Untitled Document
Sign Up | Login    
ಜಿಯೋಗ್ರಾಫಿಕ್ ಬೀ ಸ್ಪರ್ಧೆ:ಮಂಗಳೂರು ಮೂಲದ ಸಾತ್ವಿಕ್ ಪ್ರಥಮ

ಸಾತ್ವಿಕ್ ಕಾರ್ಣಿಕ್

ಅಮೆರಿಕದ ಪ್ರತಿಷ್ಠಿತ ನ್ಯಾಷನಲ್ ಜಿಯೋಗ್ರಾಫಿಕ್ ಬೀ ಸ್ಪರ್ಧೆಯಲ್ಲಿ ಮಂಗಳೂರು ಮೂಲದ ಸಾತ್ವಿಕ್ ಕಾರ್ಣಿಕ್ ಪ್ರಥಮ ಸ್ಥಾನ ಪಡೆದಿದ್ದಾನೆ. ಈ ಮೂಲಕ ಸತತ ಆರನೆ ವರ್ಷವೂ ಜಿಯೋಗ್ರಫಿಕ್ ಬೀ ಪ್ರಶಸ್ತಿ ಭಾರತೀಯ ಮೂಲದವರ ಪಾಲಾಗಿದೆ.

ಜಿಯೋಗ್ರಾಫಿಕ್ ಬೀ ಮತ್ತು ಸ್ಪೆಲ್ಲಿಂಗ್ ಬೀ ಎರಡೂ ಪ್ರಕಾರಗಳಲ್ಲಿ ಸಾತ್ವಿಕ್ ವಿಜೇತನಾಗಿದ್ದು, 25 ಸಾವಿರ ಡಾಲರ್(ಸುಮಾರು 13.75 ಲಕ್ಷ) ವಿದ್ಯಾರ್ಥಿ ವೇತನವನ್ನು ಬಹುಮಾನ ರೂಪದಲ್ಲಿ ಗಳಿಸಿದ್ದಾನೆ.

ಜಿಯೋಗ್ರಫಿಕ್ ಬೀ ಸ್ಪರ್ಧೆಯಲ್ಲಿ 5 ಪ್ರೆಶ್ನೆಗಳಿಗೂ ಈತ ಸರಿಯಾದ ಉತ್ತರ ನೀಡಿದ್ದಾನೆ. ಈ ಮೂಲಕ ತನ್ನ ಸಮೀಪದ ಪ್ರತಿಸ್ಪರ್ಧಿಯಾದ 13 ವರ್ಷದ ಕಾನ್ ರಾಡ್ ಒಬರ್ ಹಾಸ್ ನನ್ನು ಹಿಂದಿಕ್ಕಿ ವಿಜಯ ಸಾಧಿಸಿದ್ದಾನೆ. ಈ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಸಂಜೀವ್ ಉಪ್ಪಲುರಿ 3ನೇ ಸ್ಥಾನ ಪಡೆದುಕೊಂಡಿದ್ದಾನೆ.
ಮಂಗಳೂರು ಮೂಲದ ವಿಶ್ವನಾಥ ಹಾಗೂ ರತ್ನಾ ದಂಪತಿಯ ಮಗ ಸಾತ್ವಿಕ್. ಸಾಫ್ಟ್ ವೇರ್ ವೃತ್ತಿಯವರಾದ ಈ ದಂಪತಿಗಳು 2002ರಿಂದ ಅಮೆರಿಕದಲ್ಲಿ ನೆಲೆಸಿದ್ದು, ದಕ್ಷಿಣದ ನಾರ್ ಫೋಕ್ ನಲ್ಲಿ ವಾಸವಾಗಿದ್ದಾರೆ. ಸಾತ್ವಿಕ್ ಕಿಂಗ್ ಫಿಲಿಪ್ ಪ್ರಾದೇಶಿಕ ಮಾಧ್ಯಮಿಕ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿ.

ಸಾತ್ವಿಕ್ ಅಣ್ಣ ಕಾರ್ತಿಕ್ ಕಾರ್ಣಿಕ್ ಕೂಡ 2011 ಹಾಗೂ 2012ರಲ್ಲಿ ನ್ಯಾಷನಲ್ ಜಿಯೋಗ್ರಾಫಿಕ್ ಬೀ ಸ್ಪರ್ಧೆಯಲ್ಲಿ ಭಾಗವಹಿಸಿದ್ದ. ಅಲ್ಲದೇ 2011ರಲ್ಲಿ 5ನೇ ಸ್ಥಾನ ಹಾಗೂ 2012ರಲ್ಲಿ 6ನೇ ಸ್ಥಾನ ಪಡೆದುಕೊಂಡಿದ್ದ.

ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿ ನಡೆಸುವ ರಾಷ್ಟ್ರಮಟ್ಟದ ಈ ಸ್ಪರ್ಧೆಯಲ್ಲಿ ಒಟ್ಟು 40 ಲಕ್ಷ ಮಕ್ಕಳು ಭಾಗವಹಿಸಿದ್ದು, ಅಂತಿಮ ಸುತ್ತಿಗೆ 10 ಮಕ್ಕಳು ಆಯ್ಕೆಯಾಗಿದ್ದರು. ಅವರಲ್ಲಿ 8 ಮಕ್ಕಳು ಭಾರತೀಯ ಮೋಲದವರು. 1989ರಿಂದಲೂ ಈ ಸ್ಪರ್ಧೆ ನಡೆಯುತ್ತಿದ್ದು, ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ 2008ರಿಂದಲೂ ಭಾರತ ಮೂಲದ ಮಕ್ಕಳೇ ವಿಜೇತರಾಗುತ್ತಿರುವುದು ವಿಶೇಷ.

 

Author : ಚಂದ್ರಲೇಖಾ ರಾಕೇಶ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited