Untitled Document
Sign Up | Login    
ಕೋರ್ಸ್ ಗಳ ಆಯ್ಕೆಯಲ್ಲಿ ಸಹನೆಯಿರಲಿ:ಸೂಕ್ತ ಆಯ್ಕೆ ನಿಮ್ಮದಾಗಲಿ

ಸಾಂದರ್ಭಿಕ ಚಿತ್ರ

ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟಗಳಾದ ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಗಳು ಮುಗಿದಿವೆ. ಇನ್ನೇನು ಮೇ.6ರಂದು ಫಲಿತಾಂಶವೂ ಪ್ರಕಟಗೊಳ್ಳಲಿದೆ. ವೆಬ್ ಸೈಟ್ ನಲ್ಲಿ ಮೇ 6ರಂದು ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಗಳ ಫಲಿತಾಂಶ ಏಕಕಾಲಕ್ಕೆ ಪ್ರಕಟವಾಗಲಿದ್ದು, ಮೇ 7ರಂದು ಎಲ್ಲಾ ಕಾಲೆಜುಗಳಲ್ಲಿ ಲಭ್ಯವಾಗಲಿದೆ. ಹಾಗಾಗಿ ಮುಂದಿನ ಓದಿನ ದಾರಿ ಯಾವುದು ಎಂಬುದು ವಿದ್ಯಾರ್ಥಿಗಳ ಯೋಚನೆ.

ನಮ್ಮ ಉಜ್ವಲ ಭವಿಷ್ಯದ ಕತೃಗಳು ನಾವೆ. ನಾವೇನಾಗಬೆಕು ಎಂಬುದನ್ನು ನಾವೇ ನಿರ್ಧರಿಸಬೇಕು. ಹಾಗಾಗಿ ಮುಂದಿನ ಭವಿಷ್ಯದ ನಿರ್ಧಾರದಲ್ಲಿ ವಿದ್ಯಾರ್ಥಿಗಳದ್ದೇ ಸಿಂಹಪಾಲು. ಹಾಗಾಗಿ ಮುಂದಿನ ಕೋರ್ಸ್ ಗಳ ಆಯ್ಕೆಯಲ್ಲಿ ಗಡಿಬಿಡಿ ಬೇಡ. ಯಾವ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಕನಸು ನನಸಾಗಲಿದೆ ಎಂಬುದನ್ನು ಪಾಲಕರೊಂದಿಗೆ ಕುಳಿತು ಚರ್ಚಿಸಿ ನಿರ್ಧಾರಕ್ಕೆ ಬರುವುದು ಸೂಕ್ತ. ಇದರ ಜೋತೆಗೆ ಯಾವ ಕಾಲೇಜನ್ನು ಸೇರಬೇಕು ಎಂಬುದು ಕೂಡ ಅಷ್ಟೇ ಮುಖ್ಯವಾದ ಅಂಶವಾಗಿರುತ್ತದೆ.

ಪಿಯುಸಿ ಮಾಡಲೋ, ಡಿಪ್ಲೋಮಾ ಮಾಡಲೋ ಅಥವಾ ಯಾವುದಾದರೂ ವೃತ್ತಿಪರ ಕೋರ್ಸ್ ಗಳಿಗೆ ಸೇರಲೋ ಎಂಬ ಗೊಂದಲ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಲ್ಲಿದ್ದರೆ, ಎಂಜಿನಿಯರಿಂಗ್ ಮಾಡಲೋ, ಮೆಡಿಕಲ್ ಓದಲೋ, ಬಿಎಸ್ಸಿ ಮಾಡಲೋ, ಬಿಎ ಮಾಡಲೋ, ಇಲ್ಲಾ ಯಾವುದಾದರೂ ಮ್ಯಾನೆಜ್ ಮೆಂಟ್ ಕೋರ್ಸ್ ಗಳಿಗೆ ಸೇರಲೋ ಎಂಬ ಪ್ರೆಶ್ನೆಗಳು ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಲ್ಲಿ.

ತಮ್ಮ ಮಕ್ಕಳ ಏಳಿಗೆಗೆ, ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿ ಕೋಡುವ ಮಹತ್ತರವಾದ ಜವಾಬ್ದಾರಿ ಪ್ರತಿಯೊಬ್ಬ ಪಾಲಕರ, ಪೋಷಕರ ಮೇಲಿದೆ. ಹೀಗಾಗಿ ಮಕ್ಕಳ ಓದಿನ ಪ್ರತಿ ಹಂತದಲ್ಲಿ ಗನಹರಿಸುವುದರೊಂದಿಗೆ, ಯಾವಕೋರ್ಸ್ ಗೆ ಮಕ್ಕಳನ್ನು ಸೇರಿಸಬೇಕು ಜೊತೆಗೆ ನಿಮ್ಮಮಕ್ಕಳಿಗೆ ಅದರಲ್ಲಿ ಯಾವುದು ಇಷ್ಟ ಎಂಬುದನ್ನು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳುವುದು ಮುಖ್ಯವಾಗಿರುತ್ತದೆ.
ಪಾಲಕರು ಹಾಗೂ ವಿದ್ಯಾರ್ಥಿಗಳು ಗಮನಹರಿಸಬೆಕಾದ ಅಂಶಗಳು:

> ವೃತ್ತಿಪರ, ಲಾಭದಾಯಕ, ಉದ್ಯೋಗ ಗಳಿಕೆಗೆ ಅನುಕೂಲವಾಗುವ ಕೋರ್ಸ್ ಗಳ ಆಯ್ಕೆ ಸೂಕ್ತ.
> ದೀರ್ಘಾವಧಿವರೆಗೆ ಉದ್ಯೋಗ ಸೃಷ್ಠಿಸುವಂತಹ, ಉದ್ಯೋಗ ಭದ್ರತೆಯುಳ್ಳ ಕೋರ್ಸ್ ಗಳ ಆಯ್ಕೆ ಮುಖ್ಯ
> ಯಾವುದೇ ಕೋರ್ಸ್ ಗಳಿಗೂ ಮೊದಲು ಸಂಬಂಧ ಪಟ್ಟ ಸಲಹೆಗಾರರ, ತಜ್ನರನ್ನು ವಿಚಾರಿಸಿ ಮಾರ್ಗದರ್ಶನ ಪಡೆಯುವುದು ಒಳಿತು.
> ಉತ್ತಮವಾದ ಕೋರ್ಸ್ ಗಲ ಲಭ್ಯತೆಯಿರುವ ಶಿಕ್ಷಣ ಸಂಸ್ಥೆಗಲ ಬಗ್ಗೆ, ಅಲ್ಲಿನ ಶಿಕ್ಷಣದ ಗುಣಮಟ್ಟ, ಮೂಲಭೂತ ಸೌಲಭ್ಯ, ತರಬೇತಿಗಲ ಕುರಿತು ಮಾಹಿತಿ ಪಡೆಯುವುದು ಒಳಿತು.
> ಯಾವುದೇ ವಿದ್ಯಾರ್ಥಿ ಪೋಷಕರ ಬಲವಂತಕ್ಕೋ, ಸ್ನೇಹಿತರೆಲ್ಲಾ ಆ ಕೋರ್ಸ್ ಗೆ ಸೇರಿದ್ದಾರಲ್ಲಾ ಎಂಬ ಕಾರಣಕ್ಕೆ ಕೋರ್ಸ್ ಗಳನ್ನು ಆಯ್ಕೆ ಮಾಡದೇ, ಕೋರ್ಸ್ ಗಳ ಆಯ್ಕೆಯಲ್ಲಿ ನಿಮ್ಮ ಸ್ಪಷ್ಟವಾದ ಗುರಿ, ಉದ್ದೇಶವನ್ನು ಹೋಂದಿರುವುದು ಮುಖ್ಯ.
> ಯಾವುದಾದರೂ ಒಂದು ಕೋರ್ಸ್ ನ್ನು ಓದಿದರಾಯಿತು ಎಂಬ ಉದಾಸೀನತೆ ಸರಿಯಲ್ಲ. ಕೋರ್ಸ್ ಆಯ್ಕೆಯಲ್ಲಿ ದೃಢತೆ ಅವಶ್ಯಕ
> ಉದ್ಯೋಗ ಭದ್ರತೆ ಒದಗಿಸುವ, ದೀರ್ಗಾವಧಿ ಬೇಡಿಕೆಯುಳ್ಳ ಕೋರ್ಸ್ ಗಳ ಆಯ್ಕೆ ಅಗತ್ಯ.

 

Author : ವರದರಾಜ್ ಭಟ್

More Articles From Education & Career

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited