Untitled Document
Sign Up | Login    
ಪುರುಷರಿಗಾಗಿ ಫ್ಯಾಷನ್‌ ಟಿಪ್ಸ್‌

ಪುರುಷರಿಗಾಗಿ ಫ್ಯಾಷನ್‌ ಟಿಪ್ಸ್‌

ಸ್ತ್ರೀಯರು ಮಾತ್ರ ಅಲಂಕಾರ ಪ್ರಿಯರು ಎಂಬ ಕಾಲ ಮುಗಿದು ಹೋಯ್ತು. ಈಗ ಪುರುಷರೂ ಕೂಡ ಅಲಂಕಾರ ಪ್ರಿಯರೇ ಆಗಿದ್ದಾರೆ. ಇಂದಿನ ಜಮಾನಾದಲ್ಲಿ ಹುಡುಗರು, ಹುಡುಗಿಯರು ಇಬ್ಬರೂ ಕೂಡ ಫ್ಯಾಷನ್‌ನತ್ತ ಒಲವು ತೋರುತ್ತಿದ್ದಾರೆ. ಬರುವ ಹೊಸ ಹೊಸ ಟ್ರೆಂಡ್‌ಗಳಿಗೆ ತಮ್ಮನ್ನು ತಾವು ಒಗ್ಗಿಸಿಕೊಳ್ಳುತ್ತಿದ್ದಾರೆ. ಇಂದಿನ ಯುವಕರು ಕೂಡ ತಮ್ಮ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳುವುದರತ್ತ ಹೆಚ್ಚು ಗಮನಹರಿಸುತ್ತಿದ್ದಾರೆ. ಹೀಗಾಗಿ ಬದಲಾಗುವ ಟ್ರೆಂಡ್‌ಗಳಿಗೆ, ಬಂದಿರುವ ಬ್ರಾಂಡ್‌ಗಳಿಗೆ ಹೆಚ್ಚು ಹೆಚ್ಚು ಸ್ಪಂದಿಸುತ್ತಿದ್ದಾರೆ. ತಮ್ಮ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳಲು ಕಾತುರರಾಗಿರುವ ಯುವಕರಿಗೆ ಡ್ರೆಸ್ಸಿಂಗ್‌ ಸೆನ್ಸ್‌ಕೂಡ ಅಷ್ಟೇ ಪ್ರಮುಖವಾಗಿರುತ್ತದೆ...

ಆಕರ್ಷಕವಾಗಿ ಕಾಣಬೇಕೆಂಬ ಮನಸ್ಸಿರುವ ಹುಡುಗರಿಗೆ ಇಲ್ಲಿದೆ ಕೆಲವು ಟಿಪ್ಸ್‌:-

ಸಡಿಲವಾದ ಅಂಗಿಯನ್ನು ಧರಿಸುವುದಕ್ಕಿಂತ.. ದೇಹದ ಅಳತೆಗೆ ಸರಿಯಾಗಿರುವ ಅಂಗಿಯನ್ನು ತೊಟ್ಟುಕೊಳ್ಳಿ. ಅದು ಅತೀಯಾಗಿ ಬಿಗಿಯಾಗಿದ್ದು ದೇಹಕ್ಕೆ ಅಂಟಿಕೊಳ್ಳುವಂತೆಯೂ ಇರಕೂಡದು.

ಸರಳವಾಗಿಯೇ ಇದ್ದುಕೊಂಡು ಸೊಗಸಾಗಿ ಕಾಣಲು ಪ್ರಯತ್ನಿಸಿ. ರಾಕ್‌ ಸ್ಟಾರ್‌ಗಳಂತೆ ಅತಿಯಾಗಿ ವೇಷ ಧರಿಸದೇ, ಸರಳವಾಗಿರಿ. ಮೂರಕ್ಕಿಂತ ಹೆಚ್ಚು ಬಣ್ಣ ನಿಮ್ಮ ಅಂಗಿಯ ಮೇಲೆ ಇರದಿರಲಿ. ಪ್ಯಾಂಟ್‌ಗೆ ನಿಮ್ಮ ಅಂಗಿ ಸೂಟ್‌ ಆಗುವಂತಿರಲಿ.

ನಿಮ್ಮ ಬೆಲ್ಟ್‌ ಹಾಗೂ ವಾಚ್‌ ಸ್ಟೈಲಿಶ್‌ ಆಗಿರಲಿ. ನೀವು ಧರಿಸುವ ಕ್ಯಾಶುವಲ್ಸ್‌, ಫಾರ್ಮಲ್ಸ್‌ ಮತ್ತು ಜೀನ್ಸ್‌ಗೆ ಸರಿಹೊಂದುವಂತೆ ವಾಚ್‌ನ್ನೂ ಧರಿಸಿರಿ. ಹೆಚ್ಚು ಹೆಚ್ಚು ಆಭರಣಗಳನ್ನೂ ಧರಿಸದಿರಿ. ಆಭರಣ ಧರಿಸುವ ಇರಾದೆ ಇರುವವರು, ಕುತ್ತಿಗೆಗೆ ತೆಳ್ಳಗಿನ ಸಣ್ಣ ಹಾರ, ಕೈಗೆ ಆಡಂಬರವಿಲ್ಲದ ಬ್ರಾಸ್‌ಲೈಟ್‌ ಧರಿಸಿರಿ. ಆಸಕ್ತಿ ಇದ್ದವರು ಒಂದು ಕಿವಿಗೆ ಸ್ಟಬ್ಸ್‌ ಹಾಕಿಕೊಳ್ಳಬಹುದು.
ಕ್ಯಾಶುವಲ್ಸ್‌ ಶರ್ಟ್ಸ್‌ ಧರಿಸಲು ಬೇಸರ ಪಡದಿರಿ. ಕೆಲವೇ ಬಣ್ಣಗಳ ಶರ್ಟ್ಸ್‌‌ಗೆ ಅಂಟಿಕೊಂಡಿರದೆ, ವಿಶೇಷ ಬಣ್ಣದ ಶರ್ಟ್ ಧರಿಸಿ ಕ್ಯಾಶುವಲ್ಸ್‌ಲ್ಲೂ ವಿಶೇಷವಾಗಿ ಕಾಣಲು ಪ್ರಯತ್ನಿಸಿ

ಆಯಾ ಸೀಸನ್‌ಗೆ ತಕ್ಕಂತೆ ಜಾಕೀಟ್‌, ಕೋಟ್‌, ಸ್ವೆಟರ್‌ಗಳನ್ನು ಧರಿಸಿರಿ. ಶರ್ಟ್ಸ್ ಮೇಲೆ ಜಾಕೀಟ್‌ ಧರಿಸುವ ಮೂಲಕ ವಿಶೇಷವಾಗಿ ಕಾಣಿ.

ಎಂದೂ ಶಾಪಿಂಗ್‌ಗೆ ಒಬ್ಬರೇ ಹೋಗಬೇಡಿ, ನಿಮಗೆ ಒಳ್ಳೆಯ ಉಡುಗೆಯನ್ನು ಸಲಹೆ ನೀಡುವವರನ್ನು ಜೊತೆಗೆ ಕರೆದೊಯ್ದು ಉಡುಗೆಗಳನ್ನು ಆರಿಸಿಕೊಳ್ಳಿ.

ಉಡುಗೆಗೆ ತಕ್ಕ ಶೂ ಹಾಕಿ. ಶೂ ಕ್ಲೀನ್‌ ಆಗಿರುವಂತೆ ನೋಡಿಕೊಳ್ಳಿ. ಮಣ್ಣು ಕೆಸರು ಕೂತು ಶೂ ಕಳೆಗುಂದಂತೆ ಆಗಾಗ ಪಾಲಿಶ್‌ ಮಾಡುತ್ತಿರಿ. ಫಾರ್ಮಲ್ಸ್‌ ಜೊತೆ ಸ್ಯಾಂಡಲ್ಸ್‌, ಕ್ಯಾನ್‌ವಾಸ್‌ ಫ್ಲಾಟ್‌ ಶೂಸ್‌ ಹಾಕಿ.

ಯಾವಾಗಲೂ ಒಂದೇ ಬ್ರಾಂಡ್‌ನ ಉಡುಗೆಗಳಿಗೆ ಅಂಟಿಕೊಳ್ಳದಿರಿ. ನಿಮಗೆ ಒಪ್ಪುವ ಡಿಸೈನ್‌, ನಿಮಗೆ ತಕ್ಕ ಸ್ಟೈಲ್‌ ಬೇರೆ ಯಾವ ಬ್ರಾಂಡ್‌ನಲ್ಲಿ ದೊರೆತರೂ ಅದನ್ನು ಖರೀದಿಸಿ.

ನಿರಂತರವಾಗಿ ನಿಮ್ಮ ಇಮೇಜ್‌ನ್ನು ವೃದ್ಧಿಸಿಕೊಳ್ಳಿ. ನಿಮ್ಮ ಔದ್ಯೋಗಿಕ ಪರಿಸರಕ್ಕೆ ತಕ್ಕಂತೆ, ನಿಮ್ಮ ವಯಸ್ಸಿಗೆ ತಕ್ಕಂತೆ, ಶಿಕ್ಷಣಕ್ಕೆ ತಕ್ಕಂತೆ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ.

ನೀವು ನಿಮ್ಮ ಡ್ರೆಸ್‌ ಸೆನ್ಸ್ ಬಗ್ಗೆ ಮತ್ತು ನಿಮ್ಮ ಉಡುಗೆಯ ಶೈಲಿಯ ಬಗ್ಗೆ ಪ್ರಾಮಾಣಿಕ ಸಲಹೆ ಪಡೆಯಿರಿ. ನಿಮ್ಮ ಆಪ್ತರಲ್ಲಿ ಆಗಾಗ ಸಲಹೆ ಪಡೆಯುತ್ತಿರಿ.

ನಿಮ್ಮ ಮುಖಕ್ಕೆ ಹೊಂದುವಂತೆ ಹಾಗೂ ಔದ್ಯೋಗಿಕ ಪರಿಸರಕ್ಕೆ ಒಪ್ಪುವಂತಹ ಕೇಶ ವಿನ್ಯಾಸ ಮಾಡಿಕೊಳ್ಳಿ. ವಿಭಿನ್ನ ಶೈಲಿಯ ಹೇರ್ ಸ್ಟೈಲ್‌ ಮಾಡಲು ಹೋಗಿ ಇಮೇಜ್‌ ಹಾಳು ಮಾಡಿಕೊಳ್ಳದಿರಿ.

 

Author : ಅಮೃತಾ ಹೆಗಡೆ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited