Untitled Document
Sign Up | Login    
ಕಲಾ ಮೋಡಿಗಾರ ಧನಂಜಯ ಮರ್ಕಂಜ


ಪ್ರತಿಭೆ ಒಂದು ಕಲೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದಲ್ಲ ಒಂದು ಪ್ರತಿಭೆ ಇದ್ದೆ ಇರುತ್ತದೆ. ಪ್ರತಿಭೆಯ ಹಿಂದೆ ಶ್ರಮ ಅಗತ್ಯ. ಅದೇ ರೀತಿ ’ಧನಂಜಯ ಮರ್ಕಂಜ’ರವರ ಚಿತ್ರಕಲೆಯು ಅದ್ಬುತ ಪ್ರತಿಭೆಯನ್ನು ತಮ್ಮಲ್ಲಿ ಮೈಗೂಡಿಸಿಕೊಂಡಿದ್ದಾರೆ. ಅವರ ಪ್ರತಿಯೊಂದು ಕಲೆಯೂ ಎಲ್ಲರ ಮನಸೆಳೆಯುತ್ತದೆ.

ಮೂಲತಃ ಕೃಷಿ ಕುಟುಂಬದಲ್ಲಿ ಬೆಳೆದು ಬಂದ ಧನಂಜಯ ರವರು ಚಿತ್ರಕಲಾ ವೃತ್ತಿಯಲ್ಲಿ ಸುಮಾರು ಹತ್ತು ವರ್ಷಸೇವೆ ಸಲ್ಲಿಸಿದರು. ಮೂರು ವರ್ಷ ಚೊಕ್ಕಾಡಿಯ ಸತ್ಯಸಾಯಿ ನಂತರ ವಿದ್ಯಾರಶ್ಮಿ ವಿದ್ಯಾಲಯ ಸವಣೂರಿನಲ್ಲಿ ಪ್ರಸ್ತುತ ಸೇವೆಯಲ್ಲಿ ನಿರತರಾಗಿದ್ದಾರೆ. ಇವರು ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಬೋಧನೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಂಗ ಸ್ಪರ್ಶ ಕಲಾತಂಡದ ಸದಸ್ಯ. ಪ್ರಸ್ತುತವಾಗಿ ಪ್ರಾಥಮಿಕ ಮತ್ತು ಡಿ.ಎಡ್ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಾರೆ. ಶಿಕ್ಷಕ ವ್ಯಕ್ತಿ ಆಸಕ್ತಿದಾಯಕ ಎಂದು ಹೇಳುತ್ತಾರೆ. ಧನಂಜಯ ಮರ್ಕಂಜ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಚೆನ್ನಪ್ಪ ಗೌಡ ಲಿಲಾವತಿ ದಂಪತಿ ಪುತ್ರ. ಇವರು ಮರ್ಕಂಜದಲ್ಲಿ ಶಿಕ್ಷಣ ಪಡೆದು ಸುಬ್ರಹ್ಮಣ್ಯದಲ್ಲಿ ಡಿಪ್ಲೋಮೊ ನಂತರ ಮಹಾಲಸ ಆರ್ಟ್ ಕಲಾ ಶಿಕ್ಷಣ ಮಂಗಳೂರಿನಲ್ಲಿ ಪಡೆದರು.
ಇವರ ಚಿತ್ರಕಲೆಯಲ್ಲಿ ಥರ್ಮೊಪೋವರ್, ಜಲವರ್ಣ, ತೈಲವರ್ಣ, ಥರ್ಮಕೋಲು, ಇನ್ಮಾರ್ಕ್, ಪೆನ್ಸಿಲ್ ಮತ್ತು ಕಸದಿಂದ ರಸ ಹೀಗೆ ಅನೇಕ ರೀತಿಯಲ್ಲಿ ತನ್ನದೇ ಆದ ಶೈಲಿಯನ್ನು ಕ್ರಿಯೇಟಿವ್ ಆರ್ಟ್ನಲ್ಲಿ ಮುಂದುವರಿಸಿದ್ದಾರೆ. ವೇದಿಕೆ ಅಲಂಕಾರದಲ್ಲಿ ಪ್ರೌಡಿಮೆಯನ್ನು ಮೆರೆದಿದ್ದಾರೆ. ಪುತ್ತೂರಿನಲ್ಲಿ ನಡೆದ ವಿಭಾಗ ಮಟ್ಟದ ಯುವ ಜನ ಮೇಳ, ಅಖಿಲಭಾರತೀಯ ತುಳು ಸಮ್ಮೇಳನ, ನಾಡಿನಾದ್ಯಂತ ರಂಗಸಜ್ಜಿಕೆ ಮಾಡಿದ ಕೀರ್ತಿ ಇವರಿಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ೧ ವಿರೇಂದ್ರ ಹೆಗ್ಡೆ ಯವರು ಅಭಿನಂದಿಸಿದ್ದಾರೆ. ೩ಡಿ ಪ್ರೋಜೆಕ್ಟ್ ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕ್ರತಿಯ ೨ ಅಡಿ ಉದ್ದ ೨೬ ಅಡಿ ಅಗಲ ಮತ್ತು ಕುಂಚದ ಕಲಾವಿದನಾಗಿ ಗಡಿನಾಡ ಉತ್ಸವ ಮಂಡೇಕೋಲು, ಸವಣೂರು ತುಳುಸಮ್ಮೇಳನ ಜೊತೆಗೆ ಮುಖಪುಟ ವಿನ್ಯಾಸ ಗ್ಲಾಸ್ ಮಾರ್ಕ್ ,ಪೆನ್ಸಿಲ್, ಜಲವರ್ಣ ಮುಂತಾದರಲ್ಲಿ ಕಲಾ ಸಂಸ್ಕ್ರತಿಯನ್ನು ಬಿಂಬಿಸಿದ್ದಾರೆ.
ಶಿವಮೊಗ್ಗದ ತುಮಾರಿ ಕಿನ್ನರಿ ಮೇಳ ನಾಟಕ ತರಬೇತಿ, ಚಿಕನ್ ಗುನ್ಯ ಪ್ಯಾನ್ಸಿ ಡ್ರೇಸ್ನಲ್ಲಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದರು. ಕರ್ನಾಟಕ ಕಲೆ ಪ್ರದೇಶಾಭಿವೃದ್ದಿ ಪ್ರಾಧಿಕಾರ ದಕ್ಷಿಣ ಕನ್ನಡ ಜಿಲ್ಲಾಡಳಿತ ಸುಳ್ಯ, ಅಖಿಲ ಭಾರತ ತುಳು ಸಮ್ಮೇಳನ ಸವಣೂರು, ಪುತ್ತೂರು ಶೈಕ್ಷಣಿಕ ಕಾರ್ಯಕ್ರಮದಲ್ಲಿ ಮತ್ತು ಶಿಕ್ಷಕರ ದಿನಾಚರಣೆ ಕಲ್ಯಾಣನಿಧಿ ಹೀಗೆ ಹಲವು ರೀತಿಯಲ್ಲಿ ಸನ್ಮಾನಿತರಾಗಿದ್ದಾರೆ. ಇವರಲ್ಲಿ ಚಿತ್ರಕಲೆ ಮಾತ್ರವಲ್ಲದೆ ಅನೇಕ ಹವ್ಯಾಸಗಳು ಅಡಗಿಕೊಂಡಿವೆ. ಚಿತ್ರಕಲೆ, ಬಿದಿ ನಾಟಕ, ಯಕ್ಷಗಾನ, ಕರಕುಶಲತೆ ಮೊದಲಾದವುಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

 

Author :  

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited