Untitled Document
Sign Up | Login    
ಬೇಸಿಗೆಯಲ್ಲಿ ಕಂಫರ್ಟ್‌ ಅಂಡ್‌ ಸ್ಟೈಲಿಶ್‌ ಉಡುಗೆಗಳು..

ಆರಾಮ ನೀಡುವ ಫ್ಯಾಬ್ರಿಕ್ಸ್‌ ಟೀ ಶರ್ಟ್ಸ್

ಬಿಸಿಲು ಶಾಖದ ಕಾಲವಾದ ಬೇಸಿಗೆಯಲ್ಲಿ ನಮ್ಮ ಬಟ್ಟೆಯ ಆಯ್ಕೆಯೂ ಕಷ್ಟ. ನಮಗೆ ಒಪ್ಪುವ, ನಾವಿಷ್ಟಪಡುವ ನಮೂನೆಯ ಬಟ್ಟೆಗಳ ಮಾದರಿಯಲ್ಲಿಯೇ ಬೇಸಿಗೆಗೆ ಹಿತವಾಗಿರುವ ಬಟ್ಟೆಗಳನ್ನು ಖರೀದಿಸುವುದು ಉತ್ತಮ.

ವಾತಾವರಣದಲ್ಲಿರುವ ಶಾಖದಿಂದ ಚರ್ಮ ಬೆವರಿದಾಗ ಚರ್ಮಕ್ಕೆ ರಕ್ಷಣೆ ನೀಡುವಂತಹ ಬಟ್ಟೆಯನ್ನು ಧರಿಸಬೇಕು. ಆಗ ಎಲ್ಲರಿಗೂ ನೆನಪಿಗೆ ಬರುವುದು ಹತ್ತಿಯ ಬಟ್ಟೆ. ಆದರೆ ಎಲ್ಲ ಸಮಯದಲ್ಲಿಯೂ ಹತ್ತಿಯ ಬಟ್ಟೆಯನ್ನು ಧರಿಸಲು ಮನಸ್ಸಾಗುವುದಿಲ್ಲ. ನಮಗೆ ಬೇಸಿಗೆಯಲ್ಲಿ ಹಿತವಿರಬೇಕು ಹಾಗೂ ನಾವು ಎಂದಿನಂತೆ ಸ್ಟೈಲಿಷ್‌ ಕಾಣಬೇಕು ಎಂಬ ಮನೋಭಾವದವರೇ ಹೆಚ್ಚು. ಯುವಕ ಯುವತಿಯರು ಸಾಕಷ್ಟು ಮಂದಿ ಬೇಸಿಗೆ ಪೂರ್ತಿ ಹತ್ತಿಯ ಬಟ್ಟೆ ಧರಿಸಲೂ ಮನಸ್ಸು ಮಾಡೋದಿಲ್ಲ. ಹಾಗಾಗಿ ಎಂಥಹ ಬಟ್ಟೆಗಳನ್ನು ಆಯ್ದುಕೊಳ್ಳುವುದರ ಮೂಲಕ ಬೇಸಿಗೆಯನ್ನು ಕಂಫರ್ಟ್‌ ಆಗಿ ಮತ್ತು ಸ್ಟೈಲಿಷ್‌ ಆಗಿಯೂ ಕಳೆಯಬಹುದು ಎಂಬುದಕ್ಕೆ ಒಂದು ಟಿಪ್ಸ್‌ ಇಲ್ಲಿದೆ ನೋಡಿ.

ಕಂಫರ್ಟೆಬಲ್‌ ಜಂಪ್‌ಸೂಟ್‌
ಟೀಶರ್ಟ್ಸ್:

ಟೀಶಟ್ಸ್‌ಗಳಲ್ಲಿ ಸ್ಪನ್‌ ಮತ್ತು ಕಾಟನ್‌ ಟೀ ಶಟ್ಸ್‌ ಆಯ್ಕೆ ಉತ್ತಮ. ಬೇಸಿಗೆಯಲ್ಲಿ ಜರ್ಸಿ ಟೀ ಶರ್ಟ್‌‌ಗಳನ್ನು ಧರಿಸಬೇಡಿ.

ಜೀನ್ಸ್‌:

ಬಿಸಿಲಿಗೆ ಹೋಗುವಾಗ ಸ್ಕಿನ್‌ ಫಿಟ್‌ ಜೀನ್ಸ್‌ಗಳನ್ನು ಧರಿಸಬೇಡಿ. ಹುಡುಗಿಯರಿಗೆ ಕಾರ್ಗೋ ಪ್ಯಾಂಟ್‌ ಮತ್ತು ತೆಳುವಾದ ಲೆಗ್ಗಿಂಗ್ಸ್‌ ಬೇಸಿಗೆಯಲ್ಲಿ ಕಂಫರ್ಟ್‌ ನೀಡುತ್ತದೆ.

ಬಣ್ಣಗಳ ಆಯ್ಕೆ:

ಗಾಢ ಬಣ್ಣದ ಉಡುಪುಗಳು ಉಷ್ಣವನ್ನು ಹೀರಿಕೊಳ್ಳುವುದರಿಂದ ಅಂತಹ ಬಣ್ಣಗಳ ಬಟ್ಟೆಗಳಿಂದ ಬೇಸಿಗೆಯಲ್ಲಿ ದೂರವಿಡಿ. ಕಪ್ಪು, ಕೆಂಪು, ಗಾಢ ನೀಲಿಯ ಬಣ್ಣಗಳನ್ನು ಅವಾಯ್ಡ್‌ ಮಾಡಿ. ಬಿಳಿ, ಗುಲಾಬಿ, ಆಕಾಶ ನೀಲಿ, ತಿಳಿಯಾದ ಗಿಳಿ ಹಸಿರು, ತಿಳಿ ಹಳದಿ ಬಣ್ಣದ ಬಟ್ಟೆಗಳು ಬೇಸಿಗೆಯಲ್ಲಿ ಆರಾಮ ನೀಡಬಲ್ಲವು.

ಹಗುರವಾದ ಫ್ಯಾಬ್ರಿಕ್ಸ್‌ ಬಟ್ಟೆಗಳನ್ನು ಆಯ್ದುಕೊಳ್ಳಿ. ಹತ್ತಿ, ಹತ್ತಿಮಿಶ್ರಿತ ರೇಷ್ಮೆ, ಲೆನಿನ್‌ ಮತ್ತು ಲಿಕ್ರಾನ್‌ ಮಾದರಿಯ ಬಟ್ಟೆಗಳು ಬೆವರನ್ನು ಹೀರಿಕೊಳ್ಳುತ್ತವೆ ಮತ್ತು ಬಟ್ಟೆಯ ರಂಧ್ರಗಳಿಂದ ಗಾಳಿ ಹಾದು ಹೋಗುತ್ತವೆ. ಹೀಗಾಗಿ ಬೆವರಿನಿಂದಾಗುವ ಇನ್‌ಫೆಕ್ಷನ್‌ನಿಂದ ದೂರವಿರಬಹುದು. ಪಾರ್ಟಿಗಳಿಗೆ ಹೋಗುವಾಗ ಕಾಟನ್‌ ಬಟ್ಟೆಗಳು ಸರಿಹೊಂದುವುದಿಲ್ಲವಾದ್ದರಿಂದ ಅಂತಹ ಸಮಯದಲ್ಲಿ ಲಿನಿನ್‌ ಬಟ್ಟೆಗಳನ್ನು ಆಯ್ದುಕೊಳ್ಳುವುದು ಉತ್ತಮ.
ಬೇಸಿಗೆಯಲ್ಲಿ ಹಿತ ನೀಡುವ ಕಾಫ್ಟಾನ್‌ ಡ್ರೆಸಸ್‌
ಕಾಲರ್ ಇರುವ ಶರ್ಟ್‌‌ಗಳನ್ನು ಧರಿಸಬೇಡಿ. ಸ್ಲೀವ್‌ಲೆಸ್‌ ಡ್ರೆಸ್‌ಸ್‌ ಬೇಸಿಗೆಯಲ್ಲಿ ಆರಾಮ ನೀಡುತ್ತವೆ. ಸ್ಪೆಗೆಟಿ ಸ್ಟ್ರಾಪ್ಸ್‌ ಅಥವಾ ಸ್ಟ್ರಾಪ್‌ಲೆಸ್‌ ಸ್ಪೆಗೆಟಿ ಕೂಡ ಬೇಸಿಗೆಯಲ್ಲಿ ಉತ್ತಮ.

ಲಾಂಗ್‌ ಸ್ಕರ್ಟ್‌ ಮತ್ತು ಶಾರ್ಟ್‌ ಸ್ಕರ್ಟ್‌‌ಗಳು ಕೂಡ ಬೇಸಿಗೆಯಲ್ಲಿ ಉತ್ತಮ. ಟೀ ಶರ್ಟ್‌ ಮತ್ತು ಲಾಂಗ್‌ ಸ್ಕರ್ಟ್‌ ಕೂಡ ಒಳ್ಳೆಯ ಲುಕ್‌ ನೀಡಬಲ್ಲವು. ಇದರ ಜೊತೆ ಸೂರ್ಯನ ಬೆಳಕಿನಿಂದ ರಕ್ಷಣೆ ನೀಡಬಲ್ಲ ಅಗವಾದ ಟೋಪಿಯನ್ನೂ ಧರಿಸಬಹುದು.

ಪಟಿಯಾಲ ಪ್ಯಾಂಟ್‌ ಮತ್ತು ಕುರ್ತಾ ಕೂಡ ಒಳ್ಳೆಯ ಲುಕ್‌ ನೀಡುವುದರ ಜೊತೆಗೆ ಆರಾಮ ನೀಡಬಲ್ಲವು. ಕಾಟನ್‌ ಸೆಲ್ವಾರ್‌ ಕಮೀಜ್‌ ಬೇಸಿಗೆಯಲ್ಲಿ ಉತ್ತಮ

ಕಾಫ್ಟಾನ್‌ ಮಾದರಿಯ ಟಾಪ್‌ ಇಂದಿನ ಹೊಸ ಟ್ರೆಂಡ್‌. ಇದು ದೇಹಕ್ಕೆ ಸಾಕಷ್ಟು ಆರಾಮ ನೀಡುವುದರ ಜೊತೆಗೆ ಹೊಸ ಲುಕ್‌ ನೀಡುತ್ತದೆ.
ಜಂಪ್‌ಸೂಟ್‌ ಕೂಡ ಗುಡ್‌ ಲುಕ್‌ ನೀಡುತ್ತದೆ. ಮನೆಯಲ್ಲಿರುವಾಗ ಜಂಪ್‌ಸೂಟ್‌ ಧರಿಸುವುದ ಅತೀ ಉತ್ತಮ. ಸಡಿಲವಾಗಿಯೂ ಫ್ಯಾಷನೇಬಲ್‌ ಆಗಿಯೂ ಇರುವ ಜಂಪ್‌ಸೂಟ್‌ ಇಂದಿನ ಹೊಸ ಟ್ರೆಂಡ್‌.

ಟ್ರೌಸರ್‌ ಮಾದರಿಯ ಪ್ಯಾಂಟ್‌ ಆಯ್ಕೆ ಉತ್ತಮ. ಇದು ಪೂರ್ತಿ ಫಾರ್ಮಲ್‌ ಮಾದರಿಯಲ್ಲಿಯೂ ಇರದೆ ಸ್ಕಿನ್‌ ಟೈಟ್‌ ಮಾದರಿಯಲ್ಲಿಯೂ ಇರದೆ ಒಳ್ಳೆಯ ಲುಕ್‌ ನೀಡುತ್ತದೆ.

ಆದಷ್ಟು ಇಲಾಸ್ಟಿಕ್‌ ಇರುವ ಬಟ್ಟೆಗಳನ್ನು ಬೇಸಿಗೆಯಲ್ಲಿ ಧರಿಸಬೇಡಿ. ದೇಹಕ್ಕೆ ಅಂಟಿಕೊಂಡಿರುವ ಇಲಾಸ್ಟಿಕ್‌ ಚರ್ಮವನ್ನು ಒತ್ತುವುದಲ್ಲದೆ, ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲವು.

ಬೇಸಿಗೆಯಲ್ಲಿ ನಿಮ್ಮ ಆಯ್ಕೆಯ ಬಟ್ಟೆಗಳಲ್ಲಿಯೇ ಸ್ವಲ್ಪ ಬದಲಾವಣೆ ತಂದು, ಸ್ಟೈಲಿಷ್‌ ಆಗಿಯೂ ಇರುವ ಆರಾಮದಾಯಕ ಬಟ್ಟೆಗಳನ್ನೇ ಧರಿಸಿ. ಹೀಗೆ ಬೇಸಿಗೆಗೂ ಒಂದು ಸ್ಟೈಲಿಷ್‌ ಲುಕ್‌ ಕೊಡಿ.

 

Author : ಅಮೃತಾ ಹೆಗಡೆ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited