Untitled Document
Sign Up | Login    
ಯುಪಿಎಸ್ಸಿ ಫಲಿತಾಂಶ ಪ್ರಕಟ: ರಾಜ್ಯದ 40 ಮಂದಿ ತೇರ್ಗಡೆ


ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2012-13ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆ(ಐಎ ಎಸ್, ಐಪಿಎಸ್, ಐಎಫ್ ಎಸ್)ಯಲ್ಲಿ ದೇಶಾದ್ಯಂತ ಒಟ್ಟು 998 ಮಂದಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ರಾಜ್ಯದ 40 ಮಂದಿ ತೇರ್ಗಡೆಯಾಗಿದ್ದು, 32ನೇ ರ್ಯಾಂಕ್ ವಿಜೇತ ಕೆ ವಿ ರಾಜೇಂದ್ರ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಾಜ್ಯಕ್ಕೆ ಕಡಿಮೆ ರ್ಯಾಂಕ್ ಗಳು ಬಂದಿವೆ. ರವಿ ಸುಭಾಷ್ ಪಟ್ಟಣ ಶೆಟ್ಟಿ 47ನೇ ರ್ಯಾಂಕ್, ಆರ್ ಯಶಸ್ 75ನೇ ರ್ಯಾಂಕ್ ಪಡೆದಿದ್ದು, ಬೆಂಗಳೂರಿನ ಆರ್ ಸ್ನೇಹಲ್ 77ನೇ ರ್ಯಾಂಕ್ ಗಳಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ರವಿ ಸುಭಾಷ್ ಹಾಗೂ ಯಶಸ್, ಸ್ನೆಹಲ್ ಈಗಾಗಲೆ ಸೇವೆಯಲ್ಲಿದ್ದಾರೆ. ಯಶಸ್ ಐಪಿಎಸ್ ಗೆ ಆಯ್ಕೆಯಾಗಿದ್ದು, ತರಬೇತಿ ಪಡೆಯುತ್ತಿದ್ದಾರೆ. ಈ ಬಾರಿ ಆಯ್ಕೆಯಾದ ಹಲವರಲ್ಲಿ ಈಗಾಗಲೆ ವಿವಿಧ ಸೇವೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಬಾರಿ ಒಟ್ಟು 998 ಜನರಿಗೆ ರ್ಯಾಂಕ್ ಹಂಚಿಕೆಯಾಗಿದ್ದು, ಭಾರತೀಯ ಆಡಳಿತ ಸೇವೆಯ 180ಹುದ್ದೆಗಳು ಖಾಲಿಯಿವೆ. ಮೀಸಲಾತಿ ಸೌಲಭ್ಯವುಳ್ಳವರಿಗೆ 400 ರ್ಯಾಂಕ್ ವರೆಗೂ ಐಎ ಎಸ್ ಗೆ ಆಯ್ಕೆಯಾಗುವ ಸಾಧ್ಯತೆಗಳಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಇಲ್ಲಿಯೂ ಮೀಸಲಾತಿಯಿದೆ.
ರಾಜ್ಯದ ರ್ಯಾಂಕ್ ವಿಜೇತರ ಪಟ್ಟಿ :

ಡಾ. ಕೆವಿ ರಾಜೇಂದ್ರ - 32ನೇ ರ್ಯಾಂಕ್, ರವಿ ಸುಭಾಷ್ ಪಟ್ಟಣ ಶೆಟ್ಟಿ - 47ನೇ ರ್ಯಾಂಕ್, ಆರ್ ಯಶಸ್ - 7ನೇ ರ್ಯಾಂಕ್, ಆರ್ ಸ್ನೆಹಲ್ - 77, ಟಿ ಅರುಣ್ - 117, ಸುಮನ್ ಪನ್ನೇಕರ್ - 126, ಅನುಪ್ ಎ ಶೆಟ್ಟಿ - 140, ಪ್ರೀತ್ ಗಣಪತಿ - 161, ಪ್ರದೀಪ್ - 230, ಜಗನ್ನಾಥ ರೆಡ್ಡಿ - 232, ಅಮಿತ್ ಕುಮಾರ್- 266, ಲಕ್ಷ್ಮೀ ಶಾ - 275, ಅಭಿಷೇಕ್ ರಾತ್ಕಲ್ - 295, ಜೆಯು ಚಂದ್ರಕಲಾ - 331, ಸಿಬಿ ಋಷ್ಯಂತ್ - 381, ಎಂ ಶ್ರೀನಾಥ್ - 403, ಜಿ ಆರ್ ಸಂದೀಪ್-412, ರಷ್ಮಿ-429, ಎ ಎಂ ವಿಜಯ್ ಕುಮಾರ್-432, ಸಿಟಿ ಶಿಲ್ಪಾನಾಗ್-434, ರಾಘವೇಂದ್ರ-442, ಚಂದ್ರಶೇಖರ್ ನಾಯಕ್ - 470, ಅಖಿಲ್ ಮಲ್ಲಿಕಾರ್ಜುನ ಶಾಸ್ತ್ರೀ-553, ಬಿ ಆರ್ ವರುಣ್-590, ಡಾ.ಬಿ ಜೀವನ್-608, ಡಾ.ರಾಹುಲ್ ರಾಯಚೂರು-669, ರಕ್ಷಿತಾ ಕೆ ಮೂರ್ತಿ-668, ಬಿ ಎಲ್ ಶೃತಿ-681, ಎ ಎಲ್ ಮಂಜುನಾಥ್-714, ಕೆ ಪಿ ಪ್ರದೀಪ್-725, ಜಯರಾಮೇಗೌಡ-729, ಡಿ ಎಸ್ ಸಾಮ್ರಾಟ್ ಗೌಡ-739, ಜೆ.ಲೋಹಿತೇಶ್ವರ-783, ಕೆ ಲಕ್ಷ್ಮೀ-805, ಹರ್ಷ ಭಾನು-873, ಮಂಜುನಾಥ್ ಕನಮದಿ-900, ಸಂದೇಶ್-930, ಕಲ್ಮೇಶ್ವರ್ ಶಿಂಗಣ್ಣವರ-937,ವಿಕ್ರಮ್ ದೊಡ್ಡಮನಿ-957, ಡಾ.ಕಿರಣ್-974 ಹಾಗೂ ಬಸಪುರಂ ಜಯಣ್ಣ ಕರ್ಪೂರ್ ಕರ್-976.

 

Author : ಚಂದ್ರಲೇಖಾ ರಾಕೇಶ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited