Untitled Document
Sign Up | Login    
ವಿವೇಕಾನಂದರಂತಹ ದೇಶಭಕ್ತರು ಜನಿಸಿದ ರಾಷ್ಟ್ರದಲ್ಲಿ ಮತಾಂಧರ ಹೆಸರಿನ ವಿಶ್ವವಿದ್ಯಾನಿಲಯ ಬೇಕೇ?

ಯುವ ಶಕ್ತಿಯ ಸಂಕೇತ ಸ್ವಾಮಿ ವಿವೇಕಾನಂದ

ಏಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ.......

ಸ್ವಾಮಿ ವಿವೇಕಾನಂದ..!

ಹೆಸರು ಕೇಳಿದರೆ ನರ ನಾಡಿಗಳಲ್ಲಿ ಮಿಂಚಿನ ಸಂಚಾರ. ಅವರೊಬ್ಬ ಯುವ ಶಕ್ತಿಯ ಜಾಗೃತ ಸ್ವರೂಪ... ಅವರನ್ನು ಸ್ಮರಿಸಿದರೆ ಯುವಕರಲ್ಲಿ ಜೀವನೋತ್ಸಾಹ ಪುಟಿದೇಳುತ್ತದೆ. ಭಾರತ ದೇಶದ ಸಂಸ್ಕೃತಿ, ಚರಿತ್ರೆಯನ್ನು, ಮತಾಂತರ ಮಾಡುವುದೇ ತಮ್ಮ ಮೂಲ ಧ್ಯೇಯವಾಗಿದ್ದ ಪಾಶ್ಚ್ಯಾತ್ಯರಿಗೆ ಮುಟ್ಟಿ ನೋಡಿಕೊಳ್ಳುವಂತೆ ಮನವರಿಕೆ ಮಾಡಿಕೊಟ್ಟಿದ್ದರು. ಅದಕ್ಕೆ ಅಲ್ಲವೇ ವಿಶ್ವ ಧರ್ಮ ಸಮ್ಮೇಳನದ ನಂತರ ಲಂಡನ್ ನ ಪತ್ರಿಕೆಯೊಂದರಲ್ಲಿ “Church should be ashamed for sending its preachers to India…” ಅಂತ ಬರೆದಿದ್ದು?.

ಭಾರತ, ಶತಮಾನಗಳ ಕಾಲ ಬ್ರಿಟಿಷರ ದಾಸ್ಯದಿಂದ ಬಳಲುತ್ತಿದ್ದರೂ ವಿದೇಶಗಳಲ್ಲಿ ತನ್ನ ಸಂಸ್ಕೃತಿ ಹಾಗೂ ಹಿರಿಮೆ ಪ್ರೌಢಿಮೆಗಳಿಂದ ಹೆಮ್ಮೆ ಪಡುವಂತಾಗಿದ್ದು ಸ್ವಾಮಿ ವಿವೇಕಾನಂದರಿಂದ. ಲಕ್ಷಾಂತರ ದೇಶಪ್ರೇಮಿಗಳ ತ್ಯಾಗದಿಂದ ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ ಸಿಕ್ಕಿತು. ಆದರೆ, ಸ್ವಾತಂತ್ರ್ಯ ಬರುವುದಕ್ಕೂ ಮುನ್ನವೇ ಜ್ನಾನ ಭಂಡಾರದಲ್ಲಿ ಭಾರತ ವಿಶ್ವ ಮಟ್ಟದಲ್ಲಿ ಅತ್ಯಂತ ಶ್ರೇಷ್ಠವಾದ ರಾಷ್ಟ್ರವಾದ ರಾಷ್ಟ್ರ ಎಂದು ಮನವರಿಕೆ ಮಾಡಿಕೊಟ್ಟವರು ಸ್ವಾಮಿ ವಿವೇಕಾನಂದ. ಅವರು ನಿಜವಾಗಿಯೂ ರಾಷ್ಟ್ರಪಿತ ಎಂದರೆ ತಪ್ಪಾಗಲಾರದು.

ಸನ್ಯಾಸಿಯಾಗಿದ್ದರೂ ವಿಶ್ವದಾದ್ಯಂತ ಸಂಚರಿಸಿ ಹಿಂದುತ್ವವೆಂಬುದು ಒಂದು ಧರ್ಮಕ್ಕಿಂತ ಮಿಗಿಲಾಗಿ, ಜೀವನ ವಿಧಾನವೂ ಹೌದು ಎಂದು ಇಡೀ ವಿಶ್ವಕ್ಕೆ ಹಿಂದುತ್ವದ ಮಹತ್ವ ಸಾರಿದರು. ಈ ಮೂಲಕ ಸಾಂಸ್ಕೃತಿಕ ರಾಷ್ಟ್ರೀಯತೆ ಎಂಬ ಹೊಸ ಕಲ್ಪನೆ ಕಟ್ಟಿಕೊಟ್ಟರು ವೀರ ಸನ್ಯಾಸಿ ವಿವೇಕಾನಂದರು.

ವಿವೇಕಾನಂದರು ದೇಶದ ಬಗ್ಗೆ ಯಾರಾದರೂ ತಪ್ಪು ಮಾತನಾಡಿದರೆ ಅವರನ್ನು ಸೌಮ್ಮನೆ ಬಿಡುವ ಔದಾರ್ಯತೆ ತೋರುತ್ತಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ವಿವೇಕಾನಂದರ ಒಂದು ಕಥೆ ಓದಿದ ನೆನಪು...

ಅವರು ವಿಶ್ವಧರ್ಮ ಸಮ್ಮೇಳನ ಮುಗಿಸಿ ಹಡಗಿನಲ್ಲಿ ವಾಪಸ್ಸಾಗುತ್ತಿರಬೇಕಾದರೆ ಮತಾಂತರ ಮಾಡುವ ಉದ್ದೇಶದಿಂದ ಇಬ್ಬರು ಪಾದ್ರಿಗಳು ಭಾರತಕ್ಕೆ ಹೊರಟಿದ್ದರು. ಈ ವೇಳೆ ವಿವೇಕಾನಂದರನ್ನು ಕಂಡು ಬಹಳ ಹಗುರವಾಗಿ ಮಾತನಾಡುತ್ತಾರೆ. ಆದರೆ ವಿವೇಕಾನಂದರು ಮರು ಮಾತನಾಡುವುದಿಲ್ಲ. ಮುಂದುವರೆದು ಪಾದ್ರಿಗಳು ಹಿಂದು ಧರ್ಮವನ್ನು, ಭಾರತೀಯರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಲು ಆರಂಭಿಸುತ್ತಾರೆ. ಇದರಿಂದ ಕೋಪಗೊಂಡ ವಿವೇಕಾನಂದರು ಪಾದ್ರಿಗಳಿಬ್ಬರ ಕುತ್ತಿಗೆ ಪಟ್ಟಿ ಹಿಡಿದೆಳೆದು, ‘ಭಾರತ ಹಾಗೂ ಭಾರತೀಯರ ಬಗ್ಗೆ ಇನ್ನೊಂದು ಕೆಟ್ಟ ಮಾತನಾಡಿದರೆ ಸಮುದ್ರಕ್ಕೆಸೆಯುತ್ತೇನೆ’ ಎಂದು ಎಚ್ಚರಿಸುತ್ತಾರೆ. ಬೆರಗಾದ ಪಾದ್ರಿಗಳು ಮರು ಮಾತನಾಡದೆ ತೆಪ್ಪಗಾಗುತ್ತಾರೆ. ಇದು ಭಾರತ, ಭಾರತೀಯರ ಬಗ್ಗೆ ವಿವೇಕಾನಂದರಿಗಿದ್ದ ಗೌರವ, ಅಭಿಮಾನ.

ಟಿಪ್ಪು ಸುಲ್ತಾನ
ಆದರೆ ಮಧ್ಯರಾತ್ರಿಯಲ್ಲಿ ಸ್ವಾತಂತ್ರ್ಯ ಗಿಟ್ಟಿಸಿಕೊಂಡ ನಮ್ಮ ನಾಯಕರು ತಮ್ಮ ಸ್ವಾರ್ಥಕಾಗಿ, ಸೌಲಭ್ಯ ವಂಚಿತರಿಗೆ ಸೌಲಭ್ಯ ಒದಗಿಸಿ ಅವರನ್ನು ಸದೃಢಗೊಳಿಸಿ ಸಮಾಜದಲ್ಲಿ ಸಮಾನರಾಗಿ ಬದುಕಲು ಅವಕಾಶ ನೀಡುವ ಬದಲು, ಕೆಲಸಕ್ಕೆ ಬಾರದ ರಿಸರ್ವೇಷನ್ ನೀಡಿದರು.

ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗ ನೀಡಿ ಸ್ವಾವಲಂಬಿಗಳನ್ನಾಗಿಸಿ, ಯುವ ಶಕ್ತಿಯನ್ನು ಸದೃಢಗೊಳಿಸುವ ಬದಲು ನಿರುದ್ಯೋಗ ಬತ್ಯೆ ನೀಡುವ ಮೂಲಕ ಸೋಮಾರಿಗಳನ್ನಾಗಿ ಮಾಡಿದರು. ಪರಿಣಾಮ, ಅದೆಷ್ಟೋ ಪ್ರತಿಭೆ ಇಲ್ಲದವರು ನಮ್ಮ ದೇಶದ ನೇತಾಗಳಾಗಿ, ಜನ ಪ್ರಮುಖ ನಿರ್ಧಾರ ಕೈಗೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟರು.

ಇವೆಲ್ಲದರ ಪರಿಣಾಮ ಗುರುವಿಲ್ಲದ, ಗುರಿ ಹೊಂದಿರದ ಹಾದಿಯಲ್ಲಿ ನಮ್ಮ ದೇಶ ಸಾಗುತ್ತಿದೆ. ನಿಂತಿದ್ದೇವೆ. ಅದಿರಲಿ, ಕನಿಷ್ಠ ಇಂದು 'ಮಾರ್ಡನೈಜ್' ಆಗುತ್ತಿರುವ ಯುವ ಪೀಳಿಗೆಗೆ ಅಖಂಡ ಭಾರತದ ಮೌಲ್ಯಗಳು ಅರ್ಥವಾಗದೆ ಸನಾತನ ಧರ್ಮ ಬಹುತೇಕ ಮಸುಕಾಗುತ್ತಿದ್ದು ಅಳಿವಿನ ಅಂಚಿನಲ್ಲಿದೆಯೇ? ಎಂಬ ಆತಂಕ ಕಾಡುತ್ತಿದೆ.

ನಾವು ಹಿಂದೂಗಳನ್ನು ಮತಾಂತರಗೊಳಿಸಿ ದೇಶಕ್ಕೆ ಶತ್ರುಗಳನ್ನು ನೀಡಲು ಪಣ ತೊಟ್ಟವರ ಹೆಸರಿನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆಯ ಬಗ್ಗೆ ಚಿಂತಿಸುವಷ್ಟು ನೈತಿಕ ಅಧ:ಪತನಕ್ಕಿಳಿದಿದ್ದೇವೆಯೇ? ಹಾಗಾದರೆ ವಿವೇಕಾನಂದರ ಆದಿಯಾಗಿ ಅನೇಕ ಮಾಹಾನುಭಾವರು ಕಂಡಿದ್ದ ಭಾರತದ ಕನಸು ಕಮರಿಹೋಗುತ್ತಿದೆಯೇ...?
ಇಷ್ಟಕ್ಕೂ ಮುಸ್ಲಿಂ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪಿಸುವುದಕ್ಕೆ ಭಾರತಕ್ಕೆ ಅವರ ಕೊಡುಗೆ ಏನು? ವಿಶ್ವವಿದ್ಯಾನಿಲಯ ಸ್ಥಾಪಿಸುವುದಾದರೂ ಯಾವ ಉದ್ದೇಶಕ್ಕೆ? ಇತ್ತೀಚೆಗಷ್ಟೇ ಯಾವುದೇ ಕಾರಣವಿಲ್ಲದೆ ಹಿಂದೂಗಳ ಮಾರಣ ಹೋಮ ಮಾಡುತ್ತೇವೆ ಎಂದು ಮತಾಂಧ ಶಾಸಕನೊಬ್ಬ ಮಾತನಾಡಿದಾಗ ಕನಿಷ್ಠ ಅದನ್ನು ಪ್ರಶ್ನಿಸುವ ಮನೋಭಾವನೆಯನ್ನೂ ತಳೆಯದೆ ಸುಮ್ಮನೆ ಕುಳಿತುಕೊಳ್ಳುವಷ್ಟು ಬೇಜವಾಬ್ದಾರಿ ನಮಗೆ.

ಯಾವುದೇ ಒಬ್ಬ ಹಿಂದು, ಮುಸ್ಲಿಂ ಬಗ್ಗೆ ಒಂದು ಸಣ್ಣ ಹೇಳಿಕೆ... ಬೇಡ, ಮುಸ್ಲಿಂ ವಿಶ್ವವಿದ್ಯಾನಿಲಯ ಸ್ಥಾಪಿಸುವ ಬಗ್ಗೆ ವಿರೋಧ ವ್ಯಕ್ತಪಡಿಸಿದರೆ ಅದಕ್ಕೆ ಕೋಮುವಾದದ ಬಣ್ಣ ನೀಡುವ ಬುದ್ಧಿ ಜೀವಿಗಳು ನಮ್ಮ ಸಂಸ್ಕೃತಿಯ ವಕ್ತಾರರೇ? ಪ್ರಚಾರದ ಲಾಲಸೆಗಾಗಿ ಈ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಒಬ್ಬ ಅಕ್ಬರುದ್ದೀನ್ ಒವೈಸಿ ಹಿಂದೂಗಳ ವಿರುದ್ಧ ಮಾತನಾಡಿದರೆ ಅದು ಕೋಮುವಾದ ಅಲ್ಲ, ಅದೇ, ಮುಸ್ಲಿಂ ಧರ್ಮದ ಬಗ್ಗೆ ಯಾವುದೇ ಹಿಂದೂ ಮಾತನಾಡಿದರೆ ಅದು ಕೋಮುವಾದ ಎನ್ನುತ್ತಾರೆ. ಆದರೆ ಈ ಬಗ್ಗೆ ಬುದ್ದಿ ಜೀವಿಗಳು ಮಾತ್ರ ತುಟಿ ಬಿಚ್ಚುವುದಿಲ್ಲ.

ನಮ್ಮನ್ನು ಆಳಿದ ಬ್ರಿಟೀಷರಿಂದ ನಮಗೆ ಹಲವು ಬಳುವಳಿ ಬಂದಿವೆ. ಅದರಲ್ಲಿ ನಾವು ಕೆಲವನ್ನು ಮರೆತಿದ್ದೇವೆ, ಇನ್ನೂ ಹಲವನ್ನು ರೂಢಿಸಿಕೊಂಡಿದ್ದೇವೆ. ಪ್ರಮುಖವಾಗಿ ದೇಶಕ್ಕೆ ಮಾರಕವಾದ 'ಒಡೆದು ಆಳುವ' ನೀತಿ, ಅಲ್ಪ ಸಂಖ್ಯಾತ-ಬಹುಸಂಖ್ಯಾತ ಎಂಬ ಭೇಧಭಾವನೆಗಳನ್ನು ಅಳವಡಿಸಿಕೊಂಡಿದ್ದು, ಇಂದಿಗೂ ನಮ್ಮ ರಾಜಕಾರಣಿಗಳು ಇದೇ ನೀತಿಯನ್ನು ನಡೆಸಿಕೊಂಡು ಬಂದಿದ್ದಾರೆ.

ಬ್ರಿಟೀಷರು ಭಾರತಕ್ಕೆ ಆಗಮಿಸುವ ಮೊದಲು ಸಹ ಕೆಲ ಬುದ್ದಿ ಜೀವಿಗಳು, "ವಿನಾಶ ಕಾಲೇ ವಿಪರೀತ ಬುದ್ದಿ" ಎಂಬಂತೆ ನಮ್ಮ ದೇಶದ ಬಗೆಗಿದ್ದ ಅಭಿಮಾನ ಮಾರಿಕೊಂಡ ಪರಿಣಾಮ ಮುಸ್ಲಿಂ ಆದಿಯಾಗಿ ಬ್ರಿಟೀಷರು ನಮ್ಮ ಮೇಲೆ ಶತಮಾನಗಳ ಕಾಲ ದಬ್ಬಾಳಿಕೆ ನಡೆಸಿ ಜ್ನಾನ ಸಂಪತ್ತು, ಸಂಮೃದ್ಧಿ, ಸಂಸ್ಕೃತಿಗೆ ಹೆಸರಾಗಿದ್ದ ಭಾರತವನ್ನು ಕೊಳ್ಳೆಹೊಡೆದರು. ಸಾಲದೆಂಬಂತೆ ಇಲ್ಲಿನ ದೇವಾಲಯಗಳನ್ನು ನಾಶ ಮಾಡಿದರು. ಇಷ್ಟೆಲ್ಲಾ ಮಾಡಿದವರ ಹೆಸರಿನಲ್ಲಿ ನಮಗೆ ವಿಶ್ವವಿದ್ಯಾಲಯ ಬೇಕೆ?
ಅದಿರಲಿ, ಟಿಪ್ಪು ಒಬ್ಬ ಮಹಾನ್ ದೇಶ ಭಕ್ತ, ಹಿಂದೂ ದೇವಾಲಯಗಳಿಗೆ ಸಾಕಷ್ಟು ಹಣ ನೀಡಿದ್ದಾನೆ ಎನ್ನುತ್ತಾರೆ. ಆದರೆ ಒಬ್ಬ ದೇಶ ಭಕ್ತ ಎಂದಿಗೂ ಮತಾಂತರ ಮಾಡುವ ನೀಚ ಕೆಲಸ ಮಾಡುವುದಿಲ್ಲ. ಇನ್ನು ಹಿಂದೂ ದೇವಾಲಯಗಳಿಗೆ ಸಾಕಷ್ಟು ಹಣ ನೀಡಿದ್ದಾನೆ ಎನ್ನುವುದಕ್ಕೆ, ನಮ್ಮ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ನಮ್ಮ ದೇವಾಲಯಗಳಿಗೆ ಕೊಡುಗೆ ನೀಡುವುದು ಒಂದು ಹೆಮ್ಮೆಯ ಸಂಗತಿಯೇ?

ಮಾತೆತ್ತಿದರೆ ಅಲ್ಪಸಂಖ್ಯಾತರ ಪರ ವಕಾಲತ್ತು ವಹಿಸುತ್ತಿರುವವರು, ನಾವು ಅಲ್ಪ ಸಂಖ್ಯಾತರ ದೇಶಕ್ಕೆ ವಲಸೆ ಹೋಗಿ ಬದುಕುತ್ತಿಲ್ಲ, ಬದಲಾಗಿ ನಮ್ಮ ದೇಶಕ್ಕೆ ಅವರು ಬಂದು ಬದುಕುತ್ತಿದ್ದಾರೆ ಎಂಬ ಸತ್ಯವನ್ನು ಮರೆತಿರುವಹಾಗಿದೆ. ಒಬ್ಬ ಬಾಬರ್ ಅನ್ಯದೇಶದಿಂದ ಬಂದು ನಮ್ಮ ದೇಶಕ್ಕೆ ಶೂನ್ಯ ಕೊಡುಗೆ ನೀಡಿದ. ಅಂಥವರನ್ನು ಅಲ್ಪಸಂಖ್ಯಾತರ ಪಟ್ಟ ನೀಡಿ ಓಲೈಸುವುದಾದರೆ, ವ್ಯಾಪಾರಕ್ಕೆಂದು ಆಗಮಿಸಿ ಕೆಲ ದೇಶದ್ರೋಹಿಗಳ ಸಹಾಯದಿಂದ ನಮ್ಮ ಮೇಲೆ ಶತಮಾನಗಳ ದಬ್ಬಾಳಿಕೆ ನಡೆಸಿದ ಬ್ರಿಟೀಷರು ಇಲ್ಲಿಗೆ ಬಂದರೆ ಅವರಿಗೂ ಅಲ್ಪಸಂಖ್ಯಾತರ ಪಟ್ಟ ನೀಡಿ ಇಡೀ ದೇಶವನ್ನು ಮಾರಾಟ ಮಾಡಲೂಬಹುದು.

ಸನಾತನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಬಿಗಿಯುತ್ತಾ ಸಮಾನತೆಯ ಮಾತನಾಡಿ, ಪ್ರತ್ಯೇಕ ಮತೀಯ ವಿಶ್ವವಿದ್ಯಾನಿಲಯ ಸ್ಥಾಪಿಸಲು ಪ್ರೋತ್ಸಾಹಿಸುವುದು ಸಭ್ಯತೆಯೇ? ಒಂದು ವೇಳೆ ಪ್ರತ್ಯೇಕ ಮತೀಯ ವಿಶ್ವವಿದ್ಯಾನಿಲಯ ಸ್ಥಾಪಿಸುತ್ತಿಲ್ಲ ಎಂದಾದರೆ ಅದಕ್ಕೆ ಟಿಪ್ಪು ಹೆಸರನ್ನು ಯಾಕೆ ಇಡಬೇಕು. ಈ ದೇಶ ಹೆಮ್ಮೆಪಡುವ ಸ್ವಾತಂತ್ರ್ಯ ಹೋರಾಟಗಾರ, ಮಹಾನ್ ವ್ಯಕ್ತಿಗಳ, ದಾರ್ಶನಿಕರ ಹೆಸರನ್ನು ಏಕೆ ಸೂಚಿಸಬಾರದು?

1193ರಲ್ಲಿ ಭಕ್ತಿಯಾರ್ ಖಿಲ್ಜಿಯ ನೇತೃತ್ವದಲ್ಲಿ ಟರ್ಕಿಯ ಮುಸ್ಲಿಮ್ ಧಾಳಿಕೋರರು ವಿದೇಶಿ ಪಂಡಿತರು, ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದ ಇತಿಹಾಸದ ಪುಟಗಳಲ್ಲಿ ನಮೂದಿತವಾದ ಮೊದಲ, ಭಾರತ ದೇಶದ ಉನ್ನತ ವ್ಯಾಸಂಗ ಕೇಂದ್ರಕ್ಕೆ ಹೆಸರುವಾಸಿಯಾಗಿದ್ದ ನಳಂದ ವಿಶ್ವವಿದ್ಯಾನಿಲಯವನ್ನು ನಾಶಪಡಿಸಿದರು.

ಪರ್ಶಿಯಾದ ಚರಿತ್ರೆಕಾರ ಮಿನ್‌ಹಾಜ್-ಐ-ಸಿರಜ್, ಅವರ ಐತಿಹಾಸಿಕ ದಾಖಲೆ ಟಬಾಕ್ವತ್-ಐ-ನಸಿರಿ ಪ್ರಕಾರ, ಬೌದ್ಧಮತವನ್ನು ಕಿತ್ತುಹಾಕಿ ಇಸ್ಲಾಮ್ ಧರ್ಮವನ್ನು ಸ್ಥಾಪಿಸಲು ಖಿಲ್ಜಿ ಮಾಡಿದ ಪ್ರಯತ್ನದಲ್ಲಿ ಸಾವಿರಾರು ಸನ್ಯಾಸಿಗಳನ್ನು ಜೀವಂತ ಸುಡಲಾಯಿತು. ಇನ್ನೂ ಸಾವಿರಾರು ಸನ್ಯಾಸಿಗಳ ಶಿರಚ್ಛೇದ ಮಾಡಲಾಯಿತು. ಪ್ರಸ್ತುತ ಈ ವಿಶ್ವವಿದ್ಯಾಲಯದ ಪುನಶ್ಚೇತನದ ಹಾದಿಯಲ್ಲಿದೆ.

ಈ ರೀತಿ ನಮ್ಮ ದೇಶವದ ಜ್ನಾನ ಭಂಡಾರವನ್ನು ನಾಶ ಮಾಡಿದ, ದೇಶ ಪ್ರೇಮದ ಹೆಸರಿನಲ್ಲಿ ಮತಾಂತರ ಮಾಡಿದ ಮತಾಂಧನ ಹೆಸರನ್ನು ಮುಂದಿನ ಪೀಳಿಗೆಗೆ ವಿದ್ಯೆ ಕಲಿಸುವ ವಿಶ್ವವಿದ್ಯಾನಿಲಯಕ್ಕೆ ನೀಡುವುದು ಎಷ್ಟರ ಮಟ್ಟಿಗೆ ಸಮಂಜಸ?
ವಿಪರ್ಯಾಸವೆಂದರೆ ಸಮಾಜವನ್ನು ಸುಧಾರಿಸಲು ಅವತರಿಸಿದ ಮಹಾಪುರುಷರಾದ ಸ್ವಾಮಿ ವಿವೇಕಾನಂದ, ಶ್ರೇಷ್ಠ ಕವಿ ಕುವೆಂಪು, ದೇಶವೇ ಮೆಚ್ಚಬೇಕಾದ ಅದೆಷ್ಟೋ ವಿಜ್ನಾನಿಗಳು, ನಾಯಕರು, ಆದರ್ಶವ್ಯಕ್ತಿಗಳು ನಿಜವಾದ ಸಮಾನತೆಯನ್ನು ಪ್ರತಿಪಾದಿಸಿ ಒಬ್ಬರ ಸಿದ್ದಾಂತಗಳನ್ನು ಒಬ್ಬರು ಅರ್ಥಮಾಡಿಕೊಂಡು Inclusive ಆಗೇ ಉಳಿದರು.

ಅವರನ್ನು ಹಿಂಬಾಲಿಸುತ್ತಿರುವ ನಾವು ಅವರನ್ನು ಅರ್ಥಮಾಡಿಕೊಳ್ಳಲು ಇನ್ನೂ ಸಾಧ್ಯವಾಗದೆ ದೇಶದೆಡೆಗೆ ಕಿಂಚಿತ್ತು ಗೌರವ ತೋರದೆ ಮನಸೋ ಇಚ್ಚೆ ವರ್ತಿಸುತ್ತಾ, ಸನಾತನ ಧರ್ಮವನ್ನು ಅಲ್ಲಗಳೆಯುತ್ತಾ, ಅಂಧಕಾರದಲ್ಲಿದ್ದೇವೆ. ಇನ್ನೂ ವಿಪರ್ಯಾಸವೆಂದರೆ ಇಂದಿಗೂ ಸಹ ಕೆಲ ಬುದ್ದಿ ಜೀವಿಗಳು inclusive ಆಗಿರಲು ಹೋಗಿ ಯಾವುದೋ ಒಂದು ಧರ್ಮಕ್ಕೆ Exclusive ಆಗಿದ್ದಾರೆ!

ನಿಜವಾಗಿಯೂ ನಾವು ನಮ್ಮ ದೇಶವನ್ನು ಗೌರವಿಸುವುದೇ ಆದರೆ, ದೇಶದ ಒಳಿತನ್ನು ಬಯಸುವುದಾದರೆ, ಸ್ವಾಮಿ ವಿವೇಕಾನಂದರಂತಹ ಆದರ್ಶಪ್ರಾಯ ವ್ಯಕ್ತಿಗಳ ತತ್ವವನ್ನು ಅರ್ಥಮಾಡಿಕೊಂಡು ಮುಂದಡಿ ಇಡಬೇಕಾಗಿದೆ.


ಸೂ.:ಲೇಖನದಲ್ಲಿ ಮಂಡಿಸಿದ ಅಭಿಪ್ರಾಯ ಲೇಖಕರದ್ದೇ ಆಗಿರುತ್ತದೆ - ಸಂ.

 

Author : Srinivas rao

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited