Untitled Document
Sign Up | Login    
ಶಾಪಿಂಗ್‌ ಹವ್ಯಾಸ

ಇಂದಿನ ಜಮಾನದ ಶಾಪಿಂಗ್‌ ಹವ್ಯಾಸ

ಶಾಪಿಂಗ್‌ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ...ಸಂಬಳ ಬಂದ ಮೊದಲ ವೀಕೆಂಡ್‌ ಏನಾದರೂ ಶಾಪಿಂಗ್‌ ಮಾಡಿದರೆ ಮನಸಿಗೆ ಅದೇನೋ ಸಂತೋಷ ಎಂಬ ಮನಸ್ಥಿತಿಯವರೇ ಇತ್ತೀಚೆಗೆ ಹೆಚ್ಚು. ಅದೂ ಮೆಟ್ರೋಪಾಲಿಟನ್‌ ಸಿಟಿಯ ಜನರಿಗೆ ಶಾಪಿಂಗ್ ಒಂಥರಾ ಕ್ರೇಜ್‌ ಅಂದರೂ ತಪ್ಪಿಲ್ಲ.

ಇಂದಿನ ಮಾಡರ್ನ್‌ ಲೈಫ್‌ಸ್ಟೈಲ್‌ನಲ್ಲಿ ತಿಂಗಳಿಗೊಮ್ಮೆಯಾದರೂ ಗೆಳೆಯರೊಂದಿಗೋ, ಆಪ್ತರೊಂದಿಗೋ ಅಥವಾ ಬಾಯ್‌ಫ್ರೆಂಡ್‌, ಗರ್ಲ್‌ಫ್ರೆಂಡ್‌, ಗಂಡ, ಹೆಂಡತಿಯೊಂದಿಗೋ ಶಾಪಿಂಗ್‌ ಮಾಡುವುದು ಇಂದಿನ ಜಮಾನದ ಯುವಕ ಯುವತಿಯರ ಪದ್ಧತಿ.

ಒತ್ತಡದ ಜೀವನ ಪದ್ಧತಿಯಲ್ಲಿ ಶಾಪಿಂಗ್‌ ಮನಸ್ಸಿಗೆ ಒಂದಿಷ್ಟು ಉಲ್ಲಾಸ ನೀಡಬಲ್ಲದು ಎಂಬುದು ಹಲವರ ಅಭಿಪ್ರಾಯ. ವಾರವಿಡೀ ದುಡಿದು ಕಷ್ಟಪಟ್ಟ ಮನಸ್ಸು ಶಾಪಿಂಗ್‌ನಿಂದ ರಿಲ್ಯಾಕ್ಸ್‌ ಆಗುವುದಂತೂ ಸುಳ್ಳಲ್ಲ.

ಶಾಪಿಂಗ್‌ ಪ್ರಿಯರಿಂದ ತುಂಬಿರುವ ಶಾಪಿಂಗ್‌ ಮಾಲ್‌
ವಾರದ ಕೊನೆಯಲ್ಲಿ ನಮಗೆ ಇಷ್ಟವಾದ ಡ್ರೆಸ್ ಧರಿಸಿ, ನಮ್ಮ ಆಪ್ತರೊಂದಿಗೆ ನಮಗೆ ಇಷ್ಟವಾದದ್ದನ್ನು ಕೊಳ್ಳಲು ತೆರಳುವುದಿಂದ ಮನಸ್ಸಿಗೆ ಮತ್ತಷ್ಟು ಹಿತವೆನಿಸಲು ಸಾಧ್ಯ.

ಇಷ್ಟವಾದ ತಿನಿಸು, ಉಡುಪು, ಸೌಂದರ್ಯ ಸಾಧನಗಳು, ಮೊಬೈಲ್‌, ಕಾರು, ಬೈಕ್‌ ಅದೇನೇ ಇರಬಹುದು.. ಅದನ್ನು ನಾವು ಕೊಳ್ಳಲು ಹೊರಡುತ್ತಿದ್ದೇವೆ ಅಂದರೆ ಮನಸಿನಲ್ಲಿರುವ ಉತ್ಸಾಹವೇ ಬೇರೆ... ಅಲ್ಲವೇ..? ಈ ಉತ್ಸಾಹವನ್ನು ಆಗಾಗ ಅನುಭವಿಸುತ್ತಿದ್ದರೆ, ಜೀವನ ಸುಂದರ ಎಂಬುದು ಹಲವರ ಅನುಭವ ಕೂಡ.

ಪ್ರೀತಿ ಪಾತ್ರರೊಂದಿಗೆ, ಕುಟುಂಬದ ಸದಸ್ಯರೊಂದಿಗೆ ಸಂತಸದಿಂದ ಕಳೆದ ತೃಪ್ತಿಯೇ ಮತ್ತೆ ವಾರಪೂರ್ತಿ ದುಡಿಯಲು ಉತ್ಸಾಹ ತುಂಬುತ್ತದೆ. ಇದೇ ಕಾರಣಕ್ಕೆ ಈಗೀಗ ನಗರಗಳಲ್ಲಿ ಶಾಪಿಂಗ್‌ ಕ್ರೇಜ್‌ ಹೆಚ್ಚುತ್ತಿದೆ.
ಶಾಪಿಂಗ್‌ ಹವ್ಯಾಸ...
ಶಾಪಿಂಗ್‌ ಮಾಡುವುದರಿಂದ ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ ಎಂಬುದು ನಿಜವಾದರೂ.. ಶಾಪಿಂಗ್‌ ಒಂದು ಹವ್ಯಾಸವಾಗಿದ್ದರೆ ಮಾತ್ರ ಚೆನ್ನ. ಹಾಗಾಗಿ ಶಾಪಿಂಗ್‌ಗೆ ಎಡಿಕ್ಟ್‌ ಆಗಬೇಡಿ. ಶಾಪಿಂಗ್ ಮಾಡಲಿಲ್ಲವೆಂದರೆ, ಖಿನ್ನರಾಗಬೇಡಿ..ಏಕೆಂದರೆ ಅಮೇರಿಕಾದ ಒಂದು ಸಮೀಕ್ಷೆ ಪ್ರಕಾರ ಈಗೀಗ ಶಾಪಿಂಗ್‌ ಹವ್ಯಾಸಕ್ಕೆ ಎಡಿಕ್ಟ್‌ ಆಗಿರುವವರ ಸಂಖ್ಯೆ ಬೆಳೆಯುತ್ತಿದೆ. ಶಾಪಿಂಗ್‌ಗೆ ಎಡಿಕ್ಟ್‌ ಆಗಿರುವವರೆಲ್ಲ ವಾರಕ್ಕೊಂದು ಬಾರಿಯಾದರೂ, ತಮಗೆ ಅಗತ್ಯವಿರಲಿ..ಅಥವಾ ಇಲ್ಲದಿರಲಿ.. ಏನಾದರೂ ಖರೀದಿಸುತ್ತಿರುತ್ತಾರಂತೆ. ತಮಗೆ ಅವಶ್ಯವಿಲ್ಲದ ವಸ್ತುಗಳಿಗೂ ಅನಾವಶ್ಯಕವಾಗಿ ಸಾಕಷ್ಟು ಹಣ ಸುರಿಯುವುದು ಮಾನಸಿಕ ಸಮಸ್ಯೆ ಎಂದು ಸಮೀಕ್ಷೆ ತಿಳಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ಹೆಚ್ಚುತ್ತಿರುವ ಶಾಪಿಂಗ್‌ ಕ್ರೇಜ್‌ಗೆ ಪೂರಕವಾಗಿ ನಗರಗಳಲ್ಲಿ ಶಾಪಿಂಗ್ ಮಾಲ್‌ಗಳೂ ತೆಲೆ ಎತ್ತುತ್ತಿದ್ದು, ಕೊಳ್ಳುವವರಿಗೆ ಹೊಸ ಹೊಸ ಬಳಕೆಯ ವಸ್ತುಗಳನ್ನು ಪರಿಚಯಿಸುತ್ತಿವೆ. ಈಗೀಗಂತೂ ಅನ್‌ಲೈನ್‌ ಶಾಪಿಂಗ್‌ಗಳೂ ಕೂಡ ಜನರನ್ನು ಆಕರ್ಷಿಸುತ್ತಿವೆ. ಮನೆಯಲ್ಲಿಯೇ ಕುಳಿತು, ಕಂಪ್ಯೂಟರ್ ಮಾಂತ್ರಿಕ ತೋರಿಸುವ ವಿವಿಧ ವಸ್ತುಗಳನ್ನು ಆರ್ಡರ್ ಮಾಡಿ ಜನರು ಕೊಳ್ಳುತ್ತಿದ್ದಾರೆ.
ಮಾನವ ಆಧುನಿಕನಾಗುತ್ತಾ ಹೋದಂತೆ...ಅದೆಷ್ಟೋ ಹೊಸ ಹೊಸ ಹವ್ಯಾಸಗಳನ್ನು ಜೀವನ ಶೈಲಿಯಾಗಿ ಪರಿವರ್ತಿಸಿಬಿಡುತ್ತಾನೆ ಎಂಬುದಕ್ಕೆ ಈ ಶಾಪಿಂಗ್‌ ಕ್ರೇಜ್‌ ಒಂದು ಒಳ್ಳೆಯ ಉದಾಹರಣೆ.

ಅದೇನೇ ಇರಲಿ.. ದುಡ್ಡಿರುವವರು ಶಾಪಿಂಗ್‌ ಮಾಡಿ ಸಂತಸ ಪಟ್ಟರೆ ಏನು ನಷ್ಟ ಹೇಳಿ..? ಅಲ್ಲವೆ..? ಶಾಪಿಂಗ್‌ ಮಾಡಿ.. ಖುಷಿಯಾಗಿರಿ ಅನ್ನೋದು ನಮ್ಮ ಹಾರೈಕೆ ಅಷ್ಟೆ.

 

Author : ಅಮೃತಾ ಹೆಗಡೆ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited