ್ಕೆ ಸಿಂಡಿಕೆಟ್ ಸಭೆಯಲ್ಲಿ ಮೇ 17ರಂದು ಒಪ್ಪಿಗೆ ದೊರೆತಿದೆ. ಈ ಮೂಲಕ ಹಲವು ತಿಂಗಳಿಂದ ಪ್ರಾರಂಭವಾಗಿದ್ದ ಬಿ.ಇಡಿ ಕಾಲೆಜುಗಳ ಸಂಯೋಜನೆ ನವೀಕರಣ ವಿವಾದಕ್ಕೆ ತೆರೆ ಬಿದ್ದಂತಾಗಿದೆ.

ಕಟ್ಟಡ, ಮೂಲ ಸೌಕರ್ಯ, ಉಪನ್ಯಾಸಕರ ಕೊರತೆ ಹಾಗೂ ಹಲವು ಅಕ್ರಮಗಳಲ್ಲಿ ತೊಡಗಿರುವ ಬಿ.ಇಡಿ ಕಾಲೇಜುಗಳ ನಿಜ ಬಣ್ಣವನ್ನು ವಿವಿ ಕಾರ್ಯಪಡೆ ತನ್ನ ವರದಿಯಲ್ಲಿ ಬಯಲುಗೊಳಿಸಿತ್ತು. ಈ ಕಾರ್ಯಪಡೆ ಮೂಲ ಸೌಕರ್ಯವನ್ನು ಆಧರಿಸಿ ಕಾಲೇಜುಗಳನ್ನು 1-5 ದರ್ಜೆಗಳನ್ನಾಗಿ ವಿಂಗಡಿಸಿತ್ತು. ಕಾರ್ಯಪಡೆ ವರದಿ ಆಧರಿಸಿ ಒಂದನೇ ದರ್ಜೆಯ 12 ಹಾಗೂ 2ನೇ ದರ್ಜೆಯ 13 ಕಾಲೇಜುಗಳ ಕಾರ್ಯನಿರ್ವಹಣೆಗೆ ಅನುಮತಿ ನೀಡಲಾಗಿತ್ತು.

3-5ನೇ ದರ್ಜೆ ಕಾಲೇಜುಗಳು ಸಮರ್ಪಕ ಮೂಲ ಸೌಕರ್ಯವನ್ನು ಹೊಂದಿಲ್ಲ ಎಂಬ ಕಾರಣಕ್ಕೆ ಮಾನ್ಯತೆ ಹಿಂಪಡೆಯಲು ಕಾರ್ಯಪಡೆ ಶಿಫಾರಸು ಮಾಡಿತ್ತು. ಆದರೆ ಸಿಂಡಿಕೇಟ್ ಸಭೆಯಲ್ಲಿ ಅಂಗೀಕರಿಸದ ಹಿನ್ನಲೆಯಲ್ಲಿ ಮರುಮೌಲ್ಯಮಾಪನಕ್ಕೆ ಹೊರ ವಿಶ್ವವಿದ್ಯಾಲಯದ ತಜ್ನರ ಸಮಿತಿಯನ್ನು ರಚಿಸಲಾಗಿತ್ತು. ಈ ತಜ್ನರ ವರದಿ ವಿವಿ ಕೈಸೇರಿದ ಹಿನ್ನಲೆಯಲ್ಲಿ ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ಸುದೀರ್ಘ ಚರ್ಚೆ ಬಳಿಕ ಈ ಕಾಲೇಜುಗಳ ಮಾನ್ಯತೆ ವಾಪಸ್ ಪಡೆಯಲು ತೀರ್ಮಾನಿಸಲಾಗಿತ್ತು.

ಪ್ರಸಕ್ತ ಸಾಲಿನಿಂದಲೇ 70 ಬಿ.ಇಡಿ ಕಾಲೇಜುಗಳ ಸಂಯೋಜನೆ ಬಂದ್ ಮಾಡಲು ಮೇ 17ರಂದು ನಡೆದ ವಿವಿ ಸಿಂಡಿಕೆಟ್ ಸಭೆಯಲ್ಲಿ ಅಂತಿಮವಾಗಿ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ವಿವಾದಿತ ಕಾಲೇಜುಗಳ ಬಗ್ಗೆ ಕೊಂಚ ಮೃದುಧೋರಣೆ ತಳೆದ ಸಿಂಡಿಕೆಟ್ ಸಭೆ 2013-14 ನೇ ಸಾಲಿನಲ್ಲಿ ಸಂಯೋಜನೆ ನವೀಕರಣ ಅರ್ಜಿಯನ್ನೇ ಸ್ವೀಕರಿಸಬಾರದೆಂಬ ಕೌನ್ಸಿಲ್ ನಿರ್ಣಯವನ್ನು ಒಪ್ಪಿಲ್ಲ. ಬದಲಿಗೆ 9 ನಿಷ್ಕ್ರಿಯ ಕಾಲೇಜುಗಳನ್ನು ಹೊರತುಪಡಿಸಿ ಉಳಿದ 61 ಬಿ.ಇಡಿ ಕಾಲೇಜುಗಳು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್(ಎನ್ ಸಿಟಿಇ) ಮಾನ್ಯತೆಯೊಂದಿಗೆ ಕಾಲೇಜು ನಡೆಸಲು ಅರ್ಹತೆ ಹೊಂದಿದ್ದು, ಮರುಪರಿಶೀಲನೆ ನಡೆಸುವಂತೆ ವಿಶೇಷ ಮನವಿ ಮಾಡಿಕೊಮ್ದರೆ ಅಂತಹ ಕಾಲೇಜುಗಳಿಗೆ ಸ್ಥಳೀಯ ವಿಚಾರಣಾ ಸಮಿತಿ ಅಥವಾ ತಜ್ನರ ಸಮಿತಿ ಕಳುಹಿಸಿ ಮರುಪರಿಶೀಲನೆ ನಡೆಸಲು ತೀರ್ಮಾನ ಕೈಗೊಂಡಿದೆ.
2012-13ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಿಲ್ಲ:

2012-13ನೇ ಸಾಲಿನ ಪ್ರವೇಶ ಪ್ರಕ್ರಿಯೆ ಈಗಾಗಲೆ ಮುಗಿದ ಹಿನ್ನಲೆಯಲ್ಲಿ ಈ ವರ್ಷ ಸಂಯೋಜನೆ ಮುಂದುವರೆಸಿ, ಪರೀಕ್ಷೆ ಹಾಗೂ ಫಲಿತಾಂಶ ಪ್ರಕಟಿಸಲು ಅವಕಾಶ ನೀಡಲಾಗಿದೆ.

ಆದರೆ 2013-14ನೇ ಸಾಲಿನಲ್ಲಿ ಬಿಇಡಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ವಿವಿ ವ್ಯಾಪ್ತಿಯ 26 ಕಾಲೇಜುಗಳನ್ನು ಹೊರತು ಪಡಿಸಿ ಇನ್ನುಳಿದ 70ಕ್ಕೂ ಹೆಚ್ಚು ಕಾಲೇಜುಗಳಿಗೆ ವಿವಿ ಮಾನ್ಯತೆ ಇದೆಯೇ ಎಂಬುದನ್ನು ಖಚಿತಪಡಿಸಿಕೊಂದು ಅರ್ಜಿ ಸಲ್ಲಿಸಬೇಕು.ಈ ಸಂಬಂಧ ಅಗತ್ಯ ಮಾಹಿತಿ ವಿವಿ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ವಿವಿ ಕುಲಪತಿ ಡಾ.ಬಿ.ತಿಮ್ಮೇಗೌಡ ತಿಳಿಸಿದ್ದಾರೆ.

9 ಕಾಲೇಜುಗಳ ಸಂಯೋಜನೆ ನವೀಕರಣ ಅರ್ಜಿಯನ್ನೇ ಸ್ವೀಕರಿಸದಿರಲು ನಿರ್ಧಾರ:

70 ಕಾಲೇಜುಗಳ ಪೈಕಿ ಈಗಾಗಲೇ ನಿಷ್ಕ್ರಿಯಗೊಂಡಿರುವ 9 ಬಿ.ಇಡಿ ಕಾಲೇಜುಗಳ ಮಾನ್ಯತೆಯನ್ನು 2011-12ರಿಂದಲೇ ವಾಪಸ್ ಪಡೆಯಲು ತೀರ್ಮಾನಿಸಿರುವ ವಿವಿ ಈ ಕಾಲೇಜುಗಳಿಂದ 2013-14ನೇ ಸಾಲಿನಲ್ಲಿ ಸಂಯೋಜನೆ ನವೀಕರಣ ಅರ್ಜಿಯನ್ನು ಸ್ವೀಕರಿಸದಿರಲು ನಿರ್ಧರಿಸಿದೆ.

ಈ ಹಿನ್ನಲೆಯಲ್ಲಿ ಈ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳನ್ನು ಅಕ್ಕಪಕ್ಕದ ಕಾಲೇಜುಗಳಿಗೆ ವರ್ಗಾಯಿಸಲು ಚಿಂತನೆ ನಡೆಸಲಾಗಿದೆ. ಇದಕೆ ಕಾಲಾವಕಾಶ ಅಗತ್ಯವಿರುವುದರಿಂದ ಇದೇ 23ರಿಂದ ನಡೆಯಬೇಕಿದ್ದ ಬಿ.ಇಡಿ ಪರೀಕ್ಷೆಯನ್ನು ಜೂನ್ 5ಕ್ಕೆ ಮುಂದೂಡಲಾಗಿದೆ.
ಮಾನ್ಯತೆ ರದ್ದಾದ ಬಿ.ಇಡಿ ಕಾಲೇಜು:

* ಕೆಇಇಟಿ ಕಾಲೇಜು - ಬೆಂಗಳೂರು
* ರಾಘವೇಂದ್ರ ಕಾಲೇಜು - ಬೆಂಗಳೂರು
* ಸೆಂಟ್ ಪಾಲ್ಸ್ ಕಾಲೇಜು -
* ಎಸ್ ಜೆ ಇ ಎಸ್ ಕಾಲೇಜು -
* ಎಸ್ ಜೆ ಬಿ ಕಾಲೇಜು - ಬೆಂಗಳೂರು
* ಆರ್ ಆರ್ ಕಾಲೇಜು - ಬೆಂಗಳೂರು
* ಎಂ ಎಸ್ ರಾಮಯ್ಯ ಕಾಲೇಜು - ಬೆಂಗಳೂರು
* ಕೆ ಎಲ್ ಇ ಕಾಲೇಜು - ಬೆಂಗಳೂರು
* ಜೆ ಎಸ್ ಎಸ್ ಕಾಲೆಜು- ಬೆಂಗಳೂರು
* ಅನುಗ್ರಹ ಕಾಲೇಜು - ಬೆಂಗಳೂರು
* ಮಿರಾಂಡಾ ಕಾಲೇಜು - ಬೆಂಗಳೂರು
* ಪದ್ಮಶ್ರೀ ಕಾಲೇಜು - ಬೆಂಗಳೂರು
* ಎಂ ವಿ ಜೆ ಕಾಲೇಜು - ಬೆಂಗಳೂರು
* ಬಸವೇಶ್ವರ ಕಾಲೇಜು - ಬೆಂಗಳೂರು
* ಸುಶ್ರುತಿ ಕಾಲೇಜು - ಬೆಂಗಳೂರು
* ಮೆಹರಾ ಕಾಲೇಜು - ಬೆಂಗಳೂರು
* ಫ್ರ್ಯಾಂಕ್ ಕಾಲೇಜು - ಬೆಂಗಳೂರು
* ಅನುಪಮಾ ಕಾಲೇಜು - ಬೆಂಗಳೂರು
* ಡಯಾನಾ ಕಾಲೆಜು - ಬೆಂಗಳೂರು
* ಅಂಬಿಗರ ಚೌಡಯ್ಯ ಕಾಲೆಜು - ಬೆಂಗಳೂರು
* ಸುಬ್ರಹ್ಮಣ್ಯ ಕಾಲೇಜು - ಬೆಂಗಳೂರು
* ಕ್ರಸೆಮ್ಟ್ ಕಾಲೇಜು - ರಾಮನಗರ
* ಶಾರದ ಕಾಲೇಜು - ಮುಳಬಾಗಿಲು
* ಬೆಂಗಳೂರು ಕಾಲೇಜು - ಚಂದ್ರಾಪುರ
* ಮದರ್ ತೆರೆಸಾ ಕಾಲೆಜು - ಜಾಲಹಳ್ಳಿ
* ಪ್ರಗತಿ ಕಾಲೇಜು - ಚಿಂತಾಮಣಿ
* ಬಾಪೂಜಿ ಕಾಲೇಜು - ಮಾಲೂರು
* ಲಾವಣ್ಯ ಕಾಲೇಜು - ದೊಡ್ಡಬಳ್ಳಾಪುರ
* ಇಂದಿರಾ ಕಾಲೇಜು - ಬೂದಿಕೋಟೆ
* ನೂರಿ ಕಾಲೇಜು - ಕೆಜಿಎಫ್
* ಅರಿಸ್ಟಾಟಲ್ ಕಾಲೇಜು - ಕೆಜಿಎಫ್
* ರ್ಯಾಕ್ ವ್ಯಾಲಿ ಕಾಲೇಜು - ಕೋಲಾರ
* ವಿಷ್ಣು ಕಾಲೇಜು - ಕೋಲಾರ
* ರವಿ ಕಾಲೇಜು - ಕೋಲಾರ
* ಎ ಇ ಸಿ ಎಸ್ ಕಾಲೇಜು - ಕೋಲಾರ
:ಕಾರ್ಯನಿರ್ವಹಿಸದ ಕಾಲೇಜು:

* ಕಲಾನಿಕೇತನ ಕಾಲೇಜು - ಬೆಂಗಳೂರು
* ವೆಂಕಟೇಶ್ವರ ಕಾಲೇಜು - ಬೆಂಗಳೂರು
* ಲಾರ್ಡ್ಸ್ ಕಾಲೆಜು - ಬೆಂಗಳೂರು
* ಗೇರ್ ಕಾಲೆಜು - ಬೆಂಗಳೂರು
* ಎಸ್ ಐ ಟಿ ಕಾಲೇಜು - ಬೆಂಗಳೂರು
* ಮಹರ್ಷಿ ಸವಿತಾ ಕಾಲೇಜು - ಬೆಂಗಳೂರು
* ಬಾಪು ಕಾಲೇಜು - ಬೆಂಗಳೂರು
* ಧನ್ವಂತರಿ ಕಾಲೇಜು - ಬೆಂಗಳೂರು
* ರಾಜಾರಾಮ್ ಮೋಹನ್ ರಾಯ್ ಕಾಲೇಜು - ಬೆಂಗಳೂರು
* ದಯಾನಂದ ಕಾಲೇಜು- ಬೆಂಗಳೂರು
* ಶ್ರೀನಿಧಿ ಕಾಲೇಜು - ಬೆಂಗಳೂರು
* ಸಿಎಂ ಆರ್ ಕಾಲೇಜು - ಬೆಂಗಳೂರು
* ಸುತಾರಿಯಾ ಕಾಲೇಜು - ನೆಲಮಂಗಲ
* ಜಿ ಎಂ ಕಾಲೇಜು - ಅರಿಶಿಣಕುಂಟೆ
* ಶ್ರೀ ಧರ್ಮಗುರು ಕಾಲೇಜು - ಬಾಗೇಪಲ್ಲಿ
* ಶ್ರೀ ವಿಜೇಂದ್ರ ಕಾಲೇಜು - ಕೆಜಿಎಫ್
* ನಿರ್ವಾಣಸ್ವಾಮಿ ಕಾಲೇಜು - ಕನಕಪುರ

ಕಪ್ಪುಪಟ್ಟಿಗೆ ಸೇರಿಸಲಾದ 9 ಕಾಲೇಜು:

* ಯುನಿಟಿ ಕಾಲೇಜು - ಬೆಂಗಳೂರು
* ರಾಜೀವ್ ಗಾಂಧಿ ಕಾಲೇಜು - ಬೆಂಗಳೂರು
* ಬೆಂಗಳೂರು ಸಿಟಿ ಕಾಲೇಜು - ಬೆಂಗಳೂರು
* ಉಲಿಯಪ್ಪ ಮಲ್ಲಮ್ಮ ಕಾಲೇಜು - ಬೆಂಗಳೂರು
* ಮಂಜುಳಾ ಮಲ್ಲೇಶ ಕಾಲೆಜು - ಬೆಂಗಳೂರು
* ಅಮಿತಾ ಕಾಲೇಜು - ಬೆಂಗಳೂರು
* ರಿಜೆನ್ಸಿ ಕಾಲೇಜು - ಬೆಂಗಳೂರು
* ಜ್ನಾನವಿಕಾಸ ಕಾಲೆಜು - ಬೆಂಗಳೂರು
* ಸೆಂಟ್ ಜೋಸೆಫ್ ಕಾಲೇಜು - ಬೆಂಗಳೂರು
ರಾಷ್ಟ್ರೀಯ ಶಿಕ್ಷಣ ಪರಿಷತ್ ಮಾನ್ಯತೆಯಿಲ್ಲದ ಕಾಲೇಜು:

* ಆಚಾರ್ಯಾ ಕಾಲೇಜು - ಹೆಸರಘಟ್ಟ
* ಎಇಟಿ ಕಾಲೇಜು - ದೊಡ್ಡಕ್ಕನಹಳ್ಳಿ
* ಅರ್ಚನಾ ಕಾಲೇಜು - ಬೆಂಗಳೂರು
* ಬಿಟಿಎಲ್ ಕಾಲೇಜು - ಬೊಮ್ಮಸಂದ್ರ
* ಕೆ.ಕೆ ಕಾಲೇಜು - ಕೋಣನಕುಂಟೆ
* ಕೆ.ಕೆ.ಇ.ಎಸ್ ಕಾಲೇಜು - ಮಲ್ಲೇಶ್ವರಂ
* ಸರ್ವೋದಯ ಕಾಲೇಜು - ವಿಜಯನಗರ
* ಎಸ್ ಇ ಎ ಕಾಲೇಜು - ಬಸವನಪುರ

 

Author : ಚಂದ್ರಲೇಖಾ ರಾಕೇಶ್

More Articles From Education & Career

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited