Untitled Document
Sign Up | Login    
ಓ ಗುರುವೇ, ನಿನಗೆ ಸಾವಿರ ನಮನ..

ಡಾ.ಸರ್ವಪಲ್ಲಿ ರಾಧಕೃಷ್ಣನ್

ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ. ಹೌದು, ಗುರುವೆಂದರೇ ಹಾಗೆ.. ಆತ ಕೇವಲ ಪುಸ್ತಕದಲ್ಲಿದ್ದನ್ನು ವಿದ್ಯಾರ್ಥಿಗಳಿಗೆ ಒಪ್ಪಿಸುವವನಲ್ಲ.. ಗುರುವೆಂದರೆ ಶಿಷ್ಯಂದಿರಿಗೆ ಮೌಲ್ಯಾಧಾರಿತ ಜೀವನ ಶಿಕ್ಷಣ ನೀಡುವ ದೈವಸ್ವರೂಪಿ. ವಸುವಿನಂತಿದ್ದ ಮನುಷ್ಯನನ್ನು ಕ್ಯಗೆ ಸಿಕ್ಕ ಮಣ್ಣಿನ ಮುದ್ದೆಯಂತೆ ತಿದ್ದಿ ತೀಡಿ ಒಂದು ಸುಂದರ ರೂಪಕೊಡುವ ಶಿಲ್ಪಿ ಅವನು. ಬೆಳೆಯುವ ಸಿರಿಯನ್ನ ಮೊಳಕೆಯಲ್ಲೆ ಗುರುತಿಸಿ ನೀರೆರುಯುವನಾತ.

ಗುರುವೆಂದರೆ ಆತ ಕೇವಲ ಶಿಕ್ಷಕನಲ್ಲ. ಒಬ್ಬ ನಿಸ್ವಾರ್ತ ಮಾರ್ಗದರ್ಶಿಯೇ ನಿಜವಾದ ಗುರು. ತಪ್ಪು ಮಾಡಿದಾಗ ಬುದ್ದಿ ಹೇಳಿ, ಯಶಸ್ಸಿನೆಡೆಗಿನ ಯತ್ನಕ್ಕೆ ಹುರಿದುಂಬಿಸುವವನು. ಗುರು ಶಿಷ್ಯನ ಸಂಬಂದ ಯಾವತ್ತಿದ್ದರೂ ಪವಿತ್ರ. ಆ ಆದರ್ಶ ಬಾಂದವ್ಯ ಉಜ್ವಲ ಭವಿಷ್ಯಕ್ಕೆ ದಾರಿದೀಪ. ಪ್ರತಿಯೊಬ್ಬರ ಬದುಕಿನಲ್ಲೂ ಶಿಕ್ಷಕರದು ಒಂದು ಪ್ರಮುಖ ಪಾತ್ರ. ಹಾಗಂತ ಎಲ್ಲ ಅಧ್ಯಾಪಕರೂ ಮನದಲ್ಲಿ ಅಚ್ಚಳಿಯದೆ ಉಳಿಯುದಿಲ್ಲ. ಅದರಲ್ಲಿ ಕೆಲವರು ಮಾತ್ರ ನಮ್ಮ ಬದುಕಲ್ಲಿ ಎಂದೂ ಮರೆಯದ ಹಾಡಿನಂತೆ ಸದಾ ನಮ್ಮ ಮನದಲ್ಲಿ ನೆಲೆದು ಕ್ಷಣ ಕ್ಷಣಕ್ಕೂ ನೆನೆಸಿಕೊಳ್ಳುವ ಬಾಳಿನ ಬೆಳಕಾಗಿ ಅಮೂರ್ತ ದ್ರೋಣರಂತಿರುತ್ತಾರೆ.
ಯಾಕೆಂದರೆ, ಅವರು ನಮ್ಮ ತಪ್ಪನು ತಿದ್ದಿ ಬುದ್ದಿ ಹೇಳುವಾಗ ನಾವು ನಮ್ಮ ಕಾಲಿಗೆ ಬುದ್ದಿ ಹೇಳಿರುತ್ತೇವೆ. ಕೊಟ್ಟ ಕೆಲಸ ಮಾಡಲು ಆಗದೆ ಅವರು ನಮ್ಮ ಬೆನ್ನ ಹಿಂದೆ ಬಂದಾಗ ರಂಗೋಲಿ ಅಡಿ ನುಸುಳಲು ಯತ್ನಿಸಿದ್ದೇವೆ. ಇದೆಲ್ಲವುಗಳು ನಮಗೆ ಜ್ನಾನ ನೈವೇದ್ಯೆ ನೀಡಿದ ಶಿಕ್ಷಕರನ್ನು ಕಣ್ಣ ಮುಂದೆ ತರುತ್ತವೆ!.
ಸೆಪ್ಟೆಂಬರ್ 5 ಶಿಕ್ಷಕರ ದಿನ. ದೇಶದ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಕೃಷ್ಣನ್ ಜನ್ಮದಿನ. ಅದಕ್ಕೂ ಮೊದಲು ಯಶಸ್ವಿ ಶಿಕ್ಷಕರಾಗಿದ್ದ ಅವರು ತಮ್ಮ ಜನ್ಮದಿನವನ್ನು ಶಿಕ್ಷರಿಗಾಗಿ ಮೀಸಲಿಟ್ಟರು. ವಿದ್ಯಾರ್ಥಿಗಳ ಸರ್ವತೋಮುಖ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸುವ ಶಿಕ್ಷಕರಿಗೆ ನಮ್ಮದೊಂದು ಶಿಕ್ಷಕರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು. ನಮ್ಮನ್ನು ತಿದ್ದಿ ತೀಡಿ, ಜೀವನವನ್ನೆದುರಿಸಲು ಅಣಿಯಾಗಿಸಿದ ಗುರುಗಳಿಗೆ ಸಾವಿರ ನಮನಗಳು.

 

Author : Deeksha Harkuru

Author's Profile

I am very passionate about writing...

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited