Untitled Document
Sign Up | Login    
ಛೀ... ನಾಯಿ ವಿಸರ್ಜನೆ ಅನ್ನಬೇಡಿ.. ಅದಕ್ಕೂ ಇದೆ ಮೌಲ್ಯ !

ಪೂ ವೈಫೈ (ಚಿತ್ರಕೃಪೆ - creativity online)

ನಾಯಿ ಬಗ್ಗೆ ಯಾರಿಗಿಲ್ಲ ಪ್ರೀತಿ.. ಸಾಕಿದ ನಾಯಿ ಎಂದರೆ ಕೇಳಬೇಕೆ ? ಎತ್ತಿ ಮುತ್ತಾಡುವುದೇನು... ಕಾರಲ್ಲಿ ಕೂರಿಸಿಕೊಂಡು ಹೋಗುವುದೇನು ? ಅಬ್ಬಬ್ಬಾ... ಪ್ರೀತಿಯೋ ಪ್ರೀತಿ.. ಇದೇ ನಾಯಿ ವಿಸರ್ಜನೆ ಮಾಡಿದರೆ.. ? ಅದನ್ನು ಸ್ವಚ್ಛಗೊಳಿಸಬೇಕಾದರೆ ಗೊಣಗಾಡುತ್ತೇವೆ ಅಲ್ಲವೇ ? ಇನ್ನು ಕೆಲವರು ವಿಹಾರಕ್ಕೆಂದು ಪಾರ್ಕ್‌‌ಗಳಿಗೆ ತೆರಳುವಾಗ ಸಾಕು ನಾಯಿಯನ್ನು ಜೊತೆಗೆ ಕರೆದೊಯ್ಯುತ್ತಾರೆ. ಈ ಪರಿಪಾಠ ಜಗತ್ತಿನೆಲ್ಲೆಡೆ ಇದೆ. ಬೆಂಗಳೂರಿನಲ್ಲಂತೂ ಇಂಥವರ ಸಂಖ್ಯೆ ಸ್ವಲ್ಪ ಹೆಚ್ಚೇ ಸರಿ. ನಾಯಿ ಎಂದ ಮೇಲೆ ಕೇಳಬೇಕೆ ? ಎಲ್ಲೆಂದರಲ್ಲಿ ಕಾಲು ಎತ್ತುವುದು ಇಲ್ಲವೇ ಎರಡು ಕಾಲು ಅಗಲಿಸಿ ಕೂರುವುದು ಸಹಜ. ಹೀಗಾಗಿ ರಸ್ತೆಯಲ್ಲೆಲ್ಲಾ ಗಲೀಜು ಕಾಣುತ್ತೇವೆ. ಇಷ್ಟು ಮಾತ್ರ ಅಲ್ಲ.. ನಾವೇ ಎಲ್ಲೆಂದರಲ್ಲಿ ಉಗುಳುತ್ತೇವೆ.. ಮೂತ್ರ ವಿಸರ್ಜನೆ ಮಾಡುತ್ತೇವೆ. ಅಂದ ಮೇಲೆ ಇದೆಲ್ಲಾ ಸರ್ವೇ ಸಾಮಾನ್ಯ. ಮೂಗು ಮುರಿಯಬೇಕಾದ ಅವಶ್ಯಕತೆ ಇಲ್ಲ.

ಆದರೆ ಇಲ್ಲೊಂದು ಸುದ್ದಿ ಇದೆ. ನಾಯ ವಿಸರ್ಜನೆ(ಮಲ)ಗೆ ಹೈಟೆಕ್ ಮೌಲ್ಯ ಸಿಕ್ಕಿರೋ ಬಗ್ಗೆ. ಇದು ಸಾಕುನಾಯಿ ಮಾಲೀಕರಿಗೆ ಸಂತಸದ ಸುದ್ದಿ. ಪಾರ್ಕ್‌ನಲ್ಲಿ ನಾಯ ಮಲಮೂತ್ರ ಸಂಗ್ರಹಿಸಿ ಅಲ್ಲೇ ಪಕ್ಕದಲ್ಲಿ ಇದಕ್ಕಾಗಿಯೇ ಇರಿಸಿದ ಡಬ್ಬದಲ್ಲಿ ಅದನ್ನು ಹಾಕಿದರೆ ಸಾಕು. ಆ ಪಾರ್ಕಿನ ವ್ಯಾಪ್ತಿಯಲ್ಲಿ ಕೆಲವು ನಿಮಿಷಗಳ ಕಾಲ ವೈಫೈ ಫ್ರೀ.. ಅರ್ಥಾತ್ ಇಂಟರ್‌ನೆಟ್ ಉಚಿತ.

ಅಚ್ಚರಿಯಿಂದ ಹುಬ್ಬೇರಿಸಬೇಡಿ.. ಹೌದು ಇದು ವಿಚಿತ್ರವಾದರೂ ಸತ್ಯ. ಆ ಪಾರ್ಕ್‌ನಲ್ಲಿ ಎಲ್ಲಿ ಕಾಲಿಟ್ಟರೂ ಸಾಕು ನಾಯಿಗಳ ವಿಸರ್ಜನೆ ಕಾಲಿಗೆ ಅಂಟುವುದು ಗ್ಯಾರೆಂಟಿ. ಮನುಷ್ಯರ ವಾಯು ವಿಹಾರದ ಪಾರ್ಕ್‌ನಲ್ಲಿ ಸಾಕುನಾಗಳದ್ದೇ ಕಾರುಬಾರು. ಈ ಸಾಕುನಾಯಿಗಳು ಎಲ್ಲೆಂದರಲ್ಲಿ ಜನ ನಡೆದಾಡುವ ಜಾಗದಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದು ಸರ್ವೇಸಾಮಾನ್ಯ. ಅದನ್ನು ಸ್ವಚ್ಛ ಮಾಡುವ ಗೋಜಿಗೆ ಆ ಸಾಕುನಾಯಿ ಮಾಲೀಕರು ಹೋಗುತ್ತಿರಲಿಲ್ಲ. ಅನೇಕರು ಪಾರ್ಕಿಗೆ ನಾಗಳನ್ನು ಅದಕ್ಕೆಂದೇ ಕರೆದುಕೊಂಡು ಬರುತ್ತಿದ್ದರು.

ಇದರಿಂದ ಉಳಿದ ನಾಗರಿಕರಿಗೆ ಹೆಚ್ಚು ಸಮಸ್ಯೆ ಆಗುತ್ತಿತ್ತು. ಮೇಲೆ ನೋಡಿಕೊಂಡೋ ಅಥವಾ ಪ್ರಕೃತಿ ಸೌಂದರ್ಯ ಸವಿದುಕೊಂಡೋ ಹೆಜ್ಜೆ ಹಾಕಿದರೆ ಎಲ್ಲೋ ಒಂದು ಕಡೆ ನಾಯಿಯ ವಿಸರ್ಜನೆ ಮೇಲೆ ಕಾಲಿಡುವುದು ಗ್ಯಾರೆಂಟಿ. ಬಳಿಕ ಪಕ್ಕದಲ್ಲಿ ಇರುವ ಕಲ್ಲಿಗೋ ಇಲ್ಲ ಸಿಮೆಂಟಿನ ಕಟ್ಟೆಗೋ ಕಾಲನ್ನು ಉಜ್ಜಿ ಗಲೀಜು ಸ್ವಚ್ಛಗೊಳಿಸುವ ಸಾಹಸ ಮಾಡುವುದನ್ನೂ ಕಾಣುತ್ತೇವೆ.

ಸಣ್ಣ ಮಕ್ಕಳು ಐಸ್‌ಕ್ರೀಮ್ ತಿನ್ನ ಬೇಕಾದರೆ ಅಲ್ಲೇ ಪಕ್ಕದಲ್ಲಿ ಸಾಕುನಾಯಿ ಲವಿಸರ್ಜನೆ ಮಾಡಿದರೆ ಹೇಗಿರತ್ತೆ ? ಅಂಥದ್ದೊಂದು ದೃಶ್ಯವನ್ನು ಊಹಿಸುವುದಕ್ಕೂ ಕಷ್ಟ. ಆದರೆ ಇದು ವಾಸ್ತವ. ಈ ಸಮಸ್ಯೆಯನ್ನು ಗಮನಿಸಿದ ಇಂಟರ್‌ನೆಟ್ ಸೇವೆ ಒದಗಿಸುವ ಕಂಪೆನಿಯೊಂದು 'ಪೂ ವೈಫೈ' ಯೋಜನೆ ಸಿದ್ಧಪಡಿಸಿತು. 'ಪೂ' ಅಂದರೆ ನಾಯ ವಿಸರ್ಜನೆ(ಮಲ). ವೈಫೈ ಎಲ್ಲರಿಗೂ ಗೊತ್ತಿರುವಂಥದ್ದು.. ನಿಸ್ತಂತು ಅಂತರ್ಜಾಲ ಸೇವೆ.

ಏನಿದು 'ಪೂ ವೈಫೈ' ?

ಪಾರ್ಕ್ ಮೊದಲಾದ ಸಾರ್ವಜನಿಕ ಸ್ಥಳಗಳಿಗೆ ಸಾಕುನಾಯಿಗಳನ್ನು ಕರೆತರುವುದು ಸುಲಭ. ಆದರೆ, ಆ ನಾಯಿಗಳು ಎಲ್ಲೆಂದರಲ್ಲಿ ವಿಸರ್ಜನೆ ಮಾಡಿದರೆ ಅದನ್ನು ಸ್ವಚ್ಛಗೊಳಿಸುವುದು ಬಹಳ ಕಷ್ಟ. ಸಾರ್ವಜನಿಕ ಸ್ಥಳಗಳಲ್ಲಿ ಅದರಲ್ಲೂ ಪಾರ್ಕ್‌ನ ಯಾವುದೇ ಮೂಲೆಗೆ ಹೋದರೂ 'ಲ್ಯಾಂಡ್ ಮೈನ್' ರೀತಿ ಸಾಕುನಾಯಿ ವಿಸರ್ಜನೆ ಕಾಣಸಿಗುತ್ತವೆ. ಸಾಕುನಾಯಿಗಳ ಮಾಲೀಕರೇ ಇದನ್ನು ಸ್ವಚ್ಛಗೊಳಿಸಬೇಕು. ಏನು ಮಾಡಬಹುದು ? ಹೇಗೆ ಅವರನ್ನು ಈ ಕೆಲಸ ಮಾಡುವಂತೆ ಪ್ರೇರೇಪಿಸುವುದು ಎಂದು ಚಿಂತನೆ ನಡೆಸಿತ್ತು ಆ ಇಂಟರ್‌ನೆಟ್ ಸೇವೆ ಒದಗಿಸುವ ಕಂಪನಿ.
ಸಾಕುನಾಯಿಗಳ ವಿಸರ್ಜನೆಯಿಂದ ಹೆಚ್ಚು ಗಲೀಜು ಆಗಿರುವ ಪಾರ್ಕ್ ಒಂದನ್ನು ಇದಕ್ಕಾಗಿ ಆಯ್ಕೆ ಮಾಡಿದ್ದೂ ಅಲ್ಲದೇ ಅಲ್ಲಿ ಈ ಗಲೀಜು ತುಂಬುವುದಕ್ಕೆ ಪ್ರತ್ಯೇಕ ಡಬ್ಬಾಗಳನ್ನು ಇರಿಸಲಾಯಿತು. ಮಾತ್ರವಲ್ಲದೇ ಆ ಡಬ್ಬಾಕ್ಕೆ ತೂಕದ ಯಂತ್ರವನ್ನೂ ಅಳವಡಿಸಲಾಯಿತು. ಜೊತೆಗೆ ಅದಕ್ಕೆ ವೈಫೈ ಕನೆಕ್ಷನ್ ಕೂಡಾ ಕೊಡಲಾಯಿತು. ಅದು ಕೂಡಾ ಅದೇ ಪಾರ್ಕಿನ ಮರಗಳ ಮೇಲೆ ಎಲುಬಿನ ಆಕಾರದ ತುಂಡುಗಳನ್ನು ಇರಿಸಿ ವೈಫೈ ಸಂಪರ್ಕ ಒದಗಿಸಲಾಗಿದೆ. ಆದರೆ, ಈ ವೈಫೈ ಕೆಲಸ ಮಾಡುವುದು ಯಾವಾಗ ಮತ್ತು ಹೇಗೆ ಗೊತ್ತಾ ?

ಇದಕ್ಕಾಗಿ ಸಾರ್ವಜನಿಕರು ಪ್ರತ್ಯೇಕ ದುಡ್ಡು ಪಾವತಿ ಮಾಡಬೇಕಿಲ್ಲ. ಮತ್ತೇನು ಮಾಡಬೇಕು ಅಂದರೆ, ಈ ಸಾಕುನಾಯಿ ಮಾಲೀಕರು ತಮ್ಮ ನಾಯಿಯ ವಿಸರ್ಜನೆಯನ್ನು ತಂದು ಈ ಪ್ರತ್ಯೇಕ ಡಬ್ಬಾದಲ್ಲಿ ಹಾಕಿದರಾಯಿತು.

 

Author :  

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited