Untitled Document
Sign Up | Login    
ಶೃಂಗಾರ ಪ್ರಿಯರಿಗೆ ಇಲ್ಲಿದೆ ಸರಳ ಸಲಹೆ


ಶೃಂಗಾರವನ್ನು ಇಷ್ಟಪಡದ ಹುಡುಗಿಯರೇ ಇಲ್ಲ. ತಾನು ಸುಂದರವಾಗಿ ಕಾಣಬೇಕು ಎಂಬ ಭಾವ ಹೆಂಗಳೆಯರ ಹುಟ್ಟುಗುಣ. ಪುಟ್ಟ ಹುಡುಗಿಯಾಗಿದ್ದಾಗಲೇ.. ಅಮ್ಮನ ಮೇಕಪ್‌ ಕಿಟ್‌ ಹಿಡಿದುಕೊಂಡು ತಾನೂ ಮೇಕಪ್‌ಮಾಡಿಕೊಳ್ಳೋ ಪ್ರಯತ್ನ ಮಾಡುವ ಮಕ್ಕಳನ್ನು ನಾವೆಲ್ಲ ನೋಡಿಯೇ ಇರುತ್ತೇವೆ.

ತಮ್ಮ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡಲು ಹುಡುಗಿಯರು ಮೇಕಪ್‌ನ ಮೊರೆ ಹೋಗೋದು ಸಹಜ ಕೂಡ. ಆದರೆ ತಾನು ಸುಂದರವಾಗಿ ಕಾಣಬೇಕೆಂಬ ಬಯಕೆ ಇದ್ದರೂ, ಹಲವರಿಗೆ ಬಹಳ ಮೇಕಪ್‌ಮಾಡಿಕೊಳ್ಳುವ ಮನಸ್ಸಿರುವುದಿಲ್ಲ. ಅಂಥವರಿಗಾಗಿ ಸಿಂಪಲ್‌ ಮೇಕಪ್‌ಟಿಪ್ಸ್‌ ಕೊಟ್ಟಿದ್ದೇವೆ. ಓದಿ.
ಮೇಕಪ್‌ಮಾಡಿಕೊಳ್ಳಲು ಪೌಡರ್ ಬಳಸಲೇ ಬೇಡಿ. ಪೌಡರ್ ಬದಲಾಗಿ ಜೆಲ್‌ಬ್ಲಶ್‌ ಅಥವಾ ಕ್ರೀಂ ಬ್ಲಶ್‌ಬಳಸಿ. ಇದು ಪೌಡರ್‌ಗಿಂತ ಹೆಚ್ಚು ಸಹಜ ಸೌಂದರ್ಯ ನೀಡಬಲ್ಲದು.

ಉದ್ದ ಬೆಳೆದ ನಿಮ್ಮ ಉಗುರಿಗೆ ಸ್ಕ್ವೇರ್‌ ಶೇಪ್‌ನೀಡಿ. ಸ್ವಚ್ಛಗೊಳಿಸಿ ಉಗುರಿಗೆ ನಿಮ್ಮ ಚರ್ಮಕ್ಕೊಪ್ಪುವ ಬಣ್ಣದ ಪಾಲಿಶ್‌ ಹಚ್ಚಿ. ನಂತರ ಉಗುರಿನ ಸುತ್ತ ಸ್ವಲ್ಪ ಹೆಚ್ಚು ಪ್ರಮಾಣದ ಎಣ್ಣೆಯಂಶ ಹೊಂದಿರುವ ಕ್ರೀಂ ಲೇಪಿಸಿ. ಇದರಿಂದ ಹೊಳೆಯ ಉಗುರಿನಿಂದಾಗಿ ನಿಮ್ಮ ಕೈ ಸುಂದರವಾಗಿ ಕಾಣುತ್ತದೆ.
ಹುಬ್ಬನ್ನು ಶೇಪ್‌ಮಾಡಿಸುವುದು ಈಗೀಗ ಸರ್ವೇಸಾಮಾನ್ಯ. ಆದರೆ ಬಹಳ ತೆಳ್ಳಗಿನ ಹುಬ್ಬು ಮುಖದ ಸೌಂದರ್ಯವನ್ನು ಹಾಳುಮಾಡುತ್ತದೆ. ಹೀಗಾಗಿ ಹುಬ್ಬಿಗೆ ಸ್ಪಲ್ಪವೇ ಶೇಪ್‌ಮಾಡಿಸಿ.

ನಿಮ್ಮ ಚರ್ಮಕ್ಕೆ ಒಪ್ಪುವ ಪೌಂಡೇಶನ್‌ ಕ್ರೀಮ್‌ನ್ನೇ ಖರೀದಿಸಿರಿ. ಚರ್ಮದ ಬಣ್ಣ ಹಾಗೂ ಗುಣಕ್ಕೆ ಅನುಗುಣವಾಗಿ ಸಾಕಷ್ಟು ವಿಧದ ಪೌಂಡೇಶನ್‌ ಕ್ರೀಂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಖರೀದಿಸುವ ಮುಂಚೆ ಸಾಮಾನ್ಯವಾಗಿ ಮುಂಗೈಗೆ ಹಚ್ಚಿ ಪರೀಕ್ಷಿಸಲಾಗುತ್ತದೆ, ಆದರೆ ಅದಕ್ಕಿಂತ ಕುತ್ತಿಗೆ ಮೇಲ್ಭಾಗದಲ್ಲಿ ಕ್ರೀಂ ಹಚ್ಚಿ ನಿಮ್ಮ ಚರ್ಮಕ್ಕೆ ಹೊಂದುತ್ತದೆಯೋ ಇಲ್ಲವೋ ಪರೀಕ್ಷಿಸಿಕೊಳ್ಳಿ. ಹಗಲು ಬೆಳಕಿನಲ್ಲಿಯೇ ಪೌಂಡೇಶನ್‌ ಕ್ರೀಂನ ಬಣ್ಣವನ್ನು ನಿರ್ಧರಿಸಿ. ಪೌಂಡೇಶನ್‌ಕ್ರೀಂ ಜೊತೆ ಒಂದು ಹನಿ ಮಾಶ್ಚರೈಸಿಂಗ್‌ ಕ್ರೀಮ್‌ನ್ನು ಸೇರಿಸಿ, ಅವೆರಡನ್ನೂ ಚನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ.

ಪೌಂಡೇಶನ್‌ಕ್ರೀಮ್‌ ಹಚ್ಚಿಕೊಂಡ ಮೇಲೆ, ಕಣ್ಣಿನ ಶೃಂಗಾರದಿಂದಲೇ ನಿಮ್ಮ ಮೇಕ್‌ಓವರ್‌ ಪ್ರಾರಂಭಿಸಿ. ಜಾಗ್ರತೆಯಿಂದ ಐ ಲೈನರ್‌ ಹಚ್ಚಿ, ಐ ಲೈನರ್‌ ಎರಡೂ ಕಣ್ಣಿಗೂ ಸಮಪ್ರಮಾಣದಲ್ಲಿರಲಿ. ಕಣ್ಣಿಗೆ ಪೆನ್ಸಿಲ್‌ಲೈನರ್‌ಗಿಂತ ಲಿಕ್ವಿಡ್ ಲೈನರ್‌ನ್ನು ಬಳಸುವುದು ಅತ್ಯುತ್ತಮ. ಯಾಕೆಂದರೆ ಪೆನ್ಸಿಲ್‌ಲೈನರ್ ಬಹುಬೇಗ ಹರಡಿಕೊಂಡು ಕಣ್ಣಿನ ಸುತ್ತ ಆವರಿಸುವ ಸಂಭವ ಹೆಚ್ಚು. ಆದರೆ ಲಿಕ್ವಿಡ್‌ಲೈನರ್‌ನಲ್ಲಿ ಇಂಥಹ ತೊಂದರೆ ಇರದು.
ಕಣ್ಣಿನ ಮೇಲಿನ ರೆಪ್ಪೆಗೆ ಮಾತ್ರ ಸ್ವಲ್ಪ ಮಾತ್ರ ಮಸ್ಕರಾ ಹಚ್ಚಿ. ಹಲವು ವಿಧದ ಮಸ್ಕರಾ ಲಭ್ಯವಿದೆ. ಕಣ್ಣಿನ ರೆಪ್ಪೆಗಳು ಉದ್ದುದ್ದವಾಗಿ ಕಾಣಲು ಬಳಸುವ ಲೆಂಥನಿಂಗ್‌ ಮಸ್ಕರಾ, ನೀರಿನಿಂದ ಮಾಸದ ವಾಟರ್‌ಪ್ರೂಫ್‌ ಮಸ್ಕರಾ, ರೆಪ್ಪೆಗಳು ಕಪ್ಪಾಗಿ,ದಟ್ಟವಾಗಿ ಕಾಣಲು ಉಪಯೋಗಿಸುವ ಥಿಕ್‌ನಿಂಗ್‌ ಮಸ್ಕರಾ ಮತ್ತು ರೆಪ್ಪೆಗಳು ಅಂಟದಂತೆ ನೋಡಿಕೊಳ್ಳಲು ಬಳಸುವ ನಾನ್‌ ಕ್ಲಂಪಿಂಗ್ ಮಸ್ಕರಾ ಹೀಗೆ ವಿವಿಧ ರೀತಿಯ ಮಸ್ಕರಾಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಅವುಗಳಲ್ಲಿ ನಿಮ್ಮ ಕಣ್ಣಿಗೆ ಯಾವುದು ಸೂಕ್ತವೋ ಅದನ್ನೇ ಖರೀದಿಸಿ ಉಪಯೋಗಿಸಿ.

ನಿಮ್ಮ ತುಟಿ ಒಣಗಲು ಯಾವಾಗಲೂ ಬಿಡಬೇಡಿ. ಆಗಾಗ ಲೈಪ್‌ಬಾಮ್‌ ಅಪ್ಲೈ ಮಾಡುತ್ತಿರಿ.

ಮಾಶ್ಚರೈಸ್‌ ಅಂಶ ಜಾಸ್ತಿ ಇರುವ ಲಿಪ್‌ಸ್ಟಿಕ್‌ನ್ನೇ ಆಯ್ಕೆ ಮಾಡಿಕೊಳ್ಳಿ. ಲಿಪ್‌ ಲೈನರ್‌ನಿಂದ ತುಟಿಗೆ ಶೇಪ್‌ ಕೊಟ್ಟು, ನಂತರ ಲಿಪ್‌ಸ್ಟಿ‌ಕ್‌ ಹಚ್ಚಿ. ಲಿಪ್‌ಸ್ಟಿಕ್‌ಗಿಂತಲೂ ಡಾರ್ಕ್‌ ಆಗಿರುವ ಲಿಪ್‌ಲೈನರ್‌ನ್ನು ಬಳಕೆ ಮಾಡಬೇಡಿ.

ನಿಮ್ಮ ಮುಖಕ್ಕೆ ಸರಿಹೊಂದುವ ಹೇರ್‌ಸ್ಟೈಲ್‌ನ್ನೇ ಆಯ್ಕೆ ಮಾಡಿಕೊಳ್ಳಿ. ಎರಡು ದಿನಕ್ಕೊಮ್ಮೆ ಕೂದಲು ತೊಳೆಯುತ್ತಿರಿ. ನಿಯಮಿತವಾಗಿ ಕೊಬ್ಬರಿ ಎಣ್ಣೆಯ ಮಸಾಜ್ ಮಾಡಿ.



Reference – beauty.about.com

 

Author : ಅಮೃತಾ ಹೆಗಡೆ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited