Untitled Document
Sign Up | Login    
ಕ್ಲಾಸ್ ಎಡ್ಜ್ ಎಂಬ ಹೊಸ ಕಲಿಕಾ ಮಾದರಿ

ಸಾಂದರ್ಭಿಕ ಚಿತ್ರ

'ದೇಶ ಸುತ್ತು ಇಲ್ಲಾ ಕೋಶ ಓದು’ ಎಂಬ ಮಾತಿದೆ. ಈ ಮಾತು ಇಂದಿನ ಜನರೇಷನ್ ಗೆ ಸ್ವಲ್ಪ ಅಪವಾದ ಎಂದೆನಿಸುತ್ತದೆ. ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ, ಮಾನವನ ಬೌದ್ಧಿಕ ಮತ್ತೆಗೆ ಪೈಪೋಟಿ-ಸ್ಪರ್ಧೆ ನೀಡುವ ಇಂದಿನ ದಿನಗಳಲ್ಲಿ ಕೋಶ ಓದುವುದರ ಜೊತೆಗೆ ದೇಶವನ್ನೂ ಸುತ್ತಲೇ ಬೇಕು. ಆಧುನಿಕತೆಯೊಂದಿಗೆ ತಾಂತ್ರಜ್ನಾನ, ಶಿಕ್ಷಣ, ಕ್ರಿಯೆಟಿವಿಟಿ ಜಾಗತಿಕರಣದತ್ತ ನಾಗಾಲೋಟ ನಡೆಸುತ್ತಿರುವಾಗ ಇಂದಿನ ಪೀಳಿಗೆಗೆ ಜ್ನಾನ ಭಂಡಾರ, ಕೌಶಲ್ಯ ಎಷ್ಟಿದ್ದರೂ ಕಡಿಮೆಯೇ.

ಇಂದಿನ ಮಕ್ಕಳಿಗೆ ಶಿಕ್ಷಣದಲ್ಲಿ ಹೊಸತನದ ಅವಶ್ಯಕತೆಯಿದೆ. ಮಾತ್ರವಲ್ಲ ವಿದ್ಯಾರ್ಥಿಗಳಿಗೆ ಪಾಠ ಬಹುಬೇಗನೆ ಅರ್ಥವಾಗುವುದರೊಂದಿಗೆ ಮನದಲ್ಲಿ ಅಚ್ಚಳಿಯದಂತಿರಬೇಕು. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಇತಿಹಾಸದ ಘಟನಾವಳಿಗಳ ಬಗ್ಗೆ, ವಿಜ್ನಾನದ ವಿಷಯಗಳ ಬಗ್ಗೆ, ಗಣಿತ ಪಾಠಗಳ ಬಗ್ಗೆ ದೃಶ್ಯ ಮಾಧ್ಯಮದ ಮೂಲಕ ಅದರಲ್ಲೂ 3ಡಿ ದೃಶ್ಯಾವಳಿ ಮೂಲಕ ಹೇಳಿಕೊಟ್ಟರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ....? ಕಲ್ಪನೆ ಅದ್ಭುತವಾಗಿದೆ ಎನಿಸುತ್ತಿದೆಯೇ....ಹೌದು. ಇಷ್ಟೆಲ್ಲ ಪೀಠಿಕೆಗೆ ಕಾರಣವೇನೆಂದರೆ ಟಾಟಾ ಸಮೂಹದ ’ಟಾಟಾ ಇಂಟ್ರ್ಯಾಕ್ಟಿವ್ ಸರ್ವಿಸಸ್’ (ಟಿಐಎಸ್) ಸಂಸ್ಥೆ ’ಕ್ಲಾಸ್ ಎಡ್ಜ್’ ಎಂಬ ವಿಶಿಷ್ಟವಾದ ಕಲಿಕಾ ಮಾದರಿಯನ್ನು ಅಭಿವೃದ್ಧಿಪಡಿಸಿದೆ.

ತರಗತಿಗಳಲ್ಲಿ ಸಾಂಪ್ರದಾಯಿಕ ಪಾಠ ಮಾಡುವುದರೊಂದಿಗೆ ದೃಶ್ಯಾವಳಿಗಳ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚು ಅರ್ಥಪೂರ್ಣವಾಗುವಂತೆ ವಿವರಿಸುವ ಉದ್ದೇಶದಿಂದ ಈ ನೂತನ ಕಲಿಕಾ ಮಾದರಿಯನ್ನು ಟಾಟಾ ಇಂಟ್ರ್ಯಾಕ್ಟಿವ್ ಸರ್ವಿಸಸ್ ಅಭಿವೃದ್ಧಿಗೊಳಿಸಿದೆ. ಪಠ್ಯ ಪುಸ್ತಕದಲ್ಲಿರುವ ಸಂಗತಿಗಳನ್ನು ದೃಶ್ಯಾವಳಿಗಳ ಮೂಲಕ ಹೇಳಿಕೊಡುವುದರಿಂದ ಕಲಿಕೆಯತ್ತ ವಿದ್ಯಾರ್ಥಿಗಳ ಗಮನ ಸೆಳೆಯುವುದರೊಂದಿಗೆ ಮಕ್ಕಳ ಯೋಚನಾ ಕ್ರಮ ಮತ್ತು ಬೌದ್ಧಿಕ ಸಾಮರ್ಥ್ಯವೂ ಹೆಚ್ಚುತ್ತದೆ.
ಚಿಕ್ಕಮಕ್ಕಳಿಗೆ ಅಂದರೆ, 6 ವರ್ಷಕ್ಕಿಂತ ಕಡಿಮೆ ವರ್ಷದ ಮಕ್ಕಳಿಗೆ ಇಂಗ್ಲೀಷ್, ಗಣಿತ, ಇತಿಹಾಸಕ್ಕೆ ಸಂಬಂಧಿಸಿದ ವಿಷಯಗಳನ್ನು ಕಲಿಸಲು ಸಂಸ್ಥೆ ಪ್ರತ್ಯೇಕ ದೃಶ್ಯಾವಳಿಗಳನ್ನು ರೂಪಿಸಿದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೂ ಪ್ರತ್ಯೇಕ ಕಲಿಕಾ ಮಾದರಿಗಳನ್ನು ಸಂಸ್ಥೆ ಬೆಳಕಿಗೆ ತಂದಿದೆ.

ಈಗ ಸಿಂಧೂ ಅಥವಾ ಮೊಹೆಂಜೋದಾರೊ ನಾಗರಿಕತೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವಾಗ ಪುಸ್ತಕದಲ್ಲಿರುವುದನ್ನು ವಿವರಿಸಬಹುದಷ್ಟೆ. ಆದರೆ ಅದನ್ನೇ ಈ ಕಲಿಕಾ ಮಾದರಿಯಲ್ಲಿ 3ಡಿ ದೃಶ್ಯಾವಳಿಗಳ ಮೂಲಕ ನಾಗರಿಕತೆಯನ್ನು ಪರಿಚಯಿಸಲಾಗುತ್ತದೆ. ಇದರಿಂದ ಕಡಿಮೆ ಗ್ರಹಿಕಾಶಕ್ತಿಯಿರುವ ಮಕ್ಕಳಿಗೆ ಹೆಚ್ಚು ಪರಿಣಾಮಕಾರಿಯಾಗುವುದರ ಜೊತೆಗೆ ಕಲಿಕೆ ಸುಲಭವೆನಿಸುತ್ತದೆ.

ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ 600ಕ್ಕೂ ಹೆಚ್ಚು ತಜ್ನರ ಸಹಾಯದಿಂದ ಈ ಕಲಿಕಾ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆಯಂತೆ. ಅಲ್ಲದೇ ಇದನ್ನು ಅಳವಡಿಸಲು ಅಗತ್ಯವಿರುವ ಶಿಕ್ಷಣ ಸಂಸ್ಥೆ ಹಾಗೂ ಶಾಲೆಗಳಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಟಿಐಎಸ್ ಪೂರೈಸುತ್ತದೆ ಎಂಬುದು ವಿಶೇಷ.

ಈ ರೀತಿಯ ಕಲಿಕಾ ಮಾದರಿ ಮೂಲಕ ಪಾಠ ಮಾಡಲು ಶಿಕ್ಷಕರಿಗೆ ಮೊದಲು ಕಲಿಕಾ ಮಾದರಿ ಬಗ್ಗೆ ಸ್ವಲ್ಪ ಜ್ನಾನ ಅವಶ್ಯವಾಗಿರುತದೆ. ಶಿಕ್ಷಣದ ಬಹುಭಾಗವನ್ನು ದೃಶ್ಯಾವಳಿ ಮೂಲಕ ವಿವರಿಸಬಹುದು. ಆದರೆ ಕೆಲವೊಂದು ವಿಷಯಗಳನ್ನು ದೃಶ್ಯಾವಳಿ ಮೂಲಕ ವಿವರಿಸಲಾಗದು.

ಅದೇನೇ ಇರಲಿ. ಒಟ್ಟಿನಲ್ಲಿ ಶಾಲೆಗಳಲ್ಲಿ ಪಠ್ಯ ವಿಷಯಗಳನ್ನು ದೃಶ್ಯ ಮಾಧ್ಯಮದ ಮೂಲಕ ವಿವರಿಸುವುದರಿಂದ ಪರಿಣಾಮಕಾರಿಯಾಗಿರುವುದರೊಂದಿಗೆ ವಿದ್ಯಾರ್ಥಿಗಳಿಗೆ ಸುಲಭದ ಕಲಿಕೆಯಾಗುತ್ತದೆ ಎಂಬುದು ಸುಳ್ಳಲ್ಲ.

 

Author : ಚಂದ್ರಲೇಖಾ ರಾಕೇಶ್

More Articles From Education & Career

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited