Untitled Document
Sign Up | Login    
ಮೇ.1ರಿಂದ ಸಿಇಟಿ:ಶುಲ್ಕ ನಿಗದಿ, ಸೀಟು ಹಂಚಿಕೆಯಲ್ಲಿ ಇನ್ನೂ ಅನಿಶ್ಚಿತತೆ

ಸಾಂದರ್ಭಿಕ ಚಿತ್ರ

ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ ಮೆ.1ರಿಂದ ಪ್ರಾರಂಭವಾಗಲಿದೆ. ಇಂಜಿನಿಯರಿಂಗ್, ವೈದ್ಯಕೀಯ, ಕೃಷಿವಿಜ್ನಾನ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ನಡೆಯುವ ಸಿಇಟಿ ಮೇ.1,2,3ರಂದು ನಡೆಯಲಿದ್ದು, ಈ ವರ್ಷ ಸುಮಾರು 1.50ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಕಳೆದ ವರ್ಷ ಸಿಇಟಿ ಪರೀಕ್ಷೆಗೆ 1.20 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿತ್ತು. ಈ ವರ್ಷ ಕಳೆದ ವರ್ಷಕ್ಕಿಂತ 30 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಈ ವರ್ಷದಿಂದ ಕೃಷಿ ಹಾಗೂ ಪಶು ವೈದ್ಯಕೀಯ ವಿಜ್ನಾನ ಕೋರ್ಸ್ ಗಳಿಗೂ ಸಿಇಟಿ ನಡೆಸಲು ಉದ್ದೇಶಿಸಲಾಗಿದೆ. ಈ ಹಿನ್ನಲೆಯಲ್ಲಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎನ್ನಬಹುದು.
2013-14ನೇ ಸಾಲಿನ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಕೃಷಿಕರ ಕೋಟಾದಡಿ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಮೇ.10ರಂದು ಬೆಂಗಳೂರಿನ ಗಾಂಧಿ ಕೃಷಿ ವಿಜ್ನಾನ ಕೇಂದ್ರ ಆವರಣದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.

ಈ ಮಧ್ಯೆ ವಿಧಾನಸಭಾ ಚುನಾವಣೆ ಭರದ ಸಿದ್ದತೆಯಲ್ಲಿರುವ ಸರ್ಕಾರ ಸೀಟು ಹಂಚಿಕೆ ಹಾಗೂ ಪ್ರವೇಶ ಶುಲ್ಕ ಹೆಚ್ಚಳ ಕುರಿತು ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಶುಲ್ಕ ಹೆಚ್ಚಳ ಹಾಗೂ ಸೀಟು ಹಂಚಿಕೆ ವಿಚಾರವಾಗಿ ಎದ್ದಿರುವ ಅನಿಶ್ಚಿತತೆ ಶಮನಕ್ಕೂ ಸರ್ಕಾರ ಮುಂದಾಗಿಲ್ಲ.

ಸಿಇಟಿ ಮೂಲಕ ಪ್ರವೇಶ ಪಡೆದ ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡುವ ಖಾಸಗಿ ಕಾಲೇಜುಗಳ ನೀತಿಗೆ ಕಡಿವಾಣ ಹಾಕಲು ಮುಂದಾಗಿರುವ ಸರ್ಕಾರ ಏಕರೂಪ ಶುಲ್ಕ ನಿಗದಿಪಡಿಸಿ ಅದನ್ನು ಪ್ರವೇಶ ಶುಲ್ಕದ ಜೊತೆಗೆ ಸೇರಿಸಲು ಮುಂದಾಗಿದೆ. ಇದಕ್ಕೆ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಆದರೆ ಚುನಾವಣೆ ಸಮೀಪಿಸುತ್ತಿರುವುದರಿಂದ ಈ ವಿಚಾರದಲ್ಲಿ ಯಾವುದೇ ರೀತಿಯ ಬೆಳವಣಿಗೆಗಳೂ ನಡೆದಿಲ್ಲ ಎನ್ನಲಾಗಿದೆ.

 

Author : ವರದರಾಜ್ ಜಿ

More Articles From Education & Career

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited